By Village Missionary Movement
Thursday, 06-Mar-2025ಧೈನಂದಿನ ಧ್ಯಾನ(Kannada) – 06.03.2025
ಸಹಾಯ ಹಸ್ತ ಚಾಚು
“ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ" - ಜ್ಞಾನೋಕ್ತಿ 3:27
ಬಸ್ ನಿಲ್ದಾಣದ ಬಳಿಯ ಒಂದು ಸಣ್ಣ ಟೆಂಟ್‌ನಲ್ಲಿ ಒಬ್ಬ ವೃದ್ಧ ಶೂ ಹೊಲಿಯುವ ಕೆಲಸ ಮಾಡುತ್ತಿದ್ದರು. ಯೇಸುಕ್ರಿಸ್ತನನ್ನು ಪ್ರತ್ಯಕ್ಷವಾಗಿ ನೋಡಬೇಕೆಂಬುದು ಅವರ ಬಹುಕಾಲದ ಬಯಕೆಯಾಗಿತ್ತು. ಅವರಿಗೆ ತನ್ನ ಕೈಗಳಿಂದ ಮಾಡಿದ ಒಂದು ಚಪ್ಪಲಿಯನ್ನು ಕೊಡಬೇಕೆಂದಿದ್ದರು. ಆದ್ದರಿಂದ ಅವರು ಹಣವನ್ನು ಶೇಖರಿಸಿ, ಒಳ್ಳೆಯ ಗುಣಮಟ್ಟದ ಚರ್ಮವನ್ನು ಖರೀದಿಸಿ, ಒಂದು ಜೊತೆ ಸುಂದರವಾದ ಚಪ್ಪಲಿಯನ್ನು ಮಾಡಿದರು. ಯೇಸುವಿನ ಬರುವಿಕೆಗಾಗಿ ಕಾಯುತ್ತಿದ್ದರು ಮತ್ತು ಅದಕ್ಕಾಗಿ ಪ್ರಾರ್ಥಿಸುತ್ತಿದ್ದರು. ದಿನಗಳು, ತಿಂಗಳುಗಳು ಕಳೆದವು. ಒಂದು ದಿನ, ಸುಡುವ ಬಿಸಿಲಿನಲ್ಲಿ ಬರಿಗಾಲಿನಲ್ಲಿ ಹುಣ್ಣುಗಳೊಂದಿಗೆ ಚಪ್ಪಲಿಯಿಲ್ಲದೆ ತಳ್ಳಾಡುತ್ತಾ ನಡೆದು ಬರುತ್ತಿರುವ ಒಬ್ಬ ಮುದುಕನನ್ನು ಕಂಡ ಆ ವೃದ್ಧ, ಅವರಿಗೆ ಒಂದು ಚಪ್ಪಲಿಯನ್ನು ಕೊಡೋಣ ಎಂದು ಯೋಚಿಸಿ ಡೇರೆಯೊಳಗೆ ಹೋದರು. ಆದರೆ ಯೇಸು ಕ್ರಿಸ್ತನಿಗಾಗಿ ಮಾಡಿದ ಚಪ್ಪಲಿಗಳನ್ನು ಹೊರತುಪಡಿಸಿ ಬೇರೆ ಯಾವುದೂ ಇರಲಿಲ್ಲ. ಅವರು ತಕ್ಷಣ ಯೇಸುವಿನ ಬಳಿ ಕ್ಷಮಾಪಣೆ ಕೇಳಿಬಿಟ್ಟು, ಆ ದುಬಾರಿ ಪಾದರಕ್ಷೆಯನ್ನು ಆ ಮುದುಕನಿಗೆ ಕೊಟ್ಟುಬಿಟ್ಟರು. ಅವರು ಸಹ ಅದನ್ನು ತನ್ನ ಕಾಲುಗಳಿಗೆ ಹಾಕಿಕೊಂಡು, ಅವರಿಗೆ ಧನ್ಯವಾದ ಹೇಳಿ ಹೊರಟುಹೋದರು.
ಮತ್ತೊಂದೆಡೆ, ಅವರು ಯೇಸು ಕ್ರಿಸ್ತನಿಗಾಗಿ ಮತ್ತೊಂದು ಚಪ್ಪಲಿಯನ್ನು ಮಾಡಬೇಕೆಂದು ಬಯಸಿ, ದಣಿವರಿಯಿಲ್ಲದೆ ಚಪ್ಪಲಿ ಮಾರಿದ ಹಣವನ್ನು ಸಂಗ್ರಹಿಸಿಲು ಪ್ರಾರಂಭಿಸಿದರು. ಒಂದು ದಿನ ಅವರ ಕನಸಿನಲ್ಲಿ, ಬಿಳಿ ಬಟ್ಟೆ ಧರಿಸಿದ ಒಬ್ಬ ವ್ಯಕ್ತಿ ಅವರ ಅಂಗಡಿಗೆ ಬರುತ್ತಾರೆ. ಇದು ಯೇಸು ಕ್ರಿಸ್ತನೇ ಎಂದು ತಿಳಿದಾಗ, ಅವರಿಗೆ ಕೊಡಲು ತನ್ನ ಬಳಿ ಪಾದರಕ್ಷೆಗಳಿಲ್ಲವಲ್ಲಾ ಎಂದು ಭಾವಿಸಿ ಅತ್ತರು. ಯೇಸು ಕ್ರಿಸ್ತನು ಅವರನ್ನು ಸಂತೈಸಿ ಅಪ್ಪಿಕೊಂಡು, "ನನ್ನ ಮಗನೇ, ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು" ಎಂದು ಹೇಳಿದರು. ತಕ್ಷಣವೇ ಆ ಮುದುಕನಿಗೆ ತುಂಬಾ ಸಂತೋಷವಾಯಿತು. ಮತ್ತಾಯ 25:31 ರಲ್ಲಿ,
ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ - ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ. ನಾನು ಹಸಿದಿದ್ದೆನು, ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ ಎನ್ನುತ್ತಾರೆ. ಅದಕ್ಕೆ ನೀತಿವಂತರು - ಸ್ವಾಮೀ, ಯಾವಾಗ ಇದನ್ನೆಲ್ಲಾ ಮಾಡಿದೆವು ಎಂದು ಕೇಳಿದ್ದಕ್ಕೆ, ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ಹೇಳುತ್ತಾರೆ. ಹೌದು, ಉಪಕಾರಮಾಡುವದಕ್ಕೆ ನಮ್ಮ ಕೈಲಾದಾಗ, ಅದಕ್ಕೆ ತಕ್ಕ ಸಂದರ್ಭಗಳು ಬರುವಾಗ, ನಮ್ಮಿಂದ ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡೋಣ. ನಮ್ಮ ಶ್ರಮದ ಫಲವನ್ನು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ನೋಡುತ್ತೇವೆ.
- Bro. ಕುಮಾರ್
ಪ್ರಾರ್ಥನಾ ಅಂಶ:
ಡೇ ಕೇರ್ ಸೆಂಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482