Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.05.2021
Share:

By Village Missionary Movement

Saturday, 15-May-2021

ಧೈನಂದಿನ ಧ್ಯಾನ(Kannada) – 15.05.2021

ಬೀಜ ಮೊಳಕೆಯೊಡೆಯುತ್ತದೆ

"... ನೆಡುವವನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು” - 1ಕೊರಿಂಥ. 3:7

ಪ್ರಾರ್ಥನಾ ಅಪೊಸ್ತಲನೆಂದು  ಕರೆಯಲ್ಪಡುವ ಜಾನ್ ಹೈಡ್ ತನ್ನ ಸ್ನೇಹಿತನೊಂದಿಗೆ ಪಂಜಾಬ್ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ, ತನ್ನ ಸೇವೆಯನ್ನು ಪ್ರಾರಂಭಿಸಿದ.  ಇಬ್ಬರು ಹಗಲು ರಾತ್ರಿ ಪ್ರಾರ್ಥಿಸುತ್ತಾ, ನಿರಂತರವಾಗಿ ಜನರನ್ನು ಭೇಟಿಮಾಡುತ್ತಾ  ದೇವರ ಮಾತುಗಳನ್ನು ಹೇಳುತ್ತಿದ್ದರು.  ಆದರೆ ಯಾವುದೇ ಪ್ರಯೋಜನವಿರಲಿಲ್ಲ  "ಏಕೆ ಈ ರೀತಿ" ಎಂದು ಇಬ್ಬರೂ  ಬಳಲಿ ಹೋದರು.  ನಾವು ಸರಿಯಿಲ್ಲವೋ?  ನಾವು ಸೇವೆ ಮಾಡುವ ವಿಧಾನ ಸರಿಯಿಲ್ಲವೋ ಎಂದೆಲ್ಲಾ ಅವರು ಮಾತನಾಡಿಕೊಳ್ಳುತ್ತಿದ್ದರು.  "ಇದು ಸೇವೆಯ ಕೊನೆಯ ದಿನ" ಎಂದು ಜನರಿಗೆ ಹೇಳಿ ಅವರು ಒಂದು ಹಾಡನ್ನು ಹಾಡಿ ದೇವರ ವಾಕ್ಯವನ್ನು ಹೇಳಿದರು.  ಸ್ವಲ್ಪ ಸಮಯದ ನಂತರ ಯುವಕನೊಬ್ಬ ಈ ಹಾಡು ನನ್ನನ್ನು ಮುಟ್ಟಿತೆಂದು ಹೇಳಿದನು.  ನಂತರ ಒಬ್ಬೊಬ್ಬರಾಗಿ ಮುಂದೆ ಬಂದು,  ಅದೇ ದಿನ ದೀಕ್ಷಾಸ್ನಾನವನ್ನು ತೆಗೆದುಕೊಳ್ಳಲು ಒಪ್ಪಿಸಿಕೊಟ್ಟರು.  ಜಾನ್ ಹೈಡ್ ತುಂಬಾ ಆಶ್ಚರ್ಯಪಟ್ಟರು.

ಅಪೊಸ್ತಲನಾದ ಪೌಲನು ಚೆನ್ನಾಗಿ ವಾಕ್ಯ ಬೀಜಗಳನ್ನು ಬಿತ್ತನೆ ಮಾಡಲು ತಿಳಿದವರು. ಅವರು ವಾಕ್ಯವೆಂಬ ಬೀಜಗಳನ್ನು ಎಲ್ಲಾ ಮನುಷ್ಯರ ಹೃದಯಗಳಲ್ಲೂ ಸಮಯವಿದ್ದರೂ ಇಲ್ಲದಿದ್ದರೂ ಬಿತ್ತಿದರು.  ಆದರೆ, ಅದನ್ನು ಬೆಳೆಸುವವರು ದೇವರೇ ಎಂದು ಅವರು ನಂಬಿದ್ದರು.  ಅದಕ್ಕಾಗಿಯೇ ನಾನು ನೆಟ್ಟಿದ್ದೇನೆ, ಅಪೊಲ್ಲೋಸನು ನೀರು ಹೊಯಿದನು, ದೇವರೇ ಬೆಳೆಸುವರು ಎಂದು ಹೇಳಿದರು.  ಈ ಸತ್ಯವು ತಿಳಿದಿದ್ದರಿಂದಲೇ ಬಳಲಿ ಹೋಗದೇ ಪೌಲನು ತನ್ನ ಸೇವೆಯನ್ನು ಮಾಡಿ ಮುಗಿಸಿದರು.

ಇದನ್ನು ಓದುತ್ತಿರುವ ಸ್ನೇಹಿತರೇ!  ನೀವು ಒಂದು ಸಭೆಯನ್ನು ನಡೆಸುತ್ತಿರಬಹುದು ಅಥವಾ ಸುವಾರ್ತಾ ಸೇವೆಯನ್ನು ಮಾಡುತ್ತಿರಬಹುದು.  ಅನೇಕ ವರ್ಷಗಳಿಂದ ಸೇವೆ ಮಾಡಿಯೂ ಆತ್ಮ ಆದಾಯ ಮಾಡಲು  ಸಾಧ್ಯವಾಗಲಿಲ್ಲವೇ,  ಚಲನೆಯೇ ಇಲ್ಲವೇ ಎಂದು ಬಳಲಿ ಹೋಗಿರಬಹುದು.  ಬಿತ್ತನೆ ಮಾಡುವುದು ಮಾತ್ರವೇ ನಮ್ಮ ಕೆಲಸ.  ಪ್ರಾರ್ಥನೆಯೊಂದಿಗೆ ದೇವರು ನಿಮಗೆ ಕೊಡುವ ಕೆಲಸವನ್ನು ನಂಬಿಕೆಯಿಂದ ಮಾಡುತ್ತಲೇ ಇರಿ. ದೇವರು ನಮ್ಮನ್ನು ಪ್ರೋತ್ಸಾಹಿಸುವಂತೆ ಆಗ ಕೆಲವು   ಬೆಳವಣಿಗೆಯನ್ನು ತೋರಿಸುತ್ತಾರೆ.  ಅದಕ್ಕಾಗಿ ನಾವು ಮಾಡಿದ ಇತರ ಎಲ್ಲಾ ಸೇವೆಗಳು  ವ್ಯರ್ಥವಾಯಿತು ಎಂದು ನಾವು ಎಂದಿಗೂ ಯೋಚಿಸಬಾರದು.  ನೀರಿನ ಮೇಲೆ ನಾವು ಆಹಾರವನ್ನು ಹಾಕಿದ್ದೇವೆ ಅನೇಕ ದಿನಗಳ ನಂತರ ಅದರ ಫಲವನ್ನು ಕಾಣುತ್ತೇವೆ ಎಂಬುದು ಖಚಿತವಾಗಿದೆ. ಹಲ್ಲೇಲೂಯ!
-    Mrs. ಜ್ಯೋತಿ ಆನಂದ್

ಪ್ರಾರ್ಥನಾ ಅಂಶ:-
ನಮ್ಮೊಂದಿಗೆ ಹೊಸದಾಗಿ ಸೇರಿರುವ ಮಿಷನರಿಗಳನ್ನು ದೇವರು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin