By Village Missionary Movement
Thursday, 20-Mar-2025ಧೈನಂದಿನ ಧ್ಯಾನ(Kannada) – 20.03.2025
ನಗು
"ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ;...." - ಫಿಲಿಪ್ಪಿ 4:4
ಮಾರ್ಚ್ 20 ಎಂದ ಕೂಡಲೇ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ದಿನವಾಗಿದೆ. ಇದು ಅಂತರರಾಷ್ಟ್ರೀಯ ಸಂತೋಷದ ದಿನ. (International day of Happiness). ನಗುವುದು ಮನುಷ್ಯರಿಗೆ ಮಾತ್ರ ಗೊತ್ತು! ಭಾಷೆ ಗೊತ್ತಿಲ್ಲದ ಸ್ಥಳದಲ್ಲೂ ಸಹ, ನಿಮ್ಮ ಸಣ್ಣ ನಗು ಇತರರನ್ನು ನಿಮ್ಮತ್ತ ಆಕರ್ಷಿಸಿ ಬಿಡುತ್ತದೆ. ನೀವು ಚೆನ್ನಾಗಿ ನಗುವಾಗ ಏನಾಗುತ್ತದೆ ಎಂದು ನಿಮಗೆ ಗೊತ್ತಾ? ನಿಮ್ಮ ದೇಹವು 45 ನಿಮಿಷ ರಿಲಾಕ್ಸ್ ಆಗಿ ಇರುತ್ತದೆ. ಒತ್ತಡದ ಹಾರ್ಮೋನುಗಳು ಕಡಿಮೆಯಾಗುತ್ತವೆ. ಇದು ದೇಹಕ್ಕೆ ಪ್ರಯೋಜನಕಾರಿ ಹಾರ್ಮೋನುಗಳಾದ ಎಂಡಾರ್ಫಿನ್‌ಗಳು ಮತ್ತು ಸಿರೊಟೋನಿನ್‌ಗಳನ್ನು ಹೆಚ್ಚಿಸುತ್ತದೆ, ನೋವು ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಹಗುರಗೊಳಿಸುತ್ತದೆ. ನಮ್ಮ ಸತ್ಯವೇದವು ಸಹ ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ ಎಂದೇ ಹೇಳುತ್ತದೆ.
ಸತ್ಯವೇದದಲ್ಲಿ ನಗು ಎಂಬ ಅರ್ಥವುಳ್ಳ ವ್ಯಕ್ತಿ ಇಸಾಕನು. ದೇವರು ಅಬ್ರಹಾಮನನ್ನು, "ನಾನು ನಿನ್ನನ್ನು ಆಶೀರ್ವದಿಸಿ ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುತ್ತೇನೆ" ಎಂದು ವಾಗ್ದಾನದೊಂದಿಗೆ ಕರೆದರು. ಅಬ್ರಹಾಮನು ಬಹಳ ಶ್ರೀಮಂತನಾಗಿದ್ದನು. ಆದರೆ ವಾಗ್ದಾನವನ್ನು ಪಡೆದಿದ್ದರೂ, ಅವರ 100 ವರ್ಷ ವಯಸ್ಸಿನವರೆಗೂ ಮಕ್ಕಳಿಲ್ಲದವರಾಗಿದ್ದರು. ಅವರ ಹೆಂಡತಿ ಸಾರಳಿಗೆ 90 ವರ್ಷ ವಯಸ್ಸಾಗಿತ್ತು, ಅವಳ ಗರ್ಭವೂ ಸಹ ಸತ್ತು ಹೋಗಿತ್ತು. ದೇವದೂತರು ಮತ್ತೆ ಅಬ್ರಹಾಮನ ಬಳಿಗೆ ಬಂದು ಅವರ ಗರ್ಭದ ಫಲವನ್ನು ಆಶೀರ್ವದಿಸಿದಾಗ, ಅಬ್ರಹಾಮನು ಇದನ್ನು ಕೇಳಿ, "ನೂರು ವರ್ಷ ವಯಸ್ಸಿನವನಿಗೆ ಮಗು ಹುಟ್ಟುತ್ತದೆಯೇ? ತೊಂಭತ್ತು ವರ್ಷದ ಸಾರಳು ಮಗುವನ್ನು ಹೆರುತ್ತಾಳೋ?" ಎಂದು ಅವರು ತನ್ನ ಹೃದಯದಲ್ಲಿ ಅಂದುಕೊಂಡರು. ಅದೇ ರೀತಿ, ಸಾರಳು (ಆದಿಕಾಂಡ 18:12) ರಲ್ಲಿ "ನನ್ನಂಥ ಮುದುಕಿಗೆ ಭೋಗವಾದೀತೇ? ನನ್ನ ಯಜಮಾನನೂ ಮುದುಕನಲ್ಲವೇ" ಎಂದು ತನ್ನೊಳಗೆ ನಕ್ಕಳು. ಹೀಗೆ ಅವರಿಬ್ಬರೂ ನಕ್ಕರು. ಅವರು ತಮ್ಮ ಜೀವನದ ಎಲ್ಲಾ ದಿನಗಳಲ್ಲೂ ಸಂತೋಷಡುವ ಹಾಗೆ ಇಸಾಕನನ್ನು ಕೊಟ್ಟು ಆಶೀರ್ವದಿಸಿದರು. ಆ ಅಬ್ರಹಾಮನಿಗೆ ನಾವು ಕೂಡ ಮಕ್ಕಳಾಗಿದ್ದೇವಲ್ಲಾ.
ನನಗೆ ಪ್ರಿಯವಾದವರೇ! ಇನ್ನು ನನ್ನ ಜೀವನ ಅಷ್ಟೆ, ಮುಗಿದುಹೋಯಿತು. ಇನ್ನು ಮುಂದೆ ಒಳ್ಳೆಯದನ್ನು ನೋಡಲು ಸಾಧ್ಯವೇ ಇಲ್ಲ ಎಂದು ಅಳುತ್ತಾ ಪ್ರಲಾಪಿಸುತ್ತಿದ್ದೀರಾ? ನಷ್ಟಗಳು, ಸೋಲುಗಳು ಮತ್ತು ಅನಾರೋಗ್ಯದ ನೋವಿನಿಂದ ಕಣ್ಣೀರು ಸುರಿಸುತ್ತಿದ್ದೀರಾ? ದೇವರೊಂದಿಗೆ ಮಾತನಾಡಿ ನಿಮ್ಮ ಹೃದಯವನ್ನು ಲಘುವಾಗಿಸಿ. ಸತ್ಯವೇದವನ್ನು ಓದಿ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧದಲ್ಲಿ ಬಲವಾಗಿ ಬೆಳೆಯಿರಿ. ಲೌಕಿಕ ಸುಖವು ಕೇವಲ ತಾತ್ಕಾಲಿಕ. Caring and sharing ಸಂತೋಷವನ್ನು ಎರಡರಷ್ಟಾಗಿಸುತ್ತದೆ. ಹೌದು, ಕ್ರಿಸ್ತನನ್ನು ಪ್ರಕಟಿಸಿರಿ. ಅಗತ್ಯವಿರುವವರಿಗೆ ಸಹಾಯ ಮಾಡಿರಿ. ಸಂತೋಷವನ್ನು ಎರಡರಷ್ಟಾಗಿಸಿ. ದೇವರಲ್ಲಿ ಸಂತೋಷಪಡುವುದೇ ನಮ್ಮ ಬಲ ಎಂಬುದನ್ನು ಮರೆಯಬೇಡಿ!
- Sis. ಮಂಜುಳಾ
ಪ್ರಾರ್ಥನಾ ಅಂಶ:
ಯುವ ಸಂಜೆ ಕಾರ್ಯಕ್ರಮದ ಮೂಲಕ ಭೇಟಿಯಾಗುವ ಯುವಜನರು ಸೇವಕರಾಗಿ ಮಾರ್ಪಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482