By Village Missionary Movement
Wednesday, 26-Feb-2025ಧೈನಂದಿನ ಧ್ಯಾನ(Kannada) – 26.02.2025
ಅನಿಯಂತ್ರಿತ ಕಾಡು ಕತ್ತೆ
"ಕಾಡುಕತ್ತೆಯನ್ನು ಬಿಡುಗಡೆ ಮಾಡಿ ಕಳುಹಿಸಿದವನಾರು?..." - ಯೋಬ 39:5
ನಾವು ಮನೆಯಲ್ಲಿ ಸಾಕುವ ಆಡು, ಹಸು ಮತ್ತು ಕತ್ತೆಗಳನ್ನು ಕಾಡು ಪರಿಸರದಲ್ಲಿ ಇರಿಸಿದಾಗ, ಅವುಗಳ ಸ್ವಭಾವವೇ ಬದಲಾಗುತ್ತದೆ. ಇಲ್ಲಿ ನಾವು ನೋಡುತ್ತಿರುವುದು ಕಾಡು ಕತ್ತೆಯೊಂದು ಮುಕ್ತವಾಗಿ ತಿರುಗಾಡುವುದನ್ನು. ನಾವು ಅದರ ಬಗ್ಗೆ ಯೋಬ 39:5-8 ನೇ ವಾಕ್ಯಗಳಲ್ಲಿ ತಿಳಿಯುತ್ತೇವೆ. ಅವು ನಮ್ಮನ್ನು ನಡುಗಿಸುತ್ತವೆ. ಅದು ಮರುಭೂಮಿಯನ್ನು ತನ್ನ ಮನೆಯನ್ನಾಗಿ ಮಾಡಿಕೊಂಡಿದೆ ಮತ್ತು ಅನುಪಯುಕ್ತ ಉಪ್ಪಿನ ಜೌಗು ಪ್ರದೇಶವನ್ನು ತನ್ನ ಆಶ್ರಯ ತಾಣವನ್ನಾಗಿ ಮಾಡಿಕೊಂಡಿದೆ. ಒಂದು ವೇಳೆ ಊರಿನೊಳಗೆ ಬಂದರೆ, ಪಟ್ಟಣದ ಶಬ್ದ ಮತ್ತು ಸಂಚಾರದ ಸಂಕೇತಗಳು ಯಾವುದನ್ನೂ ಕಂಡುಕೊಳ್ಳುವುದಿಲ್ಲ. ಇದನ್ನು ಓದುತ್ತಿರುವಾಗಲೇ, ದ್ವಿಚಕ್ರ ವಾಹನಗಳಲ್ಲಿ, ಕಣ್ಣು, ಮಣ್ಣು ತಿಳಿಯದೆ, ಸಿಗ್ನಲ್ ಗಳನ್ನು ಸಹ ಗಮನಿಸದೆ ಇಷ್ಟಬಂದಂತೆ ವಾಹನಗಳನ್ನು ನಡೆಸುವ ಯುವಕರು ನಮ್ಮ ಕಣ್ಣೆದುರಿಗೆ ಬರುತ್ತಿದ್ದಾಲ್ಲವೇ? ಹೌದು, ಹಲವು ಬಾರಿ ನಾವು ಕೂಡ ಈ ಕಾಡು ಕತ್ತೆಗಳಂತೆ, ದೇವರಿಗೆ ಭಯಪಡವುದಿಲ್ಲ, ಮನುಷ್ಯರನ್ನೂ ಗೌರವಿಸುವುದಿಲ್ಲ. ಕಾಲು ಹೋಗುವ ದಾರಿಯಲ್ಲೆಲ್ಲಾ ನಡೆಯುವ ಮನಸ್ಸುಳ್ಳವರಾಗಿ ವರ್ತಿಸುತ್ತಿದ್ದೇವೆ.
ಕುಟುಂಬ ಸಂಬಂಧಗಳಲ್ಲಿನ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಹಿರಿಯರ ಮಾತನ್ನು ಕೇಳಲು ನಿರಾಕರಿಸುತ್ತೇವೆ. ಯೌವನಸ್ಥರು ಮಾತ್ರವೇನಾ? ಇಲ್ಲವೇ, ಇಲ್ಲ, ನಾವೆಲ್ಲರೂ ಕೂಡ. ಕಾರಣ, ನಾವು ಯಾರಿಗೂ ಬದ್ಧರಾಗಿರಲು ನಿರಾಕರಿಸುತ್ತೇವೆ. ಹಲವು ಬಾರಿ ನಾವು ಸ್ವಯಂ ನಿಯಂತ್ರಣವಿಲ್ಲದೆ ವರ್ತಿಸುತ್ತೇವೆ. ಕಾಡು ಕತ್ತೆಗಳು ಬಲಿಷ್ಠವಾಗಿದ್ದು ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು. ಆದರೆ ಗುರಿಯಿಲ್ಲದ ಓಟ! ನಾವು ಕೂಡ ಇಷ್ಟೊಂದು ಬಲಿಷ್ಠರು ಮತ್ತು ಪ್ರತಿಭಾನ್ವಿತರಾಗಿರಬಹುದು. ಆದರೆ ಪ್ರತಿಭೆ, ಶಕ್ತಿ, ಜ್ಞಾನ ಮತ್ತು ವಿವೇಕವು ಒಳ್ಳೆಯ ಕಾರ್ಯಗಳಿಗೆ ಉಪಯೋಗವಾಗುತ್ತಿದೆಯೇ? ನಾವು ಕುಟುಂಬದ ಒಳಿತಿಗಾಗಿ ಮತ್ತು ಸಾಮಾಜಿಕ ಬದಲಾವಣೆಗಾಗಿ ಕೆಲಸ ಮಾಡುತ್ತಿದ್ದೇವೆಯೇ? ನನ್ನ ಪ್ರತಿಭೆ ರಾಜ್ಯ ಬೆಳೆಯಲು ಸಹಾಯ ಮಾಡುತ್ತಿದೆಯೇ?
ಪ್ರಿಯ ಮಿತ್ರರೇ! ನಾವು ಯಾರ ಮಾತನ್ನೂ ಪಾಲಿಸದೆ, ಕಾಡು ಕತ್ತೆಗಳಂತೆ ಬದುಕುತ್ತಿದ್ದೇವೆಯೇ? ಒಂದು ಕ್ಷಣ ಅದರ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ. "ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ." (1 ಕೊರಿಂ 11:31). ದೇವರು ನಮ್ಮ ಮೇಲೆ ಕರುಣೆಯುಳ್ಳವರಾಗಿದ್ದಾರೆ. "ನಮ್ಮ ಪಾಪಗಳಿಗೆ ತಕ್ಕಂತೆ ನಮಗೆ ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳ ಪ್ರಕಾರ ನಮ್ಮನ್ನು ದಂಡಿಸಲಿಲ್ಲ." (ಕೀರ್ತನೆ 103:10) ಎಂಬುದನ್ನು ಮರೆಯಬೇಡಿ. ಕಾಡು ಕತ್ತೆಯಂತೆ ಅಲ್ಲ, ಯೇಸುವನ್ನು ಹೊತ್ತ ಕತ್ತೆಯಂತೆ ಬದುಕಲು ಶ್ರಮಿಸೋಣ.
ನಾವು ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳೋಣ ಮತ್ತು ಸರಿಮಾಡಲು ದೇವರ ಕೈಗಳಿಗೆ ನಮ್ಮನ್ನು ಒಪ್ಪಿಸೋಣ. "ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನ ಕೃಪೆಯು ಆತನಿಗೆ ಭಯಪಡುವವರ ಮೇಲೆ ಅಷ್ಟು ಅಪಾರವಾಗಿದೆ." (ಕೀರ್ತನೆ 103:11)
- Rev. ಎಲಿಜಬೆತ್
ಪ್ರಾರ್ಥನಾ ಅಂಶ:
ಪ್ರತಿ ರಾಜ್ಯದಲ್ಲಿ ಒಂದು ಲಕ್ಷ ಯುವಕರು ಭಾಗವಹಿಸುವ ಶಿಬಿರಗಳನ್ನು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482