By Village Missionary Movement
Monday, 17-Mar-2025ಧೈನಂದಿನ ಧ್ಯಾನ(Kannada) – 17.03.2025
ಸತತವಾಗಿ
"...ರೂತಳಾದರೋ ಅತ್ತೆಯನ್ನೇ ಅಂಟಿಕೊಂಡಳು" - ರೂತ್ 1:14
ಕಪ್ಪೆಗಳ ಗುಂಪು ನೀರಿನ ಕಡೆಗೆ ವೇಗವಾಗಿ ಓಡಿತು. ಹೋಗುವ ದಾರಿ ಹೇಗಿದೆ ಎಂದು ಸಹ ನೋಡಲಿಲ್ಲ. ಮೂರು ಕಪ್ಪೆಗಳು ರಸ್ತೆಯ ದೊಡ್ಡ ಗುಂಡಿಯಲ್ಲಿ ಬಿದ್ದವು. ಇತರ ಕಪ್ಪೆಗಳು ದಾರಿಯ ಕಡೆಗೆ ಹೋಗದೆ, ಗುಂಡಿಯ ಬಳಿ ನಿಂತು ಬಿದ್ದ ಕಪ್ಪೆಗಳನ್ನು ನೋಡುತ್ತಿದ್ದವು. ಆ ಮೂರು ಕಪ್ಪೆಗಳು ಬಿದ್ದ ವೇಗದಲ್ಲಿ ಹೇಗಾದರೂ ಮಾಡಿ ಮೇಲೆ ಬಂದು ಬಿಡಬೇಕೆಂದು ವೇಗ ವೇಗವಾಗಿ ತೆರಳುತ್ತಿದ್ದವು. ಇದನ್ನು ಮೇಲಿನಿಂದ ನೋಡುತ್ತಿದ್ದ ಕಪ್ಪೆಗಳಲ್ಲಿ ಒಂದು, "ನೀವು ಎಂದಿಗೂ ಮೇಲೆ ಬರಲು ಸಾಧ್ಯವಿಲ್ಲ" ನೀವು ವ್ಯರ್ಥವಾಗಿ ಏಕೆ ಪ್ರಯತ್ನಿಸುತ್ತಿದ್ದೀರಿ? ಎಂದಿತು. ಇದನ್ನು ಕೇಳಿದ ಒಂದು ಕಪ್ಪೆ ಸೋತುಹೋಗಿ ಒಂದು ಮೂಲೆಯಲ್ಲಿ ಕುಳಿತುಕೊಂಡಿತು. ಎರಡು ಕಪ್ಪೆಗಳು ಮಾತ್ರ ಮೇಲೆ ಬರಲು ಪ್ರಯತ್ನಿಸಿದವು. ಮೇಲಿದ್ದ ಇನ್ನೊಂದು ಕಪ್ಪೆ, "ಮಳೆಗಾಲ ಬಂದಾಗ ಈ ಗುಂಡಿ ಮಳೆನೀರಿನಿಂದ ತುಂಬುತ್ತದೆ. ಆಗ ನೀನು ಸುಲಭವಾಗಿ ಈಜಿಕೊಂಡು ಮೇಲಕ್ಕೆ ಬರಬಹುದು. ಅಲ್ಲಿಯವರೆಗೆ ಇಲ್ಲೇ ಇರು" ಎಂದು ಹೇಳಿತು. ಇದು ಒಳ್ಳೆಯ ಐಡಿಯಾ ಅಂತ ಅಂದುಕೊಂಡು ಎರಡನೇ ಕಪ್ಪೆ ಕೂಡ ತೆವಳುವುದನ್ನು ನಿಲ್ಲಿಸಿತು. ಆದರೆ ಒಂದು ಕಪ್ಪೆ ಮಾತ್ರ ನಿರಂತರವಾಗಿ ಮೇಲೆ ಬರಲು ಪ್ರಯತ್ನಿಸುತ್ತಿತ್ತು. ಆದರೆ ಇನ್ನೆರಡು ಕಪ್ಪೆಗಳು, ನಮ್ಮೊಂದಿಗೇ ಇರು. ನಿನಗೆ ಜೊತೆಯಾಗಿ ನಾವಿದ್ದೇವಲ್ಲಾ ಎಂದವು. ಆದರೂ ಆ ಕಪ್ಪೆ ಕಿವುಡನಂತೆ ನಿಟ್ಟುಸಿರು ಬಿಡುತ್ತಾ ತೆವಳುತ್ತಾ ತೆವಳುತ್ತಾ ಮೇಲಕ್ಕೆ ಬಂದುಬಿಟ್ಟಿತು.
ಎಲೀಮೆಲೆಕ್ ಮತ್ತು ನೊವೊಮಿ ದಂಪತಿಗಳು ಮೋವಾಬ್ ದೇಶದಲ್ಲಿ ಕುಟುಂಬವಾಗಿ ವಾಸಿಸುತ್ತಿದ್ದರು. ಅವರ ಇಬ್ಬರು ಗಂಡು ಮಕ್ಕಳು ಮೋವಾಬ್ಯರ ಸ್ತ್ರೀಯರನ್ನು ಮದುವೆಯಾದರು. ಅವರಲ್ಲಿ ಒಬ್ಬಳ ಹೆಸರು ಒರ್ಫಾ, ಮತ್ತೊಬ್ಬಳ ಹೆಸರು ರೂತ್. ಹತ್ತು ವರ್ಷಗಳ ನಂತರ, ಇವರ ಗಂಡಂದಿರು ಸತ್ತುಹೋಗಲು, ನೊವೊಮಿ ತನ್ನ ಇಬ್ಬರು ಗಂಡು ಮಕ್ಕಳನ್ನು ಮತ್ತು ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಬಿಟ್ಟಳು. ಆಗ ಒರ್ಫಾ ತನ್ನ ಅತ್ತೆಗೆ ಮುತ್ತಿಟ್ಟು ಅಲ್ಲಿಂದ ಹಾದುಹೋದಳು. ರೂತಳು ಅವಳನ್ನು ಗಟ್ಟಿಯಾಗಿ ಅಂಟಿಕೊಂಡಳು. ರೂತಳು ನೊವೊಮಿಯೊಂದಿಗೆ ಅಂಟಿಕೊಂಡದ್ದರಿಂದ, ರೂತಳು ಕರ್ತನಿಂದ ಆಶೀರ್ವಾದ ಹೊಂದಿದಳು ಮತ್ತು ಯೇಸು ಕ್ರಿಸ್ತನು ಭೂಮಿಗೆ ಬರಲು ಪ್ರಾಥಮಿಕ ಕಾರಣವಾಗಿದ್ದಳು.
ಪ್ರಿಯ ಓದುಗರೇ! ನಾವು ನಮ್ಮ ಜೀವನದಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ನಾವು ಪ್ರತಿ ವರ್ಷವೂ ನಿರ್ಣಯಗಳನ್ನು ಮಾಡಬಹುದು, ಆದರೆ ನಾವು ಅದರಲ್ಲಿ ವಿಫಲರಾಗಬಹುದು ಮತ್ತು ಅವುಗಳನ್ನು ಪೂರೈಸಲು ಸಾಧ್ಯವಾಗದಿರಬಹುದು. ಗುಂಡಿಗೆ ಬಿದ್ದ ಕಪ್ಪೆಯನ್ನು ಇತರ ಕಪ್ಪೆಗಳು ಅಪಹಾಸ್ಯ ಮಾಡಿದಂತೆಯೇ, ನಮ್ಮ ನಿರ್ಣಯಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಇತರರು ನಮ್ಮನ್ನು ಟೀಕಿಸಿರಬಹುದು. ಆದರೆ ರೂತಳ ಕಾರ್ಯವನ್ನು ನೋಡೋಣ. ರೂತಳು ತನ್ನ ಅತ್ತೆಯನ್ನು ಅಂಟಿಕೊಂಡಂತೆ, ನಾವು ದೇವರನ್ನು ಅಂಟಿಕೊಂಡು ಜೀವಿಸೋಣ. ನಾವು ಆತನನ್ನು ಸಂಪೂರ್ಣವಾಗಿ ಮತ್ತು ಬಿಟ್ಟುಕೊಡದೆ ಅಂಟಿಕೊಂಡರೆ, ನಮ್ಮ ಪ್ರಯತ್ನಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ, ಏನೇ ಇರಲಿ. ನಮ್ಮ ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದರೂ ನಾವು ಯೇಸುವನ್ನು ಬಿಡದೇ ಅಂಟಿಕೊಳ್ಳೋಣವಾ?
- Bro. ಶಂಕರ್‌ರಾಜ್
ಪ್ರಾರ್ಥನಾ ಅಂಶ:
ಅನೇಕ ಯೌವನಸ್ಥ ಪ್ರಾರ್ಥನಾ ಗುಂಪುಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482