By Village Missionary Movement
Wednesday, 12-May-2021ಧೈನಂದಿನ ಧ್ಯಾನ(Kannada) – 12.05.2021
ಮನೆಯನ್ನು ತೆರೆಯಿರಿ
"...ಕೊರ್ನೇಲ್ಯನು ತನ್ನ ಬಂಧುಬಳಗದವರನ್ನೂ ಪ್ರಾಣವಿುತ್ರರನ್ನೂ ಕೂಡ ಕರಿಸಿ ಪೇತ್ರನನ್ನು ಎದುರುನೋಡುತ್ತಿದ್ದನು." - ಅಪೊಸ್ತಲ 10:24
"ಪರಲೋಕದ ಮನುಷ್ಯನು" ಎಂದು ಕರೆಯಲ್ಪಡುವ ಯೂನ್ ಎಂಬ ಚೀನಾದ ಮಿಷಿನರಿ, ರಕ್ಷಣೆ ಹೊಂದಿದ ಪ್ರಾರಂಭದ ದಿನಗಳಲ್ಲಿ, ಅವರ ತಂದೆಯವರು ಮರಣಕರವಾದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರ ಸ್ವಸ್ಥತೆಗಾಗಿ ಕುಟುಂಬದೊಂದಿಗೆ ಸೇರಿ ಪ್ರಾರ್ಥಿಸಿದರು. ಆಗ ದೇವರು ಅದ್ಭುತವಾಗಿ ಅವರು ತಂದೆಯವರಿಗೆ ಸ್ವಸ್ಥತೆಯನ್ನು ದಯಪಾಲಿಸಿದರು. ಆ ದಿನಗಳಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಪ್ರಾಬಲ್ಯವು ತಲೆ ಎತ್ತಿ ನಿಂತಿತ್ತು. ಆ ಪರಿಸ್ಥಿತಿಯಲ್ಲಿಯೂ, ಯೂನ್ ತನ್ನ ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರನ್ನು ಮನೆಗೆ ಆಹ್ವಾನಿಸಿದರು. ಅವರೆಲ್ಲರೂ ನಾವು ಯೂನ್ ತಂದೆಯವರ ಅಂತ್ಯಕ್ರಿಯೆಗೆ ಹೋಗುತ್ತಿದ್ದೇವೆ ಎಂದು ಭಾವಿಸಿದ್ದರು. ಆದರೆ ಅಲ್ಲಿ ಅವರು ಆರೋಗ್ಯವಾಗಿರುವುದನ್ನು ಕಂಡು ಎಲ್ಲರೂ ಬಹಳ ಆಶ್ಚರ್ಯಪಟ್ಟರು. ಆಗ ಯೂನ್ ಮತ್ತು ಅವನ ಕುಟುಂಬವು ಯೇಸು ಮಾಡಿದ ಅದ್ಭುತದ ಬಗ್ಗೆ ವಿವರವಾಗಿ ತಿಳಿಸಿದರು. ಬಂದವರೆಲ್ಲರೂ ಯೇಸುವನ್ನು ನೋಡಿ ಕಣ್ಣೀರಿನೊಂದಿಗೆ ಪ್ರಾರ್ಥಿಸಿ ವಿಶ್ವಾಸಿಗಳಾದರು.
ಕೊರ್ನೇಲ್ಯ ಎಂಬ ದೇವ ಮನುಷ್ಯನು, ತನ್ನ ಮನೆಗೆ ಪೇತ್ರನು ಬರುತ್ತಿದ್ದಾರೆಂದು ತಿಳಿದಾಗ, ದೇವರ ವಾಕ್ಯವನ್ನು ಕೇಳಲು ಅವನು ತನ್ನ ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಒಟ್ಟುಗೂಡಿಸಿ ಪೇತ್ರನಿಗಾಗಿ ಕಾದಿದ್ದರು. ಪೇತ್ರನು ಬಂದು ದೇವರ ವಾಕ್ಯವನ್ನು ಅವರಿಗೆ ಸ್ಪಷ್ಟವಾಗಿ ವಿವರಿಸುತ್ತಿದ್ದಂತೆ ಪವಿತ್ರಾತ್ಮನು ಅವರನ್ನು ತುಂಬಿಸಿದರು. ಆಗ ಕೊರ್ನೇಲ್ಯನನ್ನು ನೋಡಿ ಪರಲೋಕವೇ ಸಂತೋಷಪಟ್ಟಿರುತ್ತದೆ. ಅದಕ್ಕೆ ಕಾರಣ ಕೊರ್ನೇಲ್ಯನ ಹೃದಯದಲ್ಲಿ ತನ್ನ ಸ್ನೇಹಿತರು, ಬಂಧುಗಳು ದೇವರನ್ನು ಸ್ವೀಕರಿಸಬೇಕೆಂದಿದ್ದ ಭಾರ. ಆದ್ದರಿಂದ ಅವನು ಮನೆಯನ್ನು ತೆರೆದನು, ಒಂದು ದೊಡ್ಡ ಬಿಡುಗಡೆ ಉಂಟಾಯಿತು.
ಆತ್ಮೀಯರೇ! ಕೊರ್ನೇಲ್ಯನ ಹಾಗೆ, ಯೂನ್ ನ ಹಾಗೆ ನಮಗೂ ಇಂತಹ ಆಸೆ ಇದೆಯೇ? ನಾವು ಕರೆದರೆ ನಮ್ಮ ಮನೆಗೆ ಆಸೆಯಿಂದ ಬರುವ ಮಟ್ಟಿಗೆ, ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ನಮ್ಮ ಸುತ್ತಮುತ್ತಲಿನವರಿಗೆ ಇದೆಯೇ? ನಮ್ಮ ಕೆಲವು ಸಂಬಂಧಿಕರು ಮತ್ತು ಸ್ನೇಹಿತರು ಸಭೆಗೆ ಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರಬಹುದು, ಆದರೆ ನಾವು ಅವರನ್ನು ನಮ್ಮ ಮನೆಗೆ ಆಹ್ವಾನಿಸಬಹುದು. ಅವರನ್ನು ಮನೆಗೆ ಆಹ್ವಾನಿಸಲು ಒಂದು ಅವಕಾಶವನ್ನು ಮಾಡಿಕೊಟ್ಟರೆ, ಅಂದರೆ ಮಕ್ಕಳ ಜನ್ಮದಿನ, ಅಥವಾ ವಿವಾಹ ದಿನದಲ್ಲಿ ಅವರನ್ನು ಆಹ್ವಾನಿಸಿ ದೇವರು ಮಾಡಿದ ಉಪಕಾರಗಳನ್ನು ಆಸೆಯಿಂದ ಹಂಚಿಕೊಂಡರೇನೆ ಸಾಕು ಕರ್ತನು ಅವರ ಹೃದಯಗಳಲ್ಲಿ ಕ್ರಿಯೆ ಮಾಡಿ ಬಿಡುತ್ತಾರೆ. ಮುಂದಿನ, ದಿನಗಳಲ್ಲಿ ಒಂದು ಕುಟುಂಬ ಪ್ರಾರ್ಥನೆಯನ್ನು ಏರ್ಪಡಿಸಿ ಅದರ ಮೂಲಕ ದೇವರನ್ನು ಅರಿಯದವರನ್ನು ಸಭೆಗಳಲ್ಲಿ ಸೇರಿಸಲು ಸಾಧ್ಯವಾಗುತ್ತದೆ. ಪರಲೋಕದಲ್ಲೂ ಬಹಳ ಸಂತೋಷವು ಉಂಟಾಗುತ್ತದೆ.
- S.ಮನೋಜ್‌ಕುಮಾರ್
ಪ್ರಾರ್ಥನಾ ಅಂಶ:-
ಇಂದು ತೇನಿಯಲ್ಲಿ ಸೇವೆ ಸಲ್ಲಿಸಿದ ನಮ್ಮ ಮಿಷನರಿ ಬ್ಯೂಲರವರ ವಿವಾಹವನ್ನು ಕರ್ತನು ಅದ್ಭುತವಾಗಿ ನಡೆಸಿಕೊಡುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482