Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.02.2025
Share:

By Village Missionary Movement

Wednesday, 12-Feb-2025

ಧೈನಂದಿನ ಧ್ಯಾನ(Kannada) – 12.02.2025

 

"...ಹಾರುವ ಬಕವೂ ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ,..." - ಯೆರೆಮಿಯ 8:7

 

ಸತ್ಯವೇದದಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ನಾವು ಎಷ್ಟು ಜಾಗರೂಕರಾಗಿರಬೇಕು ಎಂದು ಹೇಳಿ ಕರ್ತನು ಎಚ್ಚರಿಸುತ್ತಿದ್ದಾರೆ. "ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ." (ಎಫೆ. 5:16). "ಬಾನಕ್ಕಿಗೂ ತಾವು ಬರುವ ಸಮಯ ತಿಳಿದಿದೆ" ಎಂದು ಕರ್ತನು ಏಕೆ ಹೇಳುತ್ತಾರೆ? ಕೊಕ್ಕರೆ, ಕಾಡು ಪಾರಿವಾಳ, ಕ್ರೇನ್ ಮತ್ತು ಬಾನಕ್ಕಿ ಎಲ್ಲವೂ ತಮ್ಮ ಸಮಯವನ್ನು ತಿಳಿದಿವೆ. ಆದರೆ ನನ್ನ ಜನರು ಹಾಗಿಲ್ಲವೇ ಎಂದು ಪ್ರಲಾಪಿಸುತ್ತಿದ್ದಾರೆ.

   

ಈ ಆಧುನಿಕ ಯುಗದಲ್ಲಿ, ನಮ್ಮ ಎಲ್ಲಾ ಹುಡುಕಾಟಗಳಿಗೆ ನಾವು ವೆಬ್‌ಸೈಟ್‌ಗಳತ್ತ ತಿರುಗುತ್ತೇವೆ. ಅದರಿಂದ ಕ್ಷಣಾರ್ಧದಲ್ಲಿ ಸಾಕಷ್ಟು ರಚನಾತ್ಮಕ ಮಾಹಿತಿಯನ್ನು ಪಡೆಯಬಹುದು ಎಂಬುದು ನಿಜ. ಆದರೆ ಲೋಕವು ದುಷ್ಟನ ಅಧಿಕಾರದಲ್ಲಿ ಬಿದ್ದಿದೆ. ಆದ್ದರಿಂದ, ನಾವು ವೆಬ್‌ಸೈಟ್‌ಗಳಲ್ಲಿ ಹುಡುಕಲು ಪ್ರಯತ್ನಿಸುತ್ತಿರುವುದನ್ನು ಮಾತ್ರ ಹುಡುಕಿ ತಕ್ಷಣವೇ ಹೊರಗೆ ಬಂದುಬಿಡಬೇಕು. ಇಲ್ಲದಿದ್ದರೆ, ಸೈತಾನನು ನಿಮ್ಮ ಸಮಯವನ್ನು ಮತ್ತು ಕಾಲವನ್ನು ಕದ್ದುಬಿಡುತ್ತಾನೆ. ಏಕೆಂದರೆ ಅವನು ಕಳ್ಳನು ಮತ್ತು ದರೋಡೆಕೋರನು ಆಗಿದ್ದಾನೆ. ನೀವು ಸತ್ಯವೇದವನ್ನು ಕ್ರಮವಾಗಿ ಓದಿ ಪ್ರಾರ್ಥಿಸುತ್ತೀರಾ? ನೀವು ಸಹವಾಸ ಮಾಡುವವರ ಮುಂದೆ ಹೇಗೆ ವಿವೇಕದಿಂದ ವರ್ತಿಸುತ್ತಿದ್ದೀರ? ಸತ್ಯವೇದವು ಹೇಳುತ್ತದೆ: "ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ" (ಕೊಲೊ. 4:5).

          

ಸತ್ಯವೇದದಲ್ಲಿ, ಮರಿಯಳು ಯೇಸುವಿನ ಪಾದಗಳ ಬಳಿ ಕುಳಿತು, ಆತನ ತಲೆಯ ಮೇಲೆ ತೈಲವನ್ನು ಸುರಿದು ಒಳ್ಳೆಯ ಭಾಗವನ್ನು ಆರಿಸಿಕೊಂಡಳು. ಆದರೆ ಜನರೋ ಅವಳನ್ನು ಅಪಹಾಸ್ಯ ಮಾಡಿದರು. ಅದೇ ರೀತಿ, ನೀವು ಬುದ್ಧಿವಂತಿಕೆಯಿಂದ ವರ್ತಿಸುತ್ತಿರುವುದಕ್ಕಾಗಿ ಮತ್ತು ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದಕ್ಕಾಗಿ ಅನೇಕರು ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ. ಹೇಗೆ ಮರಿಯಳಿಗೆ ಬಂದ ಅಪಹಾಸ್ಯವು ಒಂದು ಆಶೀರ್ವಾದವಾಗಿತ್ತೋ, ಅದರಂತೆಯೇ ನೀವು ಒಳ್ಳೆಯದನ್ನು ಮಾಡಿದಾಗ ನಿಮಗೆ ಬರುವ ಅಪಹಾಸ್ಯವು ಒಂದು ಆಶೀರ್ವಾದವೇ! ನಾನು ಒಳ್ಳೆಯದನ್ನು ಮಾಡಿದರೂ ನನಗೆ ಕರುಣೆ ಇಲ್ಲವಲ್ಲಾ ಎಂದು ಭಾವಿಸಬೇಡಿ.

 

ಹಾರುವ ಬಕಕ್ಕೂ ಗುಬ್ಬಚ್ಚಿಗೂ ತನ್ನ ಉದ್ದೇಶಕ್ಕೂ ಮೀರಿದ ಬೇರೊಂದು ಕೆಲಸವನ್ನು ಮಾಡಲೂ ಗೊತ್ತಿಲ್ಲ. ಸಮಯವನ್ನು ವ್ಯರ್ಥ ಮಾಡಲೂ ಗೊತ್ತಿಲ್ಲ. ಅದೇ ರೀತಿ, ಕೀರ್ತನೆ 1 ರಲ್ಲಿ ಹೇಳಿರುವಂತೆ, ಅಪಹಾಸ್ಯಕರು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತು ಸಮಯವನ್ನು ವ್ಯರ್ಥ ಮಾಡಬಾರದು. ನಿಮ್ಮ ಫೋನ್‌ನಲ್ಲಿ ಅನಗತ್ಯ ಕಾರ್ಯಗಳನ್ನು ನೋಡಬಾರದು. ಕರ್ತನು ನಮಗೆ ನಿಗದಿಪಡಿಸಿರುವ ಓಟದಲ್ಲಿ ಗುರಿಯತ್ತ ಸಾಗೋಣ. "ಸಮಯದ ಮೌಲ್ಯವನ್ನು ತಿಳಿದುಕೊಂಡು ಬದುಕದಿದ್ದರೆ ಕಣ್ಣೀರು ಸುರಿಸುತ್ತೀರಿ!" 

 

"ನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು,..." (1 ತಿಮೊ. 6:12).

- P.P. ಪೊನ್ಮಣಿ

 

ಪ್ರಾರ್ಥನಾ ಅಂಶ:

ಪ್ರತಿ ತಾಲೂಕಿನಲ್ಲಿ ಮಕ್ಕಳ ಶಿಬಿರಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al