By Village Missionary Movement
Thursday, 27-Feb-2025ಧೈನಂದಿನ ಧ್ಯಾನ(Kannada) – 27.02.2025
ಸತ್ಯವೇದದಲ್ಲಿ ಜಿಂಕೆ
"ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ ಹಾಗೆಯೇ ನನ್ನ ಮನವು ನಿನ್ನನ್ನು ಬಯಸುತ್ತದೆ" - ಕೀರ್ತನೆ 42:1
ಕರ್ತನು ಕಾಡುಮೃಗಗಳನ್ನು, ಹರಿದಾಡುವ ಜೀವಿಗಳನ್ನು, ಕಾಡುಮೃಗಗಳನ್ನು, ನೀರಿನಲ್ಲಿ ಚಲಿಸುವ ಎಲ್ಲಾ ಜೀವಿಗಳನ್ನು ಮತ್ತು ಆಕಾಶದ ಎಲ್ಲಾ ಪಕ್ಷಿಗಳನ್ನು ಸೃಷ್ಟಿಸಿದನು. ಯೋಬ 12:7 ರಲ್ಲಿ, "ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು" ಹೀಗೆ ಸತ್ಯವೇದದಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನಮ್ಮ ಜೀವನದೊಂದಿಗೆ ಹೋಲಿಸಿ ಚಿಂತಿಸಿ ನೋಡುವಂತೆ ಯೋಬನು ಹೇಳುತ್ತಾರೆ. ಅವು ನಮಗೆ ಕೆಲವು ಪಾಠಗಳನ್ನು ಕಲಿಸುತ್ತಿವೆ.
ಈಗ ಬೈಬಲ್ ಜಿಂಕೆಗಳ ಬಗ್ಗೆ ಏನು ಹೇಳುತ್ತದೆ ಎಂದು ನೋಡೋಣ. ಜಿಂಕೆಗಳು ಸಾಮಾನ್ಯವಾಗಿ 60 ಕ್ಕೂ ಹೆಚ್ಚು ಜಾತಿಗಳನ್ನು ಹೊಂದಿವೆ ಎಂದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ. ಕಡಿದಾದ ಪರ್ವತಗಳು ಮತ್ತು ಎತ್ತರದ ಸ್ಥಳಗಳಲ್ಲಿ ಬಹು ವೇಗವಾಗಿ ಅಂದರೆ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಅಡವಿಯ ಜಿಂಕೆಯು ಓಡಬಲ್ಲದಂತೆ. 2 ಸಮುವೇಲ 2:18 ರಲ್ಲಿ, ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದಾನೆ ಎಂದು ಬರೆಯಲ್ಪಟ್ಟಿದೆ. ದಾವೀದನು ಸೌಲನನ್ನೂ ಒಳಗೊಂಡಂತೆ ತನ್ನ ಎಲ್ಲಾ ಶತ್ರುಗಳಿಂದ ಬಿಡುಗಡೆ ಹೊಂದಿದಾಗ, ಅವನು ಹೀಗೆ ಹೇಳಿದನು, "ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ. ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ" ಎಂದು 2 ಸಮು. 22:34 ಮತ್ತು ಕೀರ್ತನೆ 18:33 ರಲ್ಲೂ ಉಲ್ಲೇಖಿಸಲಾಗಿದೆ. "ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕುಮಾಡಿ ಉನ್ನತಪ್ರದೇಶಗಳಲ್ಲಿ ನನ್ನನ್ನು ನಡಿಸುತ್ತಾನೆ." ಹಬಕ್ಕೂಕ 3:19. ಈ ವಚನವು ಹಬಕ್ಕೂಕನ ಅಚಲ ನಂಬಿಕೆಯನ್ನು ತೋರಿಸುತ್ತದೆ. ನಾವು ಸಹ ಅಂತಹ ನಂಬಿಕೆಯುಳ್ಳವರಾಗಿ ಇರೋಣ!
ದಾವೀದನು ದೇವರ ಸನ್ನಿಧಿಯಲ್ಲಿ ಬಂದು ನಿಲ್ಲುವ ತನ್ನ ಪ್ರಾರ್ಥನೆಯ ಸಮಯದ ಬಗ್ಗೆ ಯೋಚಿಸುವಾಗ, ಅವರ ಮನಸ್ಸಿನಲ್ಲಿ ನೀರಿಗಾಗಿ ಹಾತೊರೆಯುವ ಬಾಯಾರಿದ ಜಿಂಕೆಯ ಹಾಗೆ ಭಾವಿಸುತ್ತಾರೆ. ಬಾಯಾರಿದಾಗ ಜಿಂಕೆ ಹೇಗೆ ಕಾಡುಗಳಲ್ಲಿ ಹೊಳೆಗಳನ್ನು ಹುಡುಕುತ್ತಾ ಅಲೆದಾಡುತ್ತದೆಯೋ ಹಾಗೆಯೇ ನಮ್ಮ ಆತ್ಮಗಳು ದೇವರಿಗಾಗಿ ಹಾತೊರೆಯಬೇಕು. ದೇವರೊಂದಿಗಿನ ಅನ್ಯೋನ್ಯತೆ, ಬೈಬಲ್ ಓದುವಿಕೆ ಮತ್ತು ನಿರಂತರ ಪ್ರಾರ್ಥನೆಗಾಗಿ ಹೆಚ್ಚಿನ ಬಾಯಾರಿಕೆಯನ್ನು ದೇವರು ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೊಟ್ಟು ಉಪಯೋಗಿಸಲಿ! ನನಗೆ ಪ್ರಿಯವಾದವರೇ! ಇಂತಹ ಬಾಯಾರಿಕೆ ನಮ್ಮಲ್ಲಿ ದಿನೇ ದಿನೇ ಬೆಳೆದು ಸೇವೆಯಾಗಿ ಬೆಳೆಯಲಿ.
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ಹಸಿದವರಿಗೆ ಆಹಾರ ನೀಡುವ ಕಾರ್ಯಕ್ರಮದಿಂದ ಪ್ರಯೋಜನ ಪಡೆದವರು ಯೇಸುವಿನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482