Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.03.2025
Share:

By Village Missionary Movement

Wednesday, 19-Mar-2025

ಧೈನಂದಿನ ಧ್ಯಾನ(Kannada) – 19.03.2025

 

ಕ್ರಯಧನ

 

"ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು;..." - 1 ಕೊರಿಂಥ. 6:20

 

ದಕ್ಷಿಣ ಭಾರತದ ಅಪೊಸ್ತಲರೆಂದು ಕರೆಯಲ್ಪಡುವ ಪಾಸ್ಟರ್ ಪಾಲೋಸ್, ಸುವಾರ್ತಾ ಸೇವೆಗಾಗಿ ಹಡಗಿನಲ್ಲಿ ಕುವೈತ್‌ಗೆ ಪ್ರಯಾಣ ಬೆಳೆಸಿದರು. ಆದರೂ ಅವರ ಹೃದಯವು ಸ್ವಂತ ದೇಶದಲ್ಲಿ ರಕ್ಷಿಸಲ್ಪಡದ ತನ್ನ ಜನರಿಗಾಗಿ ಬಡಿಯುತ್ತಿತ್ತು. ಚಲನಚಿತ್ರದ ಮೂಲಕ ಯೇಸುವೇ ಜೀವನ ಎಂದು ತೋರಿಸಿ ಜನರಿಗೆ ರಕ್ಷಣೆಯ ಬಗ್ಗೆ ಹೇಳಬಹುದೆಂದು ಭಾವಿಸಿದರು. ಪ್ರೊಜೆಕ್ಟರ್ ಖರೀದಿಸಲು ಅವರ ಬಳಿ ಹಣವಿಲ್ಲದ ಕಾರಣ, ಅವರು ತನ್ನ ರಕ್ತವನ್ನು ಮಾರಿ ಸ್ಲೈಡ್ ಪ್ರೊಜೆಕ್ಟರ್ ಖರೀದಿಸಿದರು. ಅವರ ಬಲಹೀನತೆಯನ್ನೂ ಲೆಕ್ಕಿಸದೆ ತೀವ್ರವಾಗಿ ತನ್ನ ಸೇವೆಯನ್ನು ಮಾಡಿದರು. ಕ್ರಯಧನವಿಲ್ಲದೆ ಸೇವೆ ಮಾಡಲು ಸಾಧ್ಯವಿಲ್ಲ ಎಂದು ಅವರು ಆಗಾಗ್ಗೆ ಹೇಳುತ್ತಾರೆ. 

 

ಅಂತಿಯೋಕ್ಯ ಮತ್ತು ಇಕೋನಿಯದಲ್ಲಿ ಯೆಹೂದ್ಯರು ಬಂದು ಪೌಲನ ಮೇಲೆ ಕಲ್ಲೆಸೆದು ಅವರು ಸುವಾರ್ತೆಯನ್ನು ಸಾರದಂತೆ ತಡೆದರು, ಮತ್ತು ಅವರು ಸತ್ತರೆಂದು ಭಾವಿಸಿ ಪಟ್ಟಣದಿಂದ ಹೊರಗೆ ಎಳೆದುಕೊಂಡು ಹೋದರು. ಆದಾಗ್ಯೂ, ಗಾಯ ಮತ್ತು ರಕ್ತವನ್ನು ಲೆಕ್ಕಿಸದೆ, ಅವರು ಪಟ್ಟಣಕ್ಕೆ ಹಿಂತಿರುಗಿ ಪುನಃ ಸುವಾರ್ತೆಯನ್ನು ಸಾರಿದರು. ಬೆಲೆ ಇಲ್ಲದೆ ನಾವು ಈ ಜಗತ್ತಿನಲ್ಲಿ ಏನನ್ನೂ ಪಡೆಯಲು ಸಾಧ್ಯವಿಲ್ಲ. ನಿಮಗೆ ಉಚಿತವಾಗಿ ಯಾವುದಾದರು ಒಂದು ವಸ್ತು ದೊರೆತರೂ, ಬೇರೆಯವರು ಖಂಡಿತವಾಗಿಯೂ ಅದಕ್ಕೆ ಕ್ರಯಧನವನ್ನು ನೀಡಿರುತ್ತಾರೆ. ರಕ್ಷಣೆಯು ಉಚಿತವಾಗಿದ್ದರೂ, ಕರ್ತನಾದ ಯೇಸು ತನ್ನ ಸ್ವಂತ ರಕ್ತವನ್ನು ಕ್ರಯಧನವಾಗಿ ಕೊಟ್ಟೇ ನಮಗೆ ರಕ್ಷಣೆಯನ್ನು ಅನುಗ್ರಹಿಸಿದ್ದಾರೆ. ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಷೆಮಾಡಿದನು. (ಕೊಲೊಸ್ಸೆ 1:20) ಎಂದು ನಾವು ಸತ್ಯವೇದದಲ್ಲಿ ಓದುತ್ತೇವೆ.

       

ಹೌದು, ಪ್ರಿಯರೇ! ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ಜನರಿಗೆ ಕರ್ತನ ಸತ್ಯವನ್ನು ಹೇಳಲು ಬಾಧ್ಯರಾಗಿದ್ದೇವೆ. "ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ." (1 ತಿಮೊ. 2:4) ಆದ್ದರಿಂದ ಕರ್ತನ ಚಿತ್ತವನ್ನು ಮಾಡಲು ನಾವು ಪೂರ್ಣ ಹೃದಯದಿಂದ ನಮ್ಮನ್ನು ಸಮರ್ಪಿಸಿಕೊಳ್ಳೋಣ. ನಾವು ಸಹ ಆತ್ಮಗಳನ್ನು ಸಂಪಾದಿಸಲು ನಮ್ಮ ಸಮಯ, ಹಣ, ಆಸ್ತಿ ಮತ್ತು ಶ್ರಮದ ಕ್ರಯಧನವನ್ನು ಪಾವತಿಸಲು ಋಣಿಯಾಗಿದ್ದೇವೆ. "ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ;..." (1 ತಿಮೊಥೆಯ 1:15)

- Sis. ಎಸ್ತೇರ್ ಸೆಲ್ವಿ 

 

ಪ್ರಾರ್ಥನಾ ಅಂಶ:

ಅರ್ಪುದಮಾಲೈ ಕೂಟಗಳಲ್ಲಿ ಭಾಗವಹಿಸುವವರು ಅದ್ಬುತವನ್ನು ಸ್ವತಂತ್ರಿಸಿಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş