Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.03.2025
Share:

By Village Missionary Movement

Tuesday, 18-Mar-2025

ಧೈನಂದಿನ ಧ್ಯಾನ(Kannada) – 17.03.2025

 

ಒಳ್ಳೆಯದಕ್ಕೆ ಬುದ್ಧಿವಂತರು ಕೆಟ್ಟದ್ದಕ್ಕೆ ಕಳಂಕವಿಲ್ಲದವರು

 

"...ನೀವು ಒಳ್ಳೇತನದ ವಿಷಯದಲ್ಲಿ ಜಾಣರೂ ಕೆಟ್ಟತನದ ವಿಷಯದಲ್ಲಿ ಕಳಂಕವಿಲ್ಲದವರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ" - ರೋಮಾ 16:19

 

ರಸ್ತೆಗಳಲ್ಲಿ ಕೆಲವು ಸ್ಥಳಗಳಲ್ಲಿ ಅಪಘಾತ ಪ್ರದೇಶಗಳು ಎಂದು, ಕಡಲತೀರಗಳು ಮತ್ತು ನದಿ ದಂಡೆಗಳಲ್ಲಿ ಆಳವಾದ ಕಂದರಗಳು, ಅಪಾಯಕಾರಿ ಪ್ರವಾಹಗಳು, ಜಾರುವ ಬಂಡೆಗಳು ಮತ್ತು ಸಡಿಲವಾದ ಮರಳಿನ ಸ್ಥಳಗಳು ಎಂಬುದರ ಬಗ್ಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿರುತ್ತದೆ. ಔಷಧಿ ಬಾಟಲಿಗಳಿಗೆ ಡೋಸೇಜ್ ಮತ್ತು ಔಷಧಿಯು ಅರೆನಿದ್ರಾವಸ್ಥೆಗೆ ಕಾರಣವಾಗುತ್ತದೆ ಎಂಬಂತಹ ಎಚ್ಚರಿಕೆಯ ಲೇಬಲ್‌ಗಳನ್ನು ಅಂಟಿಸಲಾಗಿರುತ್ತದೆ. ಕೆಲವು ಬಾಟಲಿಗಳ ಮೇಲೆ ವಿಷ ಎಂಬ ಲೇಬಲ್ ಇರುತ್ತದೆ. ನಾವು ಈ ಎಚ್ಚರಿಕೆಗಳನ್ನು ಗಮನಿಸಿ ಕಾರ್ಯನಿರ್ವಹಿಸದಿದ್ದರೆ, ಅವುಗಳಲ್ಲಿ ನಮಗೆ ಖಂಡಿತವಾಗಿಯೂ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ.  

 

ಪರಿಶುದ್ಧ ಗ್ರಂಥವೂ ಕೂಡ ಇಂತಹ ಎಚ್ಚರಿಕೆಗಳಿಂದ ತುಂಬಿದೆ. ದೇವರ ವಾಕ್ಯಗಳು ನಮಗೆ ಆಧ್ಯಾತ್ಮಿಕ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ನಾವು ಮಾಡುವ ಕೆಲಸಗಳು ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಹಾನಿ ಮಾಡಿ ಹಾಳುಮಾಡಿದರೆ, ನಾವು ನಿತ್ಯ ಜೀವನವನ್ನು ಕಳೆದುಕೊಳ್ಳವ ಸಾಧ್ಯತೆ ಇದೆ. ಇಂತಹ ಹಲವು ವಿಷಯಗಳ ಬಗ್ಗೆ ಎಚ್ಚರಿಕೆಗಳನ್ನು ನೀಡಲಾಗಿದೆ. ನಾವು ಪಾಪಗಳೆಂದು ಅರಿತುಕೊಳ್ಳದ ಅನೇಕ ವಿಷಯಗಳ ಬಗ್ಗೆ ಸತ್ಯವೇದದಲ್ಲಿ ಎಚ್ಚರಿಕೆಗಳು ಒಳಗೊಂಡಿದೆ. ಧೂಮಪಾನ ಮಾಡುವುದು ಅಥವಾ ಚಲನಚಿತ್ರ ನೋಡುವುದು ಪಾಪ ಎಂದು ಎಲ್ಲಿ ಹೇಳಲಾಗಿದೆ ಎಂದು ಕೆಲವರು ವಾದಿಸುತ್ತಾರೆ? ನಮ್ಮ ದೇಹ ಮತ್ತು ಆತ್ಮವನ್ನು ಕೆಡಿಸುವ ಯಾವುದೇ ಕೆಲಸವನ್ನು ಮಾಡುವವರನ್ನು ಬೈಬಲ್ ಮೂರ್ಖರೆಂದು ಕರೆಯುತ್ತದೆ. ಕಾಮ, ಕ್ರಿಸ್ತನನ್ನು ಪರೀಕ್ಷಿಸುವುದು ಮತ್ತು ಗೊಣಗುವುದು ದೇವರಿಗೆ ಕೋಪವನ್ನು ತರುವ ವಿಷಯಗಳು ಎಂದು 1 ಕೊರಿಂಥ. 10:5-11 ವಾಕ್ಯಗಳು ಹೇಳುತ್ತವೆ. ವಿಚ್ಛೇದನ, ಸತ್ಯ ಮಾಡುವುದು, ಭವಿಷ್ಯ ಹೇಳುವುದು, ಲಾಟರಿ ಟಿಕೆಟ್‌ಗಳನ್ನು ಖರೀದಿಸುವುದು, ಜೂಜಾಟ, ಹೆಮ್ಮೆ, ಅಸೂಯೆ, ದ್ವೇಷ ಮತ್ತು ಕ್ಷಮಿಸದಿರುವಿಕೆ ಮುಂತಾದ ವಿಷಯಗಳಿಗೆ ಕ್ರೈಸ್ತರು ಹೊರತಾಗಿಲ್ಲ. ಒಬ್ಬ ಸಹೋದರನನ್ನು ಮೂರ್ಖನೆಂದು ಕರೆಯುವುದು, ಅನ್ಯಾಯವಾಗಿ ಕೋಪಗೊಳ್ಳುವುದು ಮತ್ತು ಅವನನ್ನು ವ್ಯರ್ಥವಾದವನೆಂದು ಕರೆಯುವುದು ಸಹ ನ್ಯಾಯತೀರ್ಪಿಗೆ ಅರ್ಹವಾದ ಪಾಪಗಳಾಗಿವೆ ಎಂದು ಬೈಬಲ್ ಎಚ್ಚರಿಸುತ್ತಿದೆ.

 

ಹಾಗಾದರೆ, ಪ್ರಿಯರೇ! ಮೇಲಿನ ವಚನದ ಪ್ರಕಾರ, ನಾವು ಸತ್ಯವೇದವನ್ನು ಎಚ್ಚರಿಕೆಯಿಂದ ಓದಿ, ಧ್ಯಾನಿಸಿ, ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ಅರ್ಥಮಾಡಿಕೊಂಡರೆ ಮಾತ್ರ, ನಾವು ಒಳ್ಳೆಯದರಲ್ಲಿ ಬುದ್ಧಿವಂತರಾಗಿಯೂ ಮತ್ತು ಕೆಟ್ಟದ್ದರಲ್ಲಿ ಕಳಂಕವಿಲ್ಲದವರಾಗಿಯೂ ಇರಬಹುದು. ಇಂದೇ ಮಾಡೋಣವಾ? 

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಚೆನ್ನೈನಲ್ಲಿ ನಡೆಯುವ ಅರ್ಪುದ ಮಾಲೈ ಕೂಟಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al