Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.03.2025
Share:

By Village Missionary Movement

Saturday, 01-Mar-2025

ಧೈನಂದಿನ ಧ್ಯಾನ(Kannada) – 01.03.2025

 

ಮೊದಲ ಹೆಜ್ಜೆ

 

"...ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ತಮ್ಮ ಕಾಲುಗಳನ್ನು ಯೊರ್ದನ್ ಹೊಳೆಯ ನೀರಲ್ಲಿ ಇಡುತ್ತಲೇ ಮೇಲಣಿಂದ ಬರುವ ನೀರು ಮುಂದೆ ಹೋಗದೆ ಅಲ್ಲೇ ರಾಶಿಯಾಗಿ ನಿಂತುಕೊಳ್ಳುವದು ಎಂದು ತಿಳಿಸಿದನು." - ಯೆಹೋಶುವ 3:13

 

ಮೋಶೆಯ ನಂತರ ಯೆಹೋಶುವನು ಇಸ್ರಾಯೇಲ್ ಜನರನ್ನು ಮುನ್ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಸುಗ್ಗಿಯ ಸಮಯದಲ್ಲಿ ಯೊರ್ದನ್ ನದಿ ತನ್ನ ದಡಗಳಿಂದ ತುಂಬಿ ಹರಿಯುತ್ತಿತ್ತು. ದೇವರ ಪಾದಗಳ ಬಳಿ ಕಾಯುತ್ತಿದ್ದ ಯೆಹೋಶುವನಿಗೆ, ಕರ್ತನ ಮಂಜೂಷವನ್ನು ಹೊತ್ತ ಯಾಜಕರ ಪಾದಗಳು ಯೊರ್ದನಿನ ನೀರನ್ನು ಮುಟ್ಟಿದ ತಕ್ಷಣ, ಅದು ಹರಿಯುವುದನ್ನು ನಿಲ್ಲಿಸಿ ಒಂದೇ ರಾಶಿಯಾಗಿ ನಿಲ್ಲುತ್ತದೆ ಎಂದು ದೇವರು ಹೇಳಿದರು. ಮೊದಲ ಹೆಜ್ಜೆಯನ್ನು ಯೊರ್ದನ್ ನೀರಿನಲ್ಲಿ ಇಡಬೇಕು. ಆಗ ಮಾತ್ರ ಅದು ನಿಂತು ದಾರಿ ಬಿಡುತ್ತದೆ ಎಂದು ಹೇಳಿದರು. ನಾವು ಮೊದಲ ಹೆಜ್ಜೆ ಇಡುವಾಗ, ದೇವರು ನಮ್ಮೊಂದಿಗಿದ್ದು, ಕಾರ್ಯಗಳನ್ನು ನಡೆಸಿಕೊಡುತ್ತಾರೆ. ಕಾರ್ಯಗಳನ್ನು ಸಂಭವಿಸುವಂತೆ ಮಾಡುವವನು ಯೆಹೋವನೇ. ಆದರೆ ನಾವು ಮೊದಲ ಹೆಜ್ಜೆ ಇಡಬೇಕು. ನಿಮಗೆ ದೇವರಲ್ಲಿ ಧೈರ್ಯ ಮತ್ತು ನಂಬಿಕೆ ಇದ್ದರೆ ಮಾತ್ರ ನೀವು ಮೊದಲ ಹೆಜ್ಜೆ ಇಡಲು ಸಾಧ್ಯ. ಒಂದು ಕಡೆ ಉಕ್ಕಿ ಹರಿಯುವ ನೀರು ಮತ್ತು ಇನ್ನೊಂದು ಕಡೆ ಒಡಂಬಡಿಕೆಯ ಮಂಜೂಷ, ಅವರ ಹೃದಯಗಳಲ್ಲಿ ಒಂದು ರೀತಿಯ ಭಯ ಇದ್ದಿರಬೇಕು. ಆದರೆ ದೇವರು ಅವರ ಪಾದಗಳನ್ನು ನೀರಿನಲ್ಲಿ ಅದ್ದಬೇಕೆಂದು ಹೇಳಿದರು. ದೇವರಲ್ಲಿ ನಂಬಿಕೆ ಮತ್ತು ಭರವಸೆ ಇದ್ದರೆ ಮಾತ್ರವೇ ನಾವು ಮೊದಲ ಹೆಜ್ಜೆ ಇಡಲು ಸಾಧ್ಯ. ನಮ್ಮ ದೇವರು ದೊಡ್ಡವರು ಮತ್ತು ಅದ್ಭುತಗಳನ್ನು ಮಾಡುತ್ತಾರೆ. ಆದರೆ ನಾವು ಕ್ರಿಯೆ ಮಾಡಿದರೆ ಮಾತ್ರವೇ ಅವರು ನಮ್ಮೊಂದಿಗೆ ಸೇರಿ ಕಾರ್ಯ ನಿರ್ವಹಿಸಿ, ನಮ್ಮ ಮೂಲಕ ದೊಡ್ಡ ಕಾರ್ಯಗಳನ್ನು ಮಾಡುತ್ತಾರೆ. ಆದ್ದರಿಂದ ನಮ್ಮ ಜೀವನದಲ್ಲಿ ಕರ್ತನು ಹೇಳುವುದನ್ನು ಮಾಡುವಲ್ಲಿ ಮೊದಲ ಹೆಜ್ಜೆ ಇಡಲು ನಾವು ಹಿಂಜರಿಯಬಾರದು. ದೇವರ ಮೇಲೆ ಭಾರ ಹಾಕಿ ಮೊದಲ ಹೆಜ್ಜೆ ಇಡೋಣ. ದೇವರು ನಮ್ಮೊಳಗಿಂದ ಕಾರ್ಯ ಮಾಡುತ್ತಾರೆ.       

 

ಪ್ರಿಯರೇ! ದಾವೀದನು ತನ್ನ ಕುರಿಗಳನ್ನು ಸಿಂಹ ಮತ್ತು ಕರಡಿಯಿಂದ ರಕ್ಷಿಸಿದಾಗಲೂ, ಗೊಲ್ಯಾತನನ್ನು ಸೋಲಿಸುತ್ತೇನೆಂದು ಅವನು ಎಂದಿಗೂ ಊಹಿಸಿರಲಿಲ್ಲ. ಗೋಲ್ಯಾತನ ಘರ್ಜನೆಯನ್ನು ಕೇಳಿದಾಗ ಅದು ಧೈರ್ಯವನ್ನು ಉಂಟುಮಾಡಿತು. ಅದೇ ರೀತಿ, ನಿಮ್ಮ ಜೀವನ, ಕೆಲಸ ಅಥವಾ ವಿದ್ಯಾಭ್ಯಾಸದಲ್ಲಿ ಮೊದಲ ಹೆಜ್ಜೆ ಇಡಲು ನೀವು ಹಿಂಜರಿಯುತ್ತಿದ್ದೀರಾ? ಹಿಂಜರಿಯಬೇಡಿರಿ. ಯುಗದ ಸಮಾಪ್ತಿಯವರೆಗೂ ಕರ್ತನು ನಿಮ್ಮೊಂದಿಗಿರುತ್ತಾರೆ. ಆದ್ದರಿಂದ, ಹಿಂಜರಿಯಬೇಡಿ, ನಂಬಿಕೆಯಿಂದ ಮೊದಲ ಹೆಜ್ಜೆ ಇಡಿ. ನೀವು ಮಾಡುವ ಎಲ್ಲಾ ಕೆಲಸದಲ್ಲಿ ದೇವರು ನಿಮಗೆ ಜಯವನ್ನು ನೀಡುತ್ತಾರೆ. ಸಮಯ, ಸಂದರ್ಭಗಳು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಕುರಿತು ಯೋಚಿಸದೆ, ಹಿಂಜರಿಕೆಯಿಲ್ಲದೆ ಮೊದಲ ಹೆಜ್ಜೆ ಇಡಿ. ಸರ್ವಶಕ್ತನು ನಿಮ್ಮೊಂದಿಗಿದ್ದಾರೆ. ಕಾರ್ಯಗಳನ್ನು ನೆರವೇರಿಸುವವರು ಕರ್ತನೇ ಅಲ್ಲವೇ? ಮೊದಲ ಹೆಜ್ಜೆ ಇಡಿರಿ ಮತ್ತು ವಿಜಯವನ್ನು ಸ್ವತಂತ್ರಿಸಿಕೊಳ್ಳಿರಿ.

- Bro. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿ ಮತ್ತು ಸೇವಕರ ಪ್ರಯಾಣದ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş