Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.02.2025
Share:

By Village Missionary Movement

Saturday, 22-Feb-2025

ಧೈನಂದಿನ ಧ್ಯಾನ(Kannada) – 22.02.2025

 

ಹಂದಿ

 

"ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ" - ಕೊಲೊಸ್ಸೆ 3:2

 

ಹಂದಿ ಒಂದು ಅಶುದ್ಧ ಪ್ರಾಣಿ. ಅದು ಮೆಲುಕು ಹಾಕುವುದಿಲ್ಲ. ಅದು ದಾರಿಯಲ್ಲಿ ಹೋಗುವಾಗ ಸ್ವಚ್ಛವಾದದ್ದು ಮತ್ತು ಅಶುದ್ಧವಾದದ್ದು ಎಲ್ಲವನ್ನೂ ತಿನ್ನುತ್ತದೆ. ಇದು ಕುಡಿತದ ಪಾಪ ಮತ್ತು ಹೊಟ್ಟೆಬಾಕತನದ ಪಾಪವನ್ನು ತೋರಿಸುತ್ತದೆ. ಹಂದಿ ಮೇಲಕ್ಕೆ ನೋಡಲು ಸಾಧ್ಯವಿಲ್ಲ. ಅದು ಕೆಳಗೆ ಮಾತ್ರವೇ ನೋಡುತ್ತಾ ಹೋಗುತ್ತದೆ.

 

ಪಾಪಪೂರ್ಣ ಹೃದಯವು ಅಶುದ್ಧವಾದ ಎಲ್ಲವನ್ನೂ ಸ್ವೀಕರಿಸುತ್ತದೆ. ನಮ್ಮ ದೇಹವು ದೇವರ ಆಲಯ. ನಾವು ಅದನ್ನು ಧೂಮಪಾನ ಮತ್ತು ಮಾದಕ ದ್ರವ್ಯಗಳ ಬಳಕೆಯಂತಹ ಕೆಟ್ಟ ಅಭ್ಯಾಸಗಳಿಂದ ಅಪವಿತ್ರಗೊಳಿಸುತ್ತೇವೆ. ನಾವು ಮಾಡುವ ಪಾಪಗಳು ನಮ್ಮನ್ನು ಗುಲಾಮರನ್ನಾಗಿ ಮಾಡುತ್ತವೆ. ಹೊಟ್ಟೆಬಾಕನು ದೇವರ ದೃಷ್ಟಿಯಲ್ಲಿ ಅಸಹ್ಯ. ನಾವು ಬದುಕಲು ತಿನ್ನುತ್ತೇವೆ. ನಾವು ತಿನ್ನಲು ಬದುಕುವುದಿಲ್ಲ. ಊಟ ಮಾಡುವುದರಿಂದ ಹಸಿವು ನೀಗುತ್ತದೆ. ಧರ್ಮೋಪದೇಶಕಾಂಡ 21:18-21 ಹೊಟ್ಟೆಬಾಕ ಮತ್ತು ಕುಡುಕನನ್ನು ಕಲ್ಲೆಸೆದು ಕೊಲ್ಲಬೇಕು. ಹೊಟ್ಟೆಬಾಕನು ಶರೀರದಾಶೆಗೆ ದಾಸನಾಗಿದ್ದಾನೆ. ಸತ್ಯವೇದದಲ್ಲಿ, ರಾಜನ ಆಹಾರದಿಂದಾಗಲಿ ಅಥವಾ ಅವರು ಕುಡಿಯುವ ದ್ರಾಕ್ಷಾರಸದಿಂದಾಗಲಿ ತನ್ನನ್ನು ತಾನು ಅಪವಿತ್ರಗೊಳಿಸಿಕೊಳ್ಳುವುದಿಲ್ಲ ಎಂದು ದಾನಿಯೇಲನು ತನ್ನ ಹೃದಯದಲ್ಲಿ ನಿರ್ಧರಿಸಿದರು. ಆದ್ದರಿಂದ, ಅದನ್ನು ತಿನ್ನಲು ಅವಕಾಶ ಸಿಕ್ಕಾಗ, ಅದನ್ನು ತಪ್ಪಿಸಲು, ಬದಲಾಗಿ ಬೇಳೆಕಾಳುಗಳು ಮತ್ತು ತರಕಾರಿಗಳನ್ನು ತಿಂದು ನೀರು ಕುಡಿದರು. ಆದ್ದರಿಂದ, ಅವರು ರಾಜನ ಮೆಚ್ಚುಗೆಯನ್ನು ಪಡೆದು ರಾಜನ ಮುಂದೆ ನಿಂತರು. ಎಫೆಸ 5:18, 19 ರಲ್ಲಿ “ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ. ಕೀರ್ತನೆಗಳಿಂದಲೂ ಸಂಗೀತ ಗಳಿಂದಲೂ ಆತ್ಮಸಂಬಂಧವಾದ ಹಾಡುಗಳಿಂದಲೂ ಹೃದಯದಲ್ಲಿ ಕರ್ತನಿಗೆ ಗಾನಮಾಡುತ್ತಾ ಇಂಪಾಗಿ ಹಾಡುತ್ತಾ ಇರೋಣ.

 

ಮತ್ತಾಯ 7:6 ರಲ್ಲಿ "ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಹಾಕಬೇಡಿರಿ" ಎಂದು ಹೇಳಲ್ಪಟ್ಟಿದೆ. ಅಂದರೆ, ಬೆಲೆಬಾಳುವ ವಸ್ತುವನ್ನು ಅದರ ಮೌಲ್ಯ ತಿಳಿಯದ ಹಂದಿಗಳ ಮುಂದೆ ಎಸೆಯಬೇಡಿ. ಅದಕ್ಕೆ ಗೊತ್ತಿರುವುದೆಲ್ಲಾ ಹೊಲಸು ಮಾತ್ರ. ಮೂರ್ಖತನದಿಂದ ವರ್ತಿಸುವ ಸುಂದರ ಮಹಿಳೆ ಹಂದಿಯ ಮೂತಿಯಲ್ಲಿರುವ ಚಿನ್ನದ ಮೂಗುತಿಯಂತೆ ಎಂದು ಬೈಬಲ್ ಎಚ್ಚರಿಸುತ್ತದೆ. ಒಬ್ಬ ಮಹಿಳೆ ಅತ್ಯಂತ ಸುಂದರಿಯಾಗಿದ್ದರೂ, ಅವಳ ಮೂರ್ಖತನದ ಕಾರ್ಯಗಳು ಮತ್ತು ಮಾತಿನಿಂದ ಅವಳ ಜೀವನವು ಅಸ್ತವ್ಯಸ್ತವಾಗಿದ್ದರೆ, ಅವಳು ಚಿನ್ನದಂತೆ ಸೌಂದರ್ಯದಿಂದ ಹೊಳೆಯುತ್ತಿದ್ದರೂ ಸಹ, ಅವಳ ಸ್ಥಾನ ಮತ್ತು ಜೀವನ ವಿಧಾನವು ಗೌರವಕ್ಕೆ ಅರ್ಹವಲ್ಲ ಮತ್ತು ವ್ಯರ್ಥವಾದದ್ದು. ದೇವರು ಹಂದಿಯ ಮೂಲಕ ನಮ್ಮನ್ನು ಎಚ್ಚರಿಸುತ್ತಿದ್ದಾರೆ. ನಮ್ಮ ಹೃದಯವು ಏನನ್ನು ಬಯಸುತ್ತಿದೆ? ಮೇಲಿರುವವುಗಳನ್ನಾ? ಅಥವಾ ಭೂಸಂಬಂಧವಾದವುಗಳನ್ನಾ? ನಾವು ಹೊಟ್ಟೆಬಾಕತನಕ್ಕೆ ಅವಕಾಶ ನೀಡುತ್ತಿದ್ದೇವೆಯೇ? ನಾವು ಮೂರ್ಖ ಮಹಿಳೆಯಂತೆ ಬದುಕುತ್ತಿದ್ದೇವೆಯೇ? ಯೋಚಿಸೋಣ. ನನ್ನ ಪ್ರಿಯವಾದವರೇ! ಭೂಸಂಬಂಧವಾದ ಕಾರ್ಯಗಳನ್ನು ಹುಡುಕಬೇಡಿ, ಆದರೆ ಮೇಲಿನವುಗಳನ್ನು ಹುಡುಕಿರಿ. ನಾವು ಲೋಕದ ಮತ್ತು ಶರೀರದ ಪಾಪಗಳಲ್ಲಿ ಸಿಕ್ಕಿಹಾಕಿಕೊಳ್ಳದೆ, ನಮ್ಮ ರಕ್ಷಕನ ಕಡೆಗೆ ನೋಡೋಣ.

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಎಲ್ಲಾ ಜಿಲ್ಲೆಗಳಲ್ಲಿ 24 ಗಂಟೆಗಳ ಸರಪಳಿ ಪ್ರಾರ್ಥನೆ ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş