Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.05.2021
Share:

By Village Missionary Movement

Thursday, 13-May-2021

ಧೈನಂದಿನ ಧ್ಯಾನ(Kannada) – 13.05.2021

ಕಾಣುವುದಕ್ಕಿಂತ ಮೊದಲು ಸಾವಿಲ್ಲ

"...ಕ್ರಿಸ್ತನನ್ನು ಕಾಣುವದಕ್ಕಿಂತ ಮುಂಚೆ ನೀನು ಸಾಯುವದಿಲ್ಲವೆಂದು..." - ಲೂಕ 2:26

1985 ರಲ್ಲಿ ಪೋರ್ಚುಗಲ್‌ನ ಮಡೈರಾ ಎಂಬ ಸಣ್ಣ ದ್ವೀಪದಲ್ಲಿ ವಾಸಿಸುತ್ತಿದ್ದ ತಾಯಿ, ತನ್ನ ಗರ್ಭದಲ್ಲಿ ಬೆಳೆಯುತ್ತಿರುವ 4 ತಿಂಗಳ ಭ್ರೂಣವನ್ನು ಗರ್ಭಪಾತ ಮಾಡಬೇಕೆಂದು ಭಾವಿಸಿದ್ದರು.  ಜೀವನದಲ್ಲಿ ಹತಾಶೆ ಮತ್ತು ಆರ್ಥಿಕವಾದ ಇಕ್ಕಟ್ಟುಗಳ ಮಧ್ಯೆ, ಈ ಮಗುವಿಗೆ ಜನ್ಮ ನೀಡಿ ನಂತರ ಏನು ಮಾಡುವುದು ಎಂಬ ಆಲೋಚನೆಯು ಅವರನ್ನು ಈ ಪರಿಸ್ಥಿತಿಗೆ ತಳ್ಳಿತ್ತು.  ಆದರೆ ನಡೆದದ್ದು ಏನು ಗೊತ್ತಾ?  ಅವರು ಎಷ್ಟೇ ಪ್ರಯತ್ನಿಸಿದರೂ ಭ್ರೂಣವು ನಶಿಸಲಿಲ್ಲ.  ಬದಲಾಗಿ, ಅವರಿಗೆ 1985 ರಲ್ಲಿ ಗಂಡು ಮಗು ಜನಿಸಿತು.  ದೈವಭಕ್ತಿಯುಳ್ಳ ತಾಯಿ ತನ್ನ ತಪ್ಪನ್ನು ಅರಿತುಕೊಂಡು ಮಗುವಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಎಂದು ಹೆಸರಿಟ್ಟರು.  ಅವರು ಇಂದಿನ ಫುಟ್ಬಾಲ್ ಆಟದ ಸ್ಟಾರ್ ಆಟಗಾರರಾಗಿದ್ದಾರೆ ಮತ್ತು ಅವರ ಸ್ಕೋರಿಂಗ್ ವಿಧಾನವು ತುಂಬಾ ವಿಚಿತ್ರವಾಗಿರುತ್ತದೆ.  ಪೋರ್ಚುಗಲ್‌ನಂತಹ ಒಂದು ಸಣ್ಣ ದೇಶದಿಂದ ಬಂದ ಅವರು ಏಷ್ಯಾ ಮತ್ತು ಯೂರೋಪಿನಂತಹ ವಿಶ್ವದಾದ್ಯಂತ ದೇಶಗಳನ್ನು ಕಲಕುತ್ತಿದ್ದಾರೆ.  ದೇವರು ಆತನ ಮೂಲಕ ಸಾಧಿಸಲು ಇನ್ನೂ ಅನೇಕ ಸಂಗತಿಗಳಿವೆ!

ಸತ್ಯವೇದದಲ್ಲಿ ನಾವು ಲೂಕ 2 ನೇ ಅಧ್ಯಾಯದಲ್ಲಿ ಅದ್ಭುತವಾದ ಒಂದು ಮನುಷ್ಯನನ್ನು ನೋಡಬಹುದು.  ಕರ್ತನಾದ ಕ್ರಿಸ್ತನನ್ನು ನೋಡುವ ಮೊದಲು ನೀನು ಸಾಯುವುದಿಲ್ಲ ಎಂದು ಪವಿತ್ರಾತ್ಮದಿಂದ ಸಿಮೆಯೋನನಿಗೆ ಹೇಳಲ್ಪಟ್ಟಿತ್ತು. ಎಂಥಾ ಒಂದು ಮಾತು!  ಎಂಥಾ ಒಂದು ಜೀವನ!  ದೇವರ ಮಾತು ಈಡೇರುವವರೆಗೂ ಯಾವುದೇ ಸಾವಿಲ್ಲ.  ಜೀವ ಹೋಗುವುದೂ ಇಲ್ಲ. ದೇವರು ಕ್ರಿಸ್ತನಾಗಿ ಹುಟ್ಟಿದ್ದನ್ನು ನೋಡಿದ ನಂತರವೇ ಸಾವು ಎಂಬ ಪರಿಸ್ಥಿತಿ ಎಷ್ಟು ಸುರಕ್ಷಿತವಾಗಿದೆ!  ಒಂದು ದಿನ ಬಂತು, ಆ ಮನುಷ್ಯನು ಯೇಸುಕ್ರಿಸ್ತನನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡನು.

ಇದನ್ನು ಓದುತ್ತಿರುವ ಸ್ನೇಹಿತರೇ!  ಈ ಸಮಯದಲ್ಲಿ ನಿಮಗೊಂದು ಒಳ್ಳೆಯ ಸುದ್ದಿ!  ನಿಮಗಾಗಿ ದೇವರು ಹಾಕಿರುವ ಯೋಜನೆ ಮತ್ತು ದರ್ಶನವು ಪೂರ್ಣಗೊಳ್ಳುವವರೆಗೆ ನೀವು ಸಾಯುವುದಿಲ್ಲ.  ಸ್ಥಿರವಲ್ಲದ ಈ ಲೋಕದಲ್ಲಿ, ಜೀವಕ್ಕೆ ಖಾತರಿ ಇಲ್ಲದ ದಿನಗಳಲ್ಲಿ ಜೀವಿಸುತ್ತಿದ್ದರೂ ನಾವು ಸಾವಿನ ಬಗ್ಗೆ ಚಿಂತಿಸಬೇಕಾಗಿಲ್ಲ.  ನಿಮ್ಮ ಮೂಲಕ ಈ ಲೋಕದಲ್ಲಿ  ಯಾವುದೋ ಒಂದನ್ನು ಮಾಡಲು ದೇವರು ಯೋಜಿಸಿದ್ದಾರೆ.  ಅದಕ್ಕಾಗಿಯೇ ಅವರು ಈ ಕ್ಷಣದವರೆಗೂ ನಿಮ್ಮನ್ನು ರಕ್ಷಿಸುತ್ತಾ ವಾಗ್ಧಾನಗಳನ್ನು ಕೊಟ್ಟು ಮುನ್ನಡೆಸುತ್ತಿದ್ದಾರೆ. ಅವರು ಕೊಟ್ಟ ವಾಗ್ದಾನ ಮತ್ತು ಆ ಯೋಜನೆಯನ್ನು ನಿಮ್ಮ ಕಣ್ಣುಗಳು ಖಂಡಿತವಾಗಿ ನೋಡುತ್ತವೆ.  ನೀವು ನೋಡುವ ಮೊದಲು ಯಾವುದೇ ಭಯವೋ, ಇಕ್ಕಟ್ಟೋ, ಸಾವಿನಂತಹ ಪರಿಸ್ಥಿತಿಯೋ ಬಂದರೂ ನೀವು ನಂಬಿಕೆಯಿಂದ ಇರಿ. ಕೆಟ್ಟ ಸುದ್ದಿಗಳಿಂದ ನಿರುತ್ಸಾಹಗೊಳ್ಳಬೇಡಿರಿ.  ಕರ್ತನಲ್ಲಿ ಭರವಸೆಯಿಟ್ಟು ನಿಮ್ಮ ಹೃದಯವು  ಸ್ಥಿರವಾಗಿರಲಿ.  ಆದ್ದರಿಂದ ಧೈರ್ಯವಾಗಿ ದೇವರ ಮೇಲಿರುವ ನಂಬಿಕೆಯೊಂದಿಗೆ ಈ ಲೋಕವನ್ನು, ವಿಶೇಷವಾಗಿ ಈ ಕರೋನಾ ದಿನಗಳನ್ನು ಎದುರಿಸೋಣ.
-    Bro.ಶಂಕರರಾಜ್

ಪ್ರಾರ್ಥನಾ ಅಂಶ:-
ಗೆತ್ಸೇಮನೆ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ  ಪ್ರಾರ್ಥನಾ ಗುಡಾರದ ನಿರ್ಮಾಣ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುವಂತೆ ಮತ್ತು ಅದರ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin