Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.02.2025
Share:

By Village Missionary Movement

Tuesday, 25-Feb-2025

ಧೈನಂದಿನ ಧ್ಯಾನ(Kannada) – 25.02.2025

 

ಗುಬ್ಬಿ 

 

"ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು." - ಮತ್ತಾ. 10:31

 

ಗಾತ್ರದಲ್ಲಿ ತುಂಬಾ ಚಿಕ್ಕದು, ಬಲವಾದ ಹಕ್ಕಿಯೂ ಅಲ್ಲ; ಇದು ನಿಂತು ವಿಸ್ಮಯದಿಂದ ನೋಡುವಷ್ಟು ಅದ್ಭುತವಾದ ಬಣ್ಣವಲ್ಲ. ಇದರ ತೂಕ ಕೇವಲ 27 ಗ್ರಾಂ ನಿಂದ 39 ಗ್ರಾಂ! ಅಂದರೆ ಅದು 50 ಗ್ರಾಂ ತೂಕವೂ ಇಲ್ಲ. ಆದರೆ ಮತ್ತಾಯ 10:29 ರಲ್ಲಿ ಈ ಅತ್ಯಲ್ಪ ಚಿಕ್ಕ ಗುಬ್ಬಚ್ಚಿಯ ಬಗ್ಗೆ ಯೇಸು ಹೇಳಿದ ಮಾತುಗಳು ನಮ್ಮನ್ನು ಬೆರಗುಗೊಳಿಸುತ್ತದೆ. ಹೌದು, "ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; (ತುಂಬಾ, ತುಂಬಾ, ಅಗ್ಗದ ಬೆಲೆ) ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು" ಎನ್ನುತ್ತಾರೆ. ಬೆಲೆ ಬೇಕಾದರೆ ಅಗ್ಗವಾಗಿರಬಹುದು. ಆದರೆ ಅವು ದೇವರ ದೃಷ್ಟಿಯಲ್ಲಿ ಅಮೂಲ್ಯವಾಗಿದ್ದವು. ಸೃಷ್ಟಿಕರ್ತನು ಅದರ ಬಗ್ಗೆ ಆಸಕ್ತಿಯುಳ್ಳವರಾಗಿದ್ದಾರೆ. ಅವುಗಳು ಆತನ ದೃಷ್ಟಿಯಲ್ಲಿ ಅತ್ಯಲ್ಪವೆಂದು ಪರಿಗಣಿಸಲ್ಪಡಲಿಲ್ಲ ಎಂಬುದೇ ನಾವು ಅರಿತುಕೊಳ್ಳಬೇಕಾದ ಸಂದೇಶ!

      

ಮತ್ತಾಯ 10:31 ರಲ್ಲಿ "ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು" ಎಂದು ಸತ್ಯವೇದವು ಹೇಳುತ್ತಿದೆ. ಬಹುಶಃ ಇದನ್ನು ಓದುತ್ತಿರುವ ನೀವು ಸಹ, ಸಮಾಜದಲ್ಲಿ ಇತರರು ನಿಮ್ಮನ್ನು ಕೀಳಾಗಿ ಕಾಣುವ ಸಮಯಗಳಲ್ಲಿ ನಿರುತ್ಸಾಹಗೊಳ್ಳಬಾರದು. "ನೀವು ವಿಶೇಷವಾದವರು" ನಮ್ಮನ್ನು ಎಂದಿಗೂ ಬಿಟ್ಟುಕೊಡದ ಒಂದು ದೇವರಿದ್ದಾರೆ. ಕೀರ್ತನೆ 84:3 ರಲ್ಲಿ, ದಾವೀದನು ಗುಬ್ಬಚ್ಚಿಯ ಕುರಿತು ಹೇಳುವಾಗ, "ನಿನ್ನ ವೇದಿಗಳ ಸಮೀಪದಲ್ಲಿಯೇ ಗುಬ್ಬಿಗೆ ಮನೆಯೂ ಪಾರಿವಾಳಕ್ಕೆ ಮರಿಮಾಡುವ ಗೂಡೂ ದೊರಕಿತಲ್ಲಾ! ಎಂದು ಆಶ್ಚರ್ಯಚಕಿತರಾಗಿ ಮೆಚ್ಚಿಕೊಳ್ಳುವುದನ್ನು ನೋಡಬಹುದು. ಈ ಪುಟ್ಟ ಗುಬ್ಬಚ್ಚಿಗೆ ದೇವರ ವಾಸಸ್ಥಾನದಲ್ಲಿ ಒಂದು ಮನೆ ಸಿಕ್ಕಿತು.

       

ಈ ಗುಬ್ಬಚ್ಚಿಯಂತೆಯೇ, ದೀನಾವಸ್ಥೆಯಲ್ಲಿದ್ದ ಜನರು ಕರುಣೆಯನ್ನು, ಮನಶ್ಯಾಂತಿಯನ್ನು ಹೊಂದುವಂತೆ ಯೇಸು ಕುರುಡರು, ಕಿವುಡರು, ಕುಂಟರು ಮತ್ತು ಪಾರ್ಶ್ವವಾಯು ರೋಗಿಗಳು ಹೀಗೆ ಅನೇಕ ಬಲಹೀನರಿಗೆ ಆಲಯದಲ್ಲಿ ಸಬ್ಬತ್ ದಿನದಂದು ಸ್ವಸ್ಥತೆಯನ್ನು ಉಂಟುಮಾಡಿದರು. ಆತನ ವಾಸಸ್ಥಾನದಲ್ಲಿ ದೀನ ಜನರಿಗೆ ಸಮಾಧಾನ ಇದೆ ಎಂಬುದನ್ನು ತಿಳಿಯಬಹುದಲ್ಲಾ! ದೇವರ ಆಲಯ ಶಾಶ್ವತ ಆನಂದವನ್ನು ಕೊಡುವ ಸ್ಥಳವಾಗಿದೆ. "ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಅವುಗಳಲ್ಲಿ ಒಂದನ್ನು ಸಹ ದೇವರ ದೃಷ್ಟಿಯಲ್ಲಿ ಮರೆತುಬಿಡಲಾಗುವುದಿಲ್ಲ" ಎಂದು ಬರೆದಿದೆ. ಪ್ರಿಯರೇ! ಈ ಪುಟ್ಟ ಗುಬ್ಬಚ್ಚಿಗಳನ್ನು ಮರೆಯದ ದೇವರು, ಅವುಗಳಿಗಿಂತ ನಮ್ಮನ್ನು ಹೆಚ್ಚು ವಿಶೇಷವಾಗಿ ನೆನೆಸಿ ಆಶೀರ್ವದಿಸುತ್ತಿರುವುದು ನಮಗೆ ಸಿಕ್ಕಿರುವ ದೊಡ್ಡ ವರವಲ್ಲವೇ? ಈ ಲೋಕದ ಜನರು ಮತ್ತು ನಮ್ಮ ಸಂಬಂಧಿಕರು ನಮ್ಮನ್ನು ಮರೆತರೂ, ನಾನು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ ಎಂದು ನಮ್ಮ ದೇವರು ವಾಗ್ದಾನ ಮಾಡಿದ್ದಾರೆ.

      

ಪ್ರಿಯರೇ! ನಾವು ಅಲ್ಪರಲ್ಲ. ದೇವರ ದೃಷ್ಟಿಯಲ್ಲಿ ವಿಶೇಷವಾದವರು. ಆತನ ಚಿತ್ತವಿಲ್ಲದೆ ನಾವು ಬೀಳುವುದಿಲ್ಲ. ನಾವು ಭಯಪಡುವ ಅಗತ್ಯವಿಲ್ಲ. ಪುಟ್ಟ ಹಕ್ಕಿಯ ಬಗ್ಗೆ ಕಾಳಜಿ ವಹಿಸುವವರು, ನಮ್ಮ ಬಗ್ಗೆಯೂ ಕಾಳಜಿ ವಹಿಸುತ್ತಾರೆ. "Yes, you are special"! ಆ ಪುಟ್ಟ ಹಕ್ಕಿ ಗುಬ್ಬಚ್ಚಿಯ ಮೂಲಕ ನಮಗೆ ಕಲಿಸಿಕೊಟ್ಟ ಪಾಠಗಳು ಎಷ್ಟು! ಎಷ್ಟೆಷ್ಟೋ! ನಿಮ್ಮ ಹೃದಯವು ಸಂತೋಷದಿಂದ ತುಂಬಿರಲಿ.

- Mrs. ಎಮೀಮಾ ಸೌಂದರರಾಜನ್

 

ಪ್ರಾರ್ಥನಾ ಅಂಶ:

ಶಾಲೆ ಹಾಸ್ಟೆಲ್ ಸೇವೆಗಳ ಮೂಲಕ ನಾವು ಭೇಟಿಯಾದ ಮಕ್ಕಳು ಯೇಸುವಿನ ಸಂತತಿಗಳಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş