Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.02.2025
Share:

By Village Missionary Movement

Friday, 28-Feb-2025

ಧೈನಂದಿನ ಧ್ಯಾನ(Kannada) – 28.02.2025

 

ಇರುವೆ

 

"ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ" - ಜ್ಞಾನೋಕ್ತಿ 6:6

 

ಕೇವಲ ಒಂದು ಸಣ್ಣ ಇರುವೆ ಅಲ್ವಾ ಎಂದು ಭಾವಿಸಿ ನಾವು ಅದನ್ನು ಹಿಸುಕಿ ಸಾಯಿಸಿಬಿಡುತ್ತೇವೆ. ಆ ಚಿಕ್ಕ ಇರುವೆಯಿಂದ ನಾವು ಕಲಿಯಬಹುದಾದ ವಿಷಯಗಳು ಹಲವು. ಚುರುಕುತನ, ಕಠಿಣ ಪರಿಶ್ರಮ, ಮುಂಚಿತವಾಗಿ ವಸ್ತುಗಳನ್ನು ಶೇಖರಿಸಿ ಸಂಗ್ರಹಿಸುವುದು, ಸಾಲಾಗಿ ಹೋಗುವ ಕ್ರಮಬದ್ಧತೆ ಮುಂತಾದ ಹಲವು ವಿಷಯಗಳಿವೆ. ಆದರೆ ಅದರ ಭೌತಿಕ ರಚನೆಯೂ ಸಹ ಅದೆಲ್ಲದಕ್ಕೂ ಒಂದು ಕಾರಣವಾಗಿದೆ. ಇಂದು, ಅದರ ರಚನೆಯಿಂದ ಕೆಲವು ವಿಷಯಗಳನ್ನು ಕಲಿಯೋಣ.

         

ಹೃದಯವಿಲ್ಲ: ಮೊದಲನೆಯದಾಗಿ ಇರುವೆಗೆ ಕೊಳವೆಯಾಕಾರದ ರಚನೆಯಲ್ಲಿ ಹೃದಯವಿದೆ. ನಮ್ಮ ಹೃದಯದಂತೆ ಪ್ರತ್ಯೇಕವಾಗಿ ಹೃದಯ ಇಲ್ಲ. ಅಂದರೆ, ಅದು ತನ್ನ ಸ್ವಂತ ಇಚ್ಛೆ ಅಥವಾ ಆಯ್ಕೆಯಿಲ್ಲದೆ, ಅದನ್ನು ಸೃಷ್ಟಿಸಿದ ದೇವರ ಇಚ್ಛೆಯ ಪ್ರಕಾರವೇ ಓಡುತ್ತದೆ. ನಮ್ಮ ಸ್ವಂತ ಆಲೋಚನೆಗಳ ಪ್ರಕಾರ ನಾವು ವರ್ತಿಸದೆ, "ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು" ಎಂಬ ಸತ್ಯವೇದದ ವಾಕ್ಯದ ಪ್ರಕಾರ ಅವರ ಹಸ್ತಗಳಲ್ಲಿ ಒಪ್ಪಿಸೋಣ. ನಾವು ಅವರ ಆಲೋಚನೆಯಂತೆ ನಡೆದರೆ, ದೇವರ ಯೋಜನೆಯನ್ನು ಬಿಟ್ಟು ದಾರಿ ತಪ್ಪಬೇಕಾದ ಪರಿಸ್ಥಿತಿಯೇ ಬರುವುದಿಲ್ಲ. ಅವರಿಗೆ ನಮ್ಮ ಮೊದಲ ಆದ್ಯತೆ ಮತ್ತು ಎಲ್ಲಾ ಪ್ರೀತಿಯನ್ನು ನೀಡೋಣ. ನಮಗಾಗಿ ಆತನಿಟ್ಟಿರುವ ಯೋಜನೆ ಅದ್ಭುತವಾಗಿದೆ. ನಾವು ಆತನ ಯೋಜನೆಯಲ್ಲಿ ಬದುಕೋಣ.

      

ಕಿವಿಗಳಿಲ್ಲ: ಇರುವೆಗಳ ತಲೆಯ ಮೇಲೆ ಎರಡು ಸಂವೇದನಾ ಕೊಂಬುಗಳಿರುತ್ತವೆ, ಆದ್ದರಿಂದ ಅವು ಕಂಪನಗಳ ಮೂಲಕ ಶಬ್ದವನ್ನು ಪತ್ತೆ ಮಾಡುತ್ತವೆ. ಇತರರು ಹೇಳುವ ಹೊಗಳಿಕೆಯ ಮತ್ತು ಅವಹೇಳನಕಾರಿ ವಿಷಯಗಳನ್ನು ನಾವು ನಿರ್ಲಕ್ಷಿಸಿದರೆ, ನಾವು ಸಹ ನಮ್ಮ ಓಟದಲ್ಲಿ ವೇಗವಾಗಿ ಓಡಬಹುದು. ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.(ಕೀರ್ತನೆ 55:22) ಎಂಬ ವಚನದ ಪ್ರಕಾರ, ನಮ್ಮನ್ನು ಉದ್ಧರಿಸುವ ಮತ್ತು ಮೇಲಕ್ಕೆತ್ತುವ ದೇವರ ಮೇಲೆ ನಮ್ಮ ಭಾರ ಮತ್ತು ಚಿಂತೆಗಳನ್ನು ಇಟ್ಟು ಬಿಟ್ಟು ನಂಬಿಕೆಯಿಂದಲೂ ಮತ್ತು ಮನಶ್ಯಾಂತಿ ಯಿಂದಲೂ ಬದುಕೋಣ.

  

ಎರಡು ಹೊಟ್ಟೆ ಭಾಗಗಳಿವೆ: ಇರುವೆಗಳಿಗೆ ಎರಡು ಹೊಟ್ಟೆಭಾಗಗಳಿವೆ. ಅವು ಒಂದರಿಂದ ತೆಗೆದುಕೊಂಡು ಇನ್ನೊಂದಕ್ಕೆ ತಿನ್ನಿಸುತ್ತವಂತೆ. ಅದೇ ರೀತಿ, ನಾವು ಸಹ ಇತರರಿಗೆ ಕೊಟ್ಟು ಬದುಕುವಾಗ ಒಂದು ರೀತಿಯ ಸಂತೋಷವನ್ನು ಕಂಡುಕೊಳ್ಳಬಹುದು. ಆದರೆ ಇಂದು ಜನರು ನನಗಾಗಿ, ನನಗಾಗಿ ಎಂದು ತಮಗಾಗಿಯೇ ಕಷ್ಟಪಟ್ಟು ಸೇರಿಸಿಟ್ಟುಕೊಳ್ಳುತ್ತಿದ್ದಾರೆ. ದೇವರು ನಮಗೆ ಎರಡು ಕೈಗಳನ್ನು ಕೊಟ್ಟಿದ್ದಾರೆ, ಒಂದು ದೇವರಿಂದ ಪಡೆಯಲು ಮತ್ತು ಇನ್ನೊಂದು ಇತರರಿಗೆ ನೀಡಲು. "ನೀನಾದರೆ ಧರ್ಮಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ (ಮತ್ತಾ. 6:3) ಎಂದು ದೇವರು ಹೇಳುತ್ತಾರೆ. "ಎರಡೂ ಒಂದೇ ದೇಹದಲ್ಲಿದ್ದರೂ ತಿಳಿಯದೆ ಕೊಡು" ಎಂದು ಹೇಳುತ್ತಾರೆ. ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಭಾಗ್ಯವಿದೆ ಎಂದು ಯೇಸು ಕ್ರಿಸ್ತನು ಹೇಳುತ್ತಾರೆ. ನಾವು ಸಹ ಇತರರಿಗೆ ಕೊಟ್ಟು ಆಶೀರ್ವಾದ ಮತ್ತು ಪ್ರಯೋಜನಗಳನ್ನು ಪಡೆದುಕೊಳ್ಳೋಣ.

       

ಈ ಮೂರು ವಿಷಯಗಳು ಪ್ರತಿಯೊಬ್ಬ ಕ್ರೈಸ್ತನು ತನ್ನ ಜೀವನದಲ್ಲಿ ಅಭ್ಯಾಸ ಮಾಡಬೇಕಾದವುಗಳಾಗಿವೆ. ನಮ್ಮನ್ನು ಆಗಾಗ್ಗೆ ಎಡವಿ ಬೀಳಿಸುವ ವಿಷಯಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಚುರು-ಚುರುಕಾಗಿ ನಮ್ಮ ಕಾರ್ಯಗಳಲ್ಲಿ ಗಮನಾರ್ಹವಾಗಿ ಕ್ರಿಯೆ ಮಾಡಬೇಕು. ಆಗ ನಮ್ಮ ಜೀವನ ಇತರರಿಗೆ ಮಾದರಿಯಾಗುವುದರಲ್ಲಿ ಸಂದೇಹವೇ ಇಲ್ಲ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಗಳಿಗೆ ವಿದ್ಯಾವಂತ, ಪ್ರತಿಭಾನ್ವಿತ ಯೌವನಸ್ಥರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al