Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.02.2025
Share:

By Village Missionary Movement

Sunday, 23-Feb-2025

ಧೈನಂದಿನ ಧ್ಯಾನ(Kannada) – 23.02.2025

 

ಹಿಟ್ಟು ಪರೀಕ್ಷೆ

 

"ಸರ್ವಸಂಪತ್ತಿನಲ್ಲಿ ಹೇಗೋ ಹಾಗೆಯೇ ನಿನ್ನ ಕಟ್ಟಳೆಯ ಮಾರ್ಗದಲ್ಲಿ ಆನಂದಿಸುತ್ತೇನೆ." - ಕೀರ್ತನೆ 119:14

 

ಹಲೋ ಪುಟಾಣಿಗಳೇ! ಇವತ್ತು ನಾನು ನಿಮಗೆ ಒಂದು ನಿಜವಾದ ಕಥೆಯನ್ನು ಹೇಳುತ್ತೇನೆ. ಕೇಳಲು ನೀವು ಸಿದ್ಧರಿದ್ದೀರಾ? ಆಫ್ರಿಕಾದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಕೆಲಸ ಮಾಡುತ್ತಿದ್ದ ದಿನಗಳಲ್ಲಿ, ಕೆಲವು ಸ್ಥಳೀಯ ಜನರು ಯೇಸುವನ್ನು ಸ್ವೀಕರಿಸಿದರು. ಅದರಲ್ಲಿ ಸುಮಾ ಎಂಬ ಪುಟ್ಟ ಹುಡುಗಿ ಯೇಸುವಿಗೆ ಸಾಕ್ಷಿಯಾಗಿ ಬದುಕಲು ಪ್ರಾರಂಭಿಸಿದಳು. ಒಂದು ದಿನ ಮಿಷನರಿ ತಾಯಿ, ಸುಮಾ ಬಳಿ ಮೊಟ್ಟೆಗಳನ್ನು ತೆಗೆದುಕೊಂಡು ಬರಲು ಹೇಳಿದರು. ಇವಳು ಕೂಡ ಒಬ್ಬ ರೈತನ ಮನೆಗೆ ಹೋದಳು. ಮನೆಯಲ್ಲಿ ಯಾರೂ ಇಲ್ಲದ ಕಾರಣ, ಅವಳು ಸಂತೆಗೆ ಹೋಗಿ ಮೊಟ್ಟೆಗಳನ್ನು ತೆಗೆದುಕೊಂಡು, ಅಲ್ಲಿ ತನಗೆ ಇಷ್ಟವಾದ ಉಡುಪನ್ನು ಸಹ ತಂದಳು. ಆ ದಿನ, ಇಡೀ ಊರಿನವರು ರೈತನ ಮೇಕೆ ಕಾಣೆಯಾದ ಬಗ್ಗೆ ಮಾತನಾಡುತ್ತಿದ್ದರು. ಪಕ್ಕದ ಮನೆಯವರು ಹೇಳಿದರು, ಸುಮಾನೆ ಮನೆಗೆ ಬಂದಿದ್ದು, ಅವಳೇ ಮೇಕೆಯನ್ನು ಕದ್ದಿರಬೇಕು. ಮೇಕೆಯನ್ನು ಸಂತೆಯಲ್ಲಿ ಮಾರಿ ಆ ಹಣದಲ್ಲಿ ಡ್ರೆಸ್ ತೆಗೆದುಕೊಂಡಿದ್ದಾಳೆ ಎಂದು ವ್ಯರ್ಥವಾಗಿ ದೂಷಿಸಿದರು.

  

ಮರುದಿನ, ಅವರು ಸುಮಾಳನ್ನು ಗ್ರಾಮದ ಮುಖ್ಯಸ್ಥನ ಬಳಿಗೆ ಕರೆತಂದರು. ಅವಳು ನಡೆದ ಘಟನೆಯ ಬಗ್ಗೆ ಸಂಪೂರ್ಣ ಸತ್ಯವನ್ನು ಹೇಳಿದಳು. "ನಿನ್ನ ತಂದೆ ನಿನ್ನನ್ನು ಭಾನುವಾರ ಶಾಲೆಗೆ ಕಳುಹಿಸಿದ್ದೇ ತಪ್ಪು" ಎಂದು ನಾಯಕ ಹೇಳಿದರು. ಆ ಹಳ್ಳಿಯ ಪದ್ಧತಿಯ ಪ್ರಕಾರ, ತಪ್ಪು ಮಾಡಿದವರಿಗೆ ಒಣಗಿದ ಹಿಟ್ಟನ್ನು ತೆಗೆದುಕೊಂಡು, ಬಾಯಿ ಅಗಲವಾಗಿ ತೆರೆದು, ನಾಲಿಗೆ ಅಥವಾ ದವಡೆಯನ್ನು ಚಲಿಸಲು ಸಾಧ್ಯವಾಗದಂತೆ ಹಿಟ್ಟನ್ನು ಬಾಯಿಗೆ ತುರುಕಿ, ನಿರ್ದಿಷ್ಟ ಸಮಯದೊಳಗೆ ನುಂಗಬೇಕಾಗಿತ್ತು. ನುಂಗದಿದ್ದರೆ, ಅವರೇ ತಪ್ಪು ಮಾಡಿದವರು. ಇದು ಪರೀಕ್ಷೆ! ಇದನ್ನು ಅಗಿಯಲು ಸಾಧ್ಯವಿಲ್ಲ, ಎಂಜಿಲಿನೊಳಗೆ ನೆನೆಯುವುದೂ ಇಲ್ಲ. ಸುಮಾ ಮನದಲ್ಲೇ ಪ್ರಾರ್ಥನೆ ಮಾಡಿದಳು. "ಯೇಸಪ್ಪಾ, ನಿಮ್ಮ ನಾಮ ಮಹಿಮೆ ಹೊಂದುವಂತೆ, ನಾನು ತಪ್ಪು ಮಾಡಿಲ್ಲ ಎಂಬುದನ್ನು ತೋರಿಸಲು ನನಗೆ ಸಹಾಯ ಮಾಡಿ" ಎಂದು. ಸ್ವಲ್ಪ ಸಮಯದಲ್ಲೇ ತನ್ನ ಬಾಯಿಂದ ತೇವಾಂಶ ಸೋರಿಕೆಯಾಯಿತು. ಅಂಟು ರೂಪುಗೊಂಡಿತು. ಅವಳು ಹಿಟ್ಟನ್ನು ಸಂಪೂರ್ಣವಾಗಿ ನುಂಗಿ, ಅದನ್ನು ತೋರಿಸಲು ಬಾಯಿ ತೆರೆದಳು. ರೈತ ಅದನ್ನು ನಂಬಲಿಲ್ಲ. ಏನೋ ತಂತ್ರ ಮಾಡಿಬಿಟ್ಟಳು ಎಂದು ಹೇಳಿದರು. ಅದೇ ಸಮಯಕ್ಕೆ ಒಬ್ಬ ಒರಟಾದ ವ್ಯಕ್ತಿ ಅಲ್ಲಿಗೆ ಬಂದ. ಅವನ ಕೈಯಲ್ಲಿ ಒಂದು ಮೇಕೆ ಇತ್ತು. ಅವನು ರೈತನಿಗೆ, "ಇದು ನಿನ್ನ ಮೇಕೆ ನಾ" ಎಂದನು. ಈ ಮೇಕೆ ನನ್ನ ತೋಟದ ಬೆಳೆಗಳನ್ನೆಲ್ಲಾ ಹಾಳುಮಾಡಿ ಬಿಟ್ಟಿತು. "ನನಗೆ ಪರಿಹಾರ ಬೇಕು" ಎಂದನು. ರೈತ ನಾಚಿಕೆಯಿಂದ ಪರಿಹಾರ ನೀಡಲು ಒಪ್ಪಿಕೊಂಡನು. ಸುಮಾ ಕ್ರೈಸ್ತಳಾದ ನಂತರ ತಾನು ಎಂದಿಗೂ ಸುಳ್ಳು ಹೇಳಲೇ ಇಲ್ಲ ಎಂದು ಹೇಳಿದಳು. ಯೇಸಪ್ಪನ ನಾಮ ಮಹಿಮೆಹೊಂದಿತು.

       

ಪುಟ್ಟ ಮಕ್ಕಳೇ! ಸುಮಾಳನ್ನು ಕಳ್ಳತನದ ಹಿಡಿತದಿಂದ ರಕ್ಷಿಸಿದ ದೇವರು, ನೀವು ಪ್ರಾಮಾಣಿಕವಾಗಿ ಪ್ರಾರ್ಥಿಸಿದರೆ, ನಿಮ್ಮನ್ನು ಸಹ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತಾರೆ. 

- Mrs. ಸುಧಾ ಭಾಸ್ಕರ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet