Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.03.2025 (Kids Special)
Share:

By Village Missionary Movement

Sunday, 02-Mar-2025

ಧೈನಂದಿನ ಧ್ಯಾನ(Kannada) – 02.03.2025 (Kids Special)

 

ಬೇಟೆಗಾರ ಬರುತ್ತಾನೆ.

 

"...ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ" - 1 ಪೇತ್ರ 5:8

 

ಹಲೋ ಪುಟಾಣಿಗಳೇ! ನೀವೆಲ್ಲರೂ ಕೊಕ್ಕರೆ ನೋಡಿದ್ದೀರಾ? ಹೌದು, ಕೊಳದಲ್ಲಿ ಮೀನುಗಳನ್ನು ತಿನ್ನಲು ಬರುತ್ತವೆ. ಕೊಕ್ಕರೆ ಎಷ್ಟು ಸುಂದರವಾಗಿ ಮತ್ತು ಭವ್ಯವಾಗಿರುತ್ತೆ ನೋಡುದ್ರಾ? ಮೀನನ್ನು ನೋಡಿದ್ರೆ ಹಾಗೆ ಲಬಕ್ ಲಬಕ್ ಅಂತ ತಿನ್ನುತ್ತೆ ಅಲ್ವಾ. ಹೌದು, ಇವತ್ತು ಒಂದು ಕೊಕ್ಕರೆ ಕಥೆ ಕೇಳೋಣ್ವಾ?

 

ಸುಂದರವಾದ ನದಿದಡದಲ್ಲಿ ಅನೇಕ ಕೊಕ್ಕರೆಗಳು ವಾಸಿಸುತ್ತಾ ಇದ್ದವು. ಈ ಕೊಕ್ಕರೆಗಳನ್ನೆಲ್ಲಾ ಹಿಡಿಯಲು ಒಬ್ಬ ಬೇಟೆಗಾರ ಬಂದನು. ಈ ಕೊಕ್ಕರೆಗಳನ್ನೆಲ್ಲಾ ನಾವು ಬೇಟೆಯಾಡಬೇಕು ಎಂದು ಭಾವಿಸಿ ತನ್ನ ಬಂದೂಕಿನಿಂದ ಮೇಲೆ ನೋಡಿ ಸುಟ್ಟನು. ಗುಂಡಿನ ಸದ್ದು ಕೇಳಿದ ಕೆಲವು ಕೊಕ್ಕುಗಳು ಬೇಗನೆ ಹಾರಿಹೋದವು. ಆದರೆ ಮೀನು ಮೇಲೆ ಆಸೆಪಟ್ಟ ಕೊಕ್ಕುಗಳು, ಅಪಾಯ ಬರುತ್ತಿದೆ ಎಂದು ತಿಳಿದಿದ್ದರೂ ಅಸಡ್ಡೆಯಿಂದ ಇದ್ದವು. ಅದೆಲ್ಲವೂ ಆ ಬೇಟೆಗಾರನಿಗೆ ಬಲಿಯಾಯಿತು. ಒಳ್ಳೆಯ ಮೀನುಗಳು ಬೇರೆ ಸಿಕ್ಕಿವೆ, ನಾವು ಬೇರೆ ತಪ್ಪಿಸಿಕೋ ಬೇಕು ಎಂದು ಎರಡು ಯೋಚನೆಯೊಂದಿಗೆ ಇದ್ದ ಕೊಕ್ಕರೆಗಳು ಏಟು ಬಿದ್ದು ಕೆಳಗೆ ಬಿದ್ದಾಯ್ತು. ಬೇಟೆಗಾರನ ಕೆಲಸದವನು ಸತ್ತ ಎಲ್ಲಾ ಕೊಕ್ಕರೆಗಳನ್ನು ಒಟ್ಟುಗೂಡಿಸಿ ಒಂದು ಚೀಲದಲ್ಲಿ ಹಾಕುತ್ತಿದ್ದನು. ಆಗ ಆ ಬೇಟೆಗಾರನು ಏನು ಹೇಳಿದ ಗೊತ್ತಾ? ಸತ್ತುಹೋದದ್ದನ್ನು ಬಿಡು, ಅದು ನಮಗೇ, ಏಟು ಬಿದ್ದು ಅರ್ಧ ಜೀವಂತವಾಗಿರುವ ಆ ಕೊಕ್ಕರೆಗಳನ್ನು ಹಿಡಿ. ಅವು ಹಾರಿಹೋಗಲು ಪ್ರಯತ್ನಿಸುತ್ತಲೇ ಇವೆ ಎಂದು ಹೇಳಿದನು. ಜಾಗರೂಕತೆಯಿಂದಿದ್ದ ಎಲ್ಲಾ ಕೊಕ್ಕುಗಳು ಹಾರಿಹೋಗಿ ತಪ್ಪಿಸಿಕೊಂಡವು.

 

ಇದರಂತೆಯೇ, ಪ್ರತಿದಿನ, ಆ ಬೇಟೆಗಾರ ಕೊಕ್ಕರೆಗಳನ್ನು ಬೇಟೆಯಾಡುತ್ತಿದ್ದ ನೋಡಿ. ಮುದ್ದು ಮಕ್ಕಳೇ! ಸೈತಾನನು ನಮ್ಮನ್ನು ತನ್ನ ಬಲೆಗೆ ಬೀಳಿಸಲು ಅನೇಕ ತಪ್ಪುಗಳನ್ನು ಮಾಡಿಸುತ್ತಾನೆ. ನಾವು ಕೂಡ ಜಾಗರೂಕರಾಗಿದ್ದರೆ ತಪ್ಪಿಸಿಕೊಳ್ಳಬಹುದು. ಸ್ವಲ್ಪ ಹೊತ್ತು ತಾನೇ ಮೊಬೈಲ್ ನೋಡ್ತಿನಿ. ಚಿಕ್ಕ ಸುಳ್ಳು ತಾನೇ ಹೇಳ್ತಿನಿ. "ಕೆಟ್ಟ ಮಾತು ಅಷ್ಟೇ ತಾನೆ ಮಾತಾಡುತ್ತೇನೆ ಎಂದು ಅಸಡ್ಡೆಯಾಗಿ ಇದ್ದೋ ಅಂದರೆ ಸೈತಾನನ ಬಲೆಗೆ ಬಿದ್ದು ಅವನಿಗೆ ಗುಲಾಮರಾಗಿ ಬದಲಾಗಿಬಿಡುತ್ತೇವೆ.

        

ನೋಡುದ್ರಾ ಪುಟಾಣಿಗಳೇ, ನಾವು ಪಾಪದ ಭಯಾನಕತೆಯನ್ನು ಅರಿತುಕೊಂಡರೆ, ನಾವು ಹಾರಿಹೋಗಬಹುದು ಮತ್ತು ಸೈತಾನನ ಹಿಡಿತದಿಂದ ತಪ್ಪಿಸಿಕೊಳ್ಳಬಹುದು. ಪಾಪದಲ್ಲಿರುವವರ ಮತ್ತು ಪವಿತ್ರತೆಯ ಬಗ್ಗೆ ಕಾಳಜಿಯಿಲ್ಲದವರ ಬಗ್ಗೆ ಸೈತಾನನಿಗೆ ಕಾಳಜಿ ಇಲ್ಲ. ಅವು ಸತ್ತ ಕೊಕ್ಕುಗಳಂತೆ! ಆದರೆ ಅವನ ಗುರಿ, ತಾವು ಪಾಪಿಗಳು ಎಂದು ತಿಳಿದಿದ್ದರೂ, ಗೊಂದಲಮಯ ಸ್ಥಿತಿಯಲ್ಲಿ ತಮ್ಮ ಜೀವನವನ್ನು ನಡೆಸುವವರೇ. ಆದ್ದರಿಂದ ನೀವು ಜಾಗರೂಕರಾಗಿರಲು ಬಯಸುವುದಾದರೆ, ಯೇಸಪ್ಪನಿಗೆ ಪ್ರೆಯರ್ ಮಾಡಬೇಕು. ಅವರ ಮಾತಿಗೆ ವಿಧೇಯರಾಗಬೇಕು O.k.ನಾ. ಹಾಗೆ ನಾವು ಇರುವ ಸ್ಥಳಗಳಲ್ಲೇ ಕಣ್ಣುಗಳನ್ನು ಮುಚ್ಚಿ ಪ್ರಾರ್ಥಿಸೋಣ. ಪ್ರೀತಿಯ ಯೇಸಪ್ಪಾ, ದಯವಿಟ್ಟು ನಾನು ಸೈತಾನನ ಬಲೆಗೆ ಬೀಳದಂತೆ ಎಚ್ಚರವಾಗಿರಲು ನನಗೆ ಕೃಪೆ ತೋರಿಸಿ ಅಪ್ಪಾ. ನಿಮ್ಮ ವಾಕ್ಯಕ್ಕೆ ವಿಧೇಯರಾಗುವ ಒಳ್ಳೆಯ ಹೃದಯವನ್ನು ನನಗೆ ದಯಪಾಲಿಸಿ ಅಪ್ಪಾ, ಆಮೆನ್.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al