Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.05.2021
Share:

By Village Missionary Movement

Monday, 10-May-2021

ಧೈನಂದಿನ ಧ್ಯಾನ(Kannada) – 10.05.2021

ನೀವು ಸಿದ್ಧರಿದ್ದೀರಾ?

"...ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ." - ಇಬ್ರಿಯ 2:18

ಕರ್ತನಾದ ಯೇಸು ಕ್ರಿಸ್ತನನ್ನು ನನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸುವ ಮೊದಲು, ನನ್ನ ಹೃದಯದಲ್ಲಿ ಆಗಾಗ್ಗೆ ಭಯ ಮತ್ತು ಅನೇಕ ವಿಧವಾದ  ಚಿಂತೆಗಳು ಉಂಟಾಗುತ್ತಿದ್ದವು. ಹೀಗೆ ನನ್ನ ಹೃದಯದಲ್ಲಿ ಭಯ ಉಂಟಾಗುವ ಸಮಯದಲ್ಲಿ ನನ್ನೊಳಗೆ ಏನೋ ಒಂದು ರೀತಿಯ ಬಡಿತ ಕಾಣುವಾಗ ಆ ದಿನ  ರಾತ್ರಿ ಮಲಗಲು ಸಾಧ್ಯವಾಗುತ್ತಿರಲಿಲ್ಲ.  ಹೀಗೆ ನಾನು ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ.  ನಂತರ ನಾನು ನನ್ನ ಕೋಣೆಯಲ್ಲಿನ ದೀಪಗಳನ್ನು ಆನ್ ಮಾಡಿ ನನ್ನ ತಂದೆಯನ್ನು ಕರೆದು ಅವರ ಪಕ್ಕದಲ್ಲಿ ಮಲಗುವುದೇ ಅಭ್ಯಾಸವಾಗಿ ಬಿಟ್ಟಿತ್ತು.  ಹೀಗೆ ಅನೇಕ ದಿನಗಳವರೆಗೆ ನಾನು ಒಂದು ರೀತಿಯ ಭಯದಲ್ಲೇ ಜೀವಿಸುತ್ತಿದ್ದೆ.

ಇಂತಹ ಪರಿಸ್ಥಿತಿಯಲ್ಲಿ ನಾನು ದೇವರನ್ನು ನಂಬಿಕೊಂಡು,  ನನ್ನ ಸ್ನೇಹಿತರೊಂದಿಗೆ ಸೇರಿ ತೋಟದಲ್ಲಿ ಪ್ರಾರ್ಥಿಸುವುದನ್ನು ಅಭ್ಯಾಸ  ಮಾಡಿಕೊಂಡಿದ್ದೆ.  ಆಗ ಒಂದು ದಿನ ದೇವರ ಆತ್ಮವು ನಮ್ಮನ್ನು ತುಂಬಿಸಿತು.  ಆ ದಿನದಿಂದ ನನ್ನಲ್ಲಿ ಇದ್ದ ಭಯ ಮತ್ತು ಚಿಂತೆ ನನ್ನನ್ನು ಬಿಟ್ಟುಹೋಯಿತು.  ಹೀಗೆ ಕರ್ತನು ನನಗೆ ಅದ್ಭುತವಾಗಿ ಸಹಾಯ ಮಾಡಿದರು.  ಇಂದು ನಾನು ಅನೇಕರಿಗೆ ದೇವರ ಪ್ರೀತಿಯನ್ನು ಸಾರುವ ಮಗನಾಗಿ ಸೇವೆ ಮಾಡುತ್ತಿದ್ದೇನೆ.  ಇಂದಿನ ಸತ್ಯವೇದ ಭಾಗದಲ್ಲಿ ಶಿಷ್ಯರು ಯೇಸುಕ್ರಿಸ್ತನು ಸಮುದ್ರದ ಮೇಲೆ ನಡೆದುಕೊಂಡು ಹೋಗುವುದನ್ನು ನೋಡಿ ಆತ್ಮವೆಂದು  ಹೆದರುತ್ತಿದ್ದರು.  ಯೇಸು ದೋಣಿ ಹತ್ತಿದಾಗ,  ಗಾಳಿ ಮತ್ತು ಸಮುದ್ರದ ಅಲ್ಲಕಲ್ಲೋಲವು ನಿಂತುಹೋಗಿ  ಶಾಂತವಾಯಿತು ಎಂದು ನಾವು ಓದುತ್ತೇವೆ.

ಆತ್ಮೀಯ ಸ್ನೇಹಿತರೇ!  ನೀವು ಕೂಡ ಯಾವುದಾದರೂ ಒಂದು ವಿಷಯದಲ್ಲಿ ಭಯಪಡುತ್ತಿರುವ ಪರಿಸ್ಥಿತಿಯಲ್ಲಿ ಜೀವಿಸುತ್ತಿರಬಹುದು.  ನನ್ನ ಜೀವನದಲ್ಲಿ ಕಾರ್ಯಮಾಡಿದ ದೇವರು, ನಿಮ್ಮ ಜೀವನದಲ್ಲಿಯೂ ಸಹಾಯ ಮಾಡಲು ಸಿದ್ಧರಾಗಿದ್ದಾರೆ.  ಅವರು ನಿಮ್ಮ ಭಯವನ್ನು ಹೋಗಲಾಡಿಸಲು ಸಮರ್ಥರಾಗಿದ್ದಾರೆ.  ನಿಮ್ಮ ಜೀವನದ ದೋಣಿಯಲ್ಲಿ ಕುಳಿತುಕೊಳ್ಳಲು ಅವರಿಗೆ ಸ್ಥಳಕೊಡಿ, ಅವರ ಶಕ್ತಿಯನ್ನು ನಂಬಿರಿ  ನೀವು ಅದ್ಭುತಗಳನ್ನು  ಹೊಂದಿಕೊಳ್ಳುತ್ತೀರ.  ಇದನ್ನು ಓದುವ ಪ್ರತಿಯೊಬ್ಬರೂ ಅಂತಹ ಪರಿಸ್ಥಿತಿಯನ್ನು ಎದುರಿಸಿದ್ದೀರಿ ಎಂದು ಹೇಳಲು ಸಾಧ್ಯವಿಲ್ಲ.  ಆದರೆ ಈ ಲೋಕದಲ್ಲಿ ಜೀವಿಸುತ್ತಿರುವ ಅನೇಕರು ಯಾವುದೋ ಒಂದು ಭಯದಿಂದ ಬದುಕುತ್ತಿದ್ದಾರೆ.  ಅವರಿಗೆ ಸಮಾಧಾನದ ಮಾತುಗಳನ್ನು ಹೇಳಿ, ಅವರಿಗೆ ಸಹಾಯ ಮಾಡಲು ಯೇಸು ನಿಮ್ಮನ್ನು ಕರೆಯುತ್ತಿದ್ದಾರೆ  ಅಂತಹ ಜನರು ಬಿಡುಗಡೆಯನ್ನು ಹೊಂದಿಕೊಳ್ಳುವಂತೆ ಶುಭ ಸಂದೇಶವನ್ನು ಸಾರಲು ನೀವು ಸಿದ್ಧರಿದ್ದೀರಾ?
-    Y. ಅನೀಸ್ ರಾಜ

ಪ್ರಾರ್ಥನಾ ಅಂಶ:-
ಗರ್ಭ ಫಲಕ್ಕಾಗಿ ಕಾಯುತ್ತಿರುವ ನಮ್ಮ ಮಿಷನರಿಗಳ ಹೆಂಡತಿಯರಿಗೆ ದೇವರು ಅದ್ಭುತಗಳನ್ನು ಮಾಡಬೇಕೆಂದು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş