By Village Missionary Movement
Monday, 03-Mar-2025ಧೈನಂದಿನ ಧ್ಯಾನ(Kannada) – 03.03.2025
ವಾಕ್ಯವೇ ಕಾಪಾಡುತ್ತದೆ.
"ನಿನಗೆ ವಿರೋಧವಾಗಿ ಪಾಪಮಾಡದಂತೆ ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ" - ಕೀರ್ತನೆ 119:11
ಎರಡೂ ದೇಶಗಳ ನಡುವೆ ಭೀಕರ ಯುದ್ಧ ನಡೆಯಿತು. ಬಾಂಬ್ ದಾಳಿಯಲ್ಲಿ ಹಲವರು ಸಾವನ್ನಪ್ಪಿದರು. ಯುದ್ಧದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಪ್ರಜ್ಞೆತಪ್ಪಿಹೋಗಿದ್ದರು ನಂತರ ಎಚ್ಚರಗೊಂಡು ತಾನು ಜೀವಂತವಾಗಿದ್ದೇನೆಂದು ಅರಿತುಕೊಂಡರು. ಗುಂಡು ತನಗೆ ಎಲ್ಲಿ ತಗುಲಿದೆ ಎಂದು ಮುಟ್ಟಿ ನೋಡಿಕೊಂಡರು. ಗುಂಡು ಶರ್ಟ್ ಜೇಬಿನಲ್ಲಿ ಸಿಲುಕಿಕೊಂಡಿತ್ತು. ಅವರು ಜೀವಂತವಾಗಿರಲು ಕಾರಣ ಅವರ ಜೇಬಿನಲ್ಲಿದ್ದ ಆ ಹೊಸ ಒಡಂಬಡಿಕೆ. ಆ ಹೊಸ ಒಡಂಬಡಿಕೆಯಲ್ಲಿ ಗುಂಡು ಬಿದ್ದದ್ದಲ್ಲದೆ ಅದರಿಂದ ಒಳಹೊಕ್ಕಿ ದೇಹವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಆ ಮನುಷ್ಯನು ಬದುಕಿಕೊಂಡನು.
ದೇವರ ಮಕ್ಕಳೇ, ಕೀರ್ತನೆಗಾರನು ಹೇಳುತ್ತಾನೆ, ನಾನು ನಿಮಗೆ ವಿರುದ್ಧವಾಗಿ ಪಾಪ ಮಾಡದಂತೆ ನಿಮ್ಮ ವಾಕ್ಯವನ್ನು (ವಚನ) ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ವಾಕ್ಯವು ಯಾರ ಹೃದಯಗಳಲ್ಲಿ ಇದೆಯೋ, ಅವರಿಗೆ ಪಾಪ ಎಂಬ "ವಿನಾಶಕಾರಿ ಬಾಂಬ್" ಯಾವ ಹಾನಿಯನ್ನೂ ಮಾಡಲು ಸಾಧ್ಯವಿಲ್ಲ. ಯೋಸೇಫನನ್ನು ತೆಗೆದುಕೊಳ್ಳಿ, ಯೋಸೇಫನು ತನ್ನ ಪರಿಶುದ್ಧತೆಯನ್ನು ಹಾಳುಮಾಡಲು ಬಂದ ತನ್ನ ಯಜಮಾನನ ಹೆಂಡತಿಯನ್ನು ನೋಡಿ ನಾನು ದೇವರಿಗೆ ವಿರುದ್ಧವಾಗಿ ಇಷ್ಟು ದೊಡ್ಡ ದುಷ್ಟತನವನ್ನು ಹೇಗೆ ಮಾಡಬಲ್ಲೆ? ಎಂದು ಹೇಳಿ ಅದರಿಂದ ಓಡಿಹೋಗಿ ತನ್ನನ್ನು ತಾನು ರಕ್ಷಿಸಿಕೊಂಡನು. ಆ ಗುಂಡು ಅವನನ್ನು ಗಾಯಗೊಳಿಸಿ ಜೈಲಿಗೆ ಹಾಕಿತು, ಆದರೆ ಅದು ಅವನ ಜೀವವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಪ್ರೀತಿಯ ದೇವರ ಮಕ್ಕಳೇ! ನಾವು ಎಷ್ಟರ ಮಟ್ಟಿಗೆ ಸತ್ಯವೇದವನ್ನು ಓದುತ್ತೇವೋ, ಕಿವಿಯಿಂದ ಕೇಳುತ್ತೇವೋ ಅವುಗಳನ್ನು ನಮ್ಮ ಹೃದಯದ ಲಾಕರ್‌ನಲ್ಲಿ ತೆಗೆದುಕೊಂಡು ಹೋಗಿ ಸಂಗ್ರಹಿಸಬೇಕು. ಆಗ ಮಾತ್ರವೇ ಆ ವಚನವು ನಮ್ಮನ್ನು ಪಾಪ ಮಾಡದಂತೆ ತಡೆಯುತ್ತದೆ ಮತ್ತು ನಮ್ಮ ಆಧ್ಯಾತ್ಮಿಕ ಜೀವನವನ್ನು ಕಾಪಾಡುತ್ತದೆ. ಹೃದಯದಲ್ಲಿ ವಾಕ್ಯವಿಲ್ಲದಿದ್ದರೆ, ಪಾಪದ ಗುಂಡು ಖಂಡಿತವಾಗಿಯೂ ನಮ್ಮನ್ನು ಕೊಲ್ಲುತ್ತದೆ. ಕೀರ್ತನೆಗಾರನು 37:31 ರಲ್ಲಿ, “ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವದು; ಅವನು ಜಾರುವದೇ ಇಲ್ಲ" ಎಂದು ಹೇಳುತ್ತಾನೆ. ಯಾರೆಲ್ಲಾ ಸತ್ಯವೇದಕ್ಕೆ ಪ್ರಾಮುಖ್ಯತೆ ನೀಡುತ್ತಾರೋ ಅವರು ಖಂಡಿತವಾಗಿಯೂ ತಮ್ಮ ಆತ್ಮಗಳನ್ನು ಕೆಟ್ಟದ್ದರಿಂದ ರಕ್ಷಿಸಿಕೊಳ್ಳುತ್ತಾರೆ. ನಾವು ಸತ್ಯವೇದವನ್ನು ಹೆಚ್ಚಾಗಿ ಓದೋಣ ಮತ್ತು ಕೇಳೋಣ ಮತ್ತು ಅವುಗಳನ್ನು ನಮ್ಮ ಹೃದಯದ ಲಾಕರ್‌ನಲ್ಲಿ ತೆಗೆದುಕೊಂಡು ಹೋಗಿ ಸಂಗ್ರಹಿಸೋಣ. ನಮ್ಮ ಆಧ್ಯಾತ್ಮಿಕ ಜೀವನವನ್ನು ಕಾಪಾಡಿಕೊಳ್ಳೋಣ. ಕರ್ತನು ತಾನೇ ನಿಮ್ಮನ್ನು ಆಶೀರ್ವದಿಸಲಿ! ಆಮೆನ್!
- Mrs. ಹೆಪ್ಸಿಬಾ ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ನಮ್ಮ ಶಾಖಾ ಕಚೇರಿಗಳಲ್ಲಿ ಸೇವೆ ಮಾಡುವವರಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482