Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.01.2025
Share:

By Village Missionary Movement

Tuesday, 21-Jan-2025

ಧೈನಂದಿನ ಧ್ಯಾನ(Kannada) – 21.01.2025

 

ದೊಡ್ಡ ನಂಬಿಕೆ

 

"...ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ..." - ಮತ್ತಾಯ 15:28

 

1960 ರ ಒಲಿಂಪಿಕ್ಸ್‌ನಲ್ಲಿ, ಇಪ್ಪತ್ತು ವರ್ಷದ ಫಿಲೀಮಾ ರೊಡಾಲ್ಫ್ ಮೂರು ಚಿನ್ನದ ಪದಕಗಳನ್ನು ಗೆದ್ದು ಹೆಮ್ಮೆ ಗಳಿಸಿದ ಯುನೈಟೆಡ್ ಸ್ಟೇಟ್ಸ್‌ನ ಮೊದಲ ಕಪ್ಪು ಮಹಿಳೆ. ಅವರು 100 ಮೀಟರ್ ಮತ್ತು 400 ಮೀಟರ್ ಓಟಗಳಲ್ಲಿ ದಾಖಲೆಗಳನ್ನು ಸಾಧಿಸಿದರು. ಅತ್ಯಂತ ಕಡಿಮೆ ತೂಕದೊಂದಿಗೆ ಜನಿಸಿದ ಫಿಲೀಮಾ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಸಾವಿನ ಅಂಚಿನಲ್ಲಿದ್ದರು. ಫಿಲೀಮಾಳ ತಾಯಿ ದೇವರನ್ನು ಪ್ರೀತಿಸುತ್ತಾ, ಅಪಾರ ನಂಬಿಕೆಯುಳ್ಳರಾಗಿದ್ದರು. ಪ್ರಾರ್ಥನೆಯೊಂದಿಗೆ ತಮ್ಮ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ವೈದ್ಯರು ಆಕೆಯ ಜೀವವನ್ನು ಉಳಿಸಿದರು. ಫಿಲೀಮಾಳ ಮುರಿದ ಕಾಲುಗಳನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟರು. ದೇವರಲ್ಲಿ ನಂಬಿಕೆ ಮತ್ತು ವಿಶ್ವಾಸ ಹೊಂದಿದ್ದ ಆಕೆಯ ತಾಯಿ, ತನ್ನ ಮಗಳಲ್ಲಿ ನಂಬಿಕೆಯನ್ನು ತುಂಬಿದ್ದರು. ಮಸಾಜ್ ಮಾಡುವುದರಿಂದ ಈ ಸ್ಥಿತಿ ಗುಣವಾಗುತ್ತದೆ ಎಂದು ತಿಳಿದಿದ್ದ ತಾಯಿ, ಪ್ರತಿ ವಾರ 120 ಕಿ.ಮೀ ಪ್ರಯಾಣಿಸಿ ಚಿಕಿತ್ಸೆ ಪಡೆಯುವಂತೆ ಮಾಡಿದರು. ದೇವರು ತನ್ನನ್ನು ಗುಣಪಡಿಸಬಲ್ಲನೆಂದು, ತಾನು ಏನು ಬೇಕಾದರೂ ಸಾಧಿಸಬಹುದು ಎಂಬ ಉತ್ಸಾಹದಿಂದ ಪ್ರಯತ್ನಿಸಿದರು. ಆರು ತಿಂಗಳಲ್ಲಿ ತನ್ನ ಕಾಲಿನ ಮೇಲೆ ನಿಲ್ಲಲು ಮತ್ತು ಎರಡು ವರ್ಷದಲ್ಲಿ ಕೋಲು ಹಿಡಿದು ನಡೆಯಲು ಕಲಿತಳು. ಕೆಲವೇ ವರ್ಷಗಳಲ್ಲಿ, ಅವಳು ವಿಶೇಷ ಬೂಟುಗಳೊಂದಿಗೆ ಸ್ವಂತವಾಗಿ ನಡೆಯಲು ಮತ್ತು ಓಡಲು ಕಲಿತಳು. ಅವಳು ಆ ದಿನ ಪ್ರಾರಂಭಿಸಿದ ಓಟವನ್ನು ವಿಶ್ವ ದಾಖಲೆ ಮುರಿಯುವ ಓಟವನ್ನಾಗಿ ಪರಿವರ್ತಿಸಿ ಗೆದ್ದಳು. ನಂಬಿಕೆಯೊಂದಿಗೆ ಕೂಡಿದ ಸತತ ಪರಿಶ್ರಮದಿಂದ, ಕೊರತೆಗಳನ್ನು ಪೂರೈಸುವ ದೇವರ ಶಕ್ತಿಯನ್ನು ತನ್ನ ಜೀವನದಲ್ಲಿ ಅನುಭವಿಸಿದಳು.

 

ಇಂದಿನ ನಮ್ಮ ಧ್ಯಾನದಲ್ಲಿ, ಯೇಸುವನ್ನು ಭೇಟಿಯಾದ ಕಾನಾನ್ಯ ಮಹಿಳೆ, ಆತನು ತನ್ನ ಮಗಳನ್ನು ಅವಳ ಭೀಕರ ಕಾಯಿಲೆಯಿಂದ ಗುಣಪಡಿಸಬಲ್ಲನೆಂದು ನಂಬಿದ್ದಳು. "ಯೇಸು ದಾವೀದನ ಮಗ" ಎಂದು ಒಪ್ಪಿಕೊಂಡು, ಅವಳು ತನ್ನನ್ನು ತಾನು ಬಹಳವಾಗಿ ತಗ್ಗಿಸಿಕೊಂಡಳು ಮತ್ತು ತನಗೆ ಯಾವುದೇ ಹಕ್ಕಿಲ್ಲ, ಆದರೆ ತನಗೆ ಪಾಲು ಇದೆ ಎಂಬ ದೃಢ ನಂಬಿಕೆಯನ್ನು ದೃಢಪಡಿಸಿದಳು. ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂಬ ಯೇಸುವಿನ ಹೊಗಳಿಕೆಯನ್ನು ಮತ್ತು ತನ್ನ ಮಗಳಿಗೆ ಸ್ವಸ್ಥತೆಯನ್ನು ಪಡೆದುಕೊಂಡು ತನ್ನ ಆಸೆಯನ್ನು ಈಡೇರಿಸಿಕೊಂಡು ಹೋದಳು.

 

ನನಗೆ ಪ್ರಿಯವಾದವರೇ! ನಮ್ಮ ನಂಬಿಕೆ ಹೇಗಿದೆ? ರಕ್ಷಣೆ, ಶಿಕ್ಷಣ, ಕೆಲಸ ಮತ್ತು ಮದುವೆ ಸೇರಿದಂತೆ ಎಲ್ಲದಕ್ಕೂ ನಾವು ದೇವರನ್ನೇ ನಂಬೋಣ. ಆತನ ಮೇಲೆಯೇ ಭರವಸೆ ಇಡೋಣ. ಆತನು ತನ್ನ ಚಿತ್ತದಂತೆ ನಮ್ಮ ಆಸೆಗಳನ್ನು ಪೂರೈಸಿ ನಮ್ಮನ್ನು ಆಶೀರ್ವದಿಸಲಿ!

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ಮಿಷನರಿ ಮಕ್ಕಳಿಗಾಗಿ ಶಾಲೆ ಪ್ರಾರಂಭಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş