By Village Missionary Movement
Monday, 24-Feb-2025ಧೈನಂದಿನ ಧ್ಯಾನ(Kannada) – 24.02.2025
ಸಿಂಹ
"...ಯೂದಾ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಜಯಹೊಂದಿದನು... ಎಂದು ಹೇಳಿದನು" - ಪ್ರಕಟಣೆ. 5:5
ಕರ್ತನಾದ ಯೇಸುಕ್ರಿಸ್ತನನ್ನು ಪರಿಶುದ್ಧ ಗ್ರಂಥವು ಸಿಂಹಕ್ಕೆ ಹೋಲಿಸಿ ದೃಷ್ಟಾಂತವಾಗಿ ಹೇಳುತ್ತದೆ. ಆತನ ಹೆಸರಿನಲ್ಲಿ ನಂಬಿಕೆಯುಳ್ಳವರಾಗಿ ಯಾರಾರು ಆತನನ್ನು ಸ್ವೀಕರಿಸಿದರೋ ಅವರೆಲ್ಲರೂ ಜನರು ಆತನ ಮಕ್ಕಳು, ಅಂದರೆ ಸಿಂಹದ ಮರಿಗಳು! ಸಿಂಹದಲ್ಲಿ ಕಂಡುಬರುವ ಗುಣಲಕ್ಷಣಗಳು ಅವರ ಮಕ್ಕಳಾದ ನಮ್ಮಲ್ಲಿಯೂ ಕಂಡುಬರುತ್ತಿವೆಯೇ ಎಂಬುದನ್ನು ಒಂದು ಕ್ಷಣ ಧ್ಯಾನಿಸೋಣ.
ಧೈರ್ಯಶಾಲಿ (ಜ್ಞಾನೋಕ್ತಿ 28:1): ಸಿಂಹವು ಘರ್ಜಿಸಿದಾಗ, ಕಾಡಿನ ಪ್ರಾಣಿಗಳಲ್ಲಿ ಭಯ ಉಂಟಾಗುತ್ತದೆ. ಅದೇ ರೀತಿ, ನೀತಿವಂತರಲ್ಲಿಯೂ ಧೈರ್ಯವಿರುತ್ತದೆ. ನಮ್ಮ ಕೆಲವು ಪಾಪಗಳು, ಉದಾಹರಣೆಗೆ ಅಪನಂಬಿಕೆ, ನಮ್ಮನ್ನು ಧೈರ್ಯ ಕಳೆದುಕೊಳ್ಳುವಂತೆ ಮಾಡಿ ಬೆಂಕಿಯೂ, ಗಂಧಕವೂ ಉರಿಯುವ ಕಡಲಿನಲ್ಲಿ ಪಾಲು ಹೊಂದುವಂವಂತೆ ಮಾಡುತ್ತದೆ. ಆದಾಮನು ಪಾಪ ಮಾಡಿದಾಗ, ಅವನು ಧೈರ್ಯವನ್ನು ಕಳೆದುಕೊಂಡು ಭಯದಿಂದ ಕರ್ತನಿಂದ ತನ್ನನ್ನು ಮರೆಮಾಡಿಕೊಂಡನು. ಹೌದು, ನಾವು ದೇವರು ಮತ್ತು ಮನುಷ್ಯರ ಮುಂದೆ ನೀತಿವಂತ ಜೀವನವನ್ನು ನಡೆಸಿದರೆ ಸಿಂಹದಂತೆ ಧೈರ್ಯಶಾಲಿಗಳಾಗಿರಬಹುದು.
ಹಿಂದೆ ಸರಿಯದಿರುವುದು (ಜ್ಞಾನೋಕ್ತಿ 30:30): ಯಾವುದೇ ಸಂದರ್ಭ ಬಂದರೂ ಸಿಂಹವು ತನ್ನ ಮುಂಗಾಲುಗಳನ್ನು ಹಿಂದಕ್ಕೆ ಹಾಕುವುದಿಲ್ಲ. "ನೇಗಿಲಿನ ಮೇಲೆ ಕೈಯಿಟ್ಟು ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ" ಎಂದು ಯೇಸು ಹೇಳುತ್ತಾರೆ. ಇಂದಿನ ಕಾಲದಲ್ಲಿ, ಅನೇಕ ಜನರು ಲೌಕಿಕ ಸಂಸ್ಕೃತಿಗಳು, ಮೂಢನಂಬಿಕೆಗಳು ಮತ್ತು ಸಂಪ್ರದಾಯಗಳಿಂದ ಸಿಕ್ಕಿಬಿದ್ದು ಹಿಂಜರಿತದ ಸ್ಥಿತಿಯಲ್ಲಿ ಬದುಕುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವನು ಹಿಂದೆ ಸರಿದರೆ ನನ್ನ ಆತ್ಮಕ್ಕೆ ಅವನಲ್ಲಿ ಸಂತೋಷವಿಲ್ಲ ಎಂದು ನಾವು ಇಬ್ರಿಯ 10:38 ರಲ್ಲಿ ಓದುತ್ತೇವೆ. ನಾವು ಕಷ್ಟ ಮತ್ತು ಪ್ರತಿಕೂಲತೆಯಿಂದ ಹಿಂದೆ ಸರಿಯುತ್ತಿದ್ದೇವೆ ಎಂಬಂತೆ ಬದುಕಬಾರದು.
ಆಹಾರದ ಕೊರತೆ ಇರುವುದಿಲ್ಲ (ನಹೂಮ 2:12): ಸಿಂಹದ ಗುಹೆಯಲ್ಲಿ ಯಾವಾಗಲೂ ಸಾಕಷ್ಟು ಆಹಾರ ಇರುತ್ತದೆ (ಕೀರ್ತನೆ 34:10). ಸಿಂಹದ ಮರಿಗಳು ಹೊಟ್ಟೆಗಿಲ್ಲದೆ ಹಸಿದಾವು, ಆದರೆ ಕರ್ತನನ್ನು ಹುಡುಕುವವರಿಗೆ ಯಾವ ಮೇಲಿಗೂ ಕೊರತೆಯಿಲ್ಲ ಎಂದು ನೋಡುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ವೇದವಾಕ್ಯಗಳ ಆಹಾರವನ್ನು ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದ ಹಲಗೆಯ ಮೇಲೆ ಬರೆದಿಟ್ಟುಕೊಳ್ಳಬೇಕು.
ಪ್ರಿಯರೇ ! ನಾವು ಸ್ವಸ್ಥಬುದ್ಧಿಯುಳ್ಳವರಾಗಿ ಎಚ್ಚರವಾಗಿರಲು ಕರೆಯಲ್ಪಟ್ಟಿದ್ದೇವೆ. ಏಕೆಂದರೆ ನಮ್ಮ ವಿರೋಧಿಯಾದ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ಸುತ್ತಾಡುತ್ತಿದ್ದಾನೆ. ನಾವು ಯೇಸುವಿನಂತೆ ಜಯಶಾಲಿಗಳಾಗಿ ಬದುಕೋಣ. ಹಾಗೆ ಮಾಡಲು ದೇವರು ತಾನೇ ಇದಕ್ಕೆ ತಕ್ಕ ಕೃಪೆಯನ್ನು ನಮಗೆ ನೀಡಲಿ! ಆಮೆನ್.
- Mrs. ಜೆಬಕನಿ ಶೇಖರ್
ಪ್ರಾರ್ಥನಾ ಅಂಶ:
ಹಸ್ತಪ್ರತಿ ಸೇವೆಗಳ ಮೂಲಕ ಹಸ್ತಪ್ರತಿಯನ್ನು ಸ್ವೀಕರಿಸುವವರು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482