By Village Missionary Movement
Monday, 13-Jan-2025ಧೈನಂದಿನ ಧ್ಯಾನ(Kannada) – 13.01.2025
ನೀವು ಯಾವಾಗ ಸುಖವಾಗಿರುತ್ತೀರಿ?
"ನನ್ನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು. ಆಗ ನೀವು ಆ ದೇಶದಲ್ಲಿ ನಿರ್ಭಯವಾಗಿ ವಾಸವಾಗಿರುವಿರಿ" - ಯಾಜಕಕಾಂಡ 25:18
ಒಬ್ಬ ತುಂಟ ಹುಡುಗ ಒಂದು ಕುರ್ಚಿಯ ಮೇಲೆ ಒಂದು ಕಾಲು ಮಡಚಿ, ಇನ್ನೊಂದು ಕಾಲನ್ನು ಆಡಿಸುತ್ತಾ ಕುಳಿತಿದ್ದ. ಇದನ್ನು ನೋಡಿದ ಒಬ್ಬ ವಯಸ್ಸಾದವರು, "ಏನು ತಮ್ಮಾ, ಹೀಗೆ ಕೂತುಕೊಂಡಿದ್ದೀಯ?" ಎಂದು ಕೇಳಿದರು. ಆ ಹುಡುಗ ಅವರ ಬಳಿ, "ಏನು ಮಾಡಬೇಕು ಹೇಳಿ?" ಎಂದನು. ಅದಕ್ಕೆ ಅವರು, "ಚೆನ್ನಾಗಿ ಓದು" ಎಂದರು. "ಆಮೇಲೆ" ಎಂದನು ಹುಡುಗ. "ಕೆಲಸಕ್ಕೆ ಹೋಗು" ಅಂದರು. ಇವರಿಬ್ಬರೂ ಮಾತನಾಡುವುದನ್ನು ನಿಲ್ಲಿಸೋ ಹಾಗೆ ಕಾಣಿಸ್ತಿಲ್ಲ ಹುಡುಗ ಸಹ "ಆಮೇಲೆ ಏನು?" ಎಂದನು. ಆ ವಯಸ್ಸಾದವರು ಮುಂದುವರಿಸಿದರು. "ಬಹಳಷ್ಟು ಸಂಪಾದಿಸು, ಮನೆ ಕಟ್ಟು, ಕಾರು ಖರೀದಿಸು" ಎಂದು ಸಾಲಾಗಿ ಮುಂದುವರಿಸುತ್ತಾ ಅವುಗಳನ್ನು ಕ್ರಮವಾಗಿ ಪಟ್ಟಿ ಮಾಡಿದರು. "ಆಮೇಲೆ?" ಎಂದನು ಹುಡುಗ. "ಆಮೇಲೆ ನೀನು ಕುರ್ಚಿಯ ಮೇಲೆ ಕುಳಿತು ಕಾಲುಗಳನ್ನು ಆಡಿಸಬಹುದು" ಎಂದು ಹೇಳಿದರು. ಹುಡುಗ ಮುಗುಳ್ನಗುತ್ತಾ, "ನಾನು ಈಗ ಮಾಡುತ್ತಿರುವುದು ಅದನ್ನೇ ತಾನೇ" ಎಂದನು.
ಆ ಹುಡುಗನ ಮಾತು ತಮಾಷೆಯಾಗಿರಬಹುದು ಅಥವಾ ಬೇಸರದ ಸಂಗತಿಯಾಗಿರಬಹುದು. ಆದರೆ ಸುಖವಾಗಿ ಜೀವಿಸಲು ಲೋಕತೋರಿಸುವ ಜೀವನದ ವಾಸ್ತವ ಇದೇ. ಆದರೆ ಸುಖವಾಗಿರುವುದರ ಬಗ್ಗೆ ಸತ್ಯವೇದವು ಏನು ಹೇಳುತ್ತದೆ ಗೊತ್ತಾ? ಯಾಜಕ. 25:17,18,19 "ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು. ದೇವರಿಗೆ ಭಯಪಡುವವರಾಗಿರಬೇಕು; ದೇವರ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು. ಆಗ ನೀವು ಆ ದೇಶದಲ್ಲಿ ನಿರ್ಭಯವಾಗಿ ವಾಸವಾಗಿರುವಿರಿ" ಎಂದು ಹೇಳುತ್ತದೆ. ಬರಗಾಲದ ಕಾರಣ ಜೀವನ ಸಾಗಿಸಲು ಪರದೇಶಕ್ಕೆ ಹೋಗಿ ಬರಿಗೈಯಲ್ಲಿ ಹಿಂತಿರುಗಿದ ವಿಧವೆ ತಾಯಿ ನವೋಮಿ, ತನ್ನ ವಿಧವೆ ಸೊಸೆ ರೂತಳಿಗೆ, “ನೀನು ಸತ್ತುಹೋದವರಿಗೂ ನನಗೂ ದಯೆ ತೋರಿಸಿದಂತೆಯೇ ದೇವರು ನಿನಗೂ ದಯೆ ತೋರಿಸಲಿ” ಎಂದು ಹೇಳಿದಳು. "ನೀನು ನಿನ್ನ ದೇಶಕ್ಕೆ ಹಿಂತಿರುಗಿ ಹೋಗು" ಎಂದಳು. ಆದರೆ ರೂತಳು ತನ್ನ ಅತ್ತೆಗೆ, “ನಿನ್ನ ಜನರೇ ನನ್ನ ಜನರು, ನಿಮ್ಮ ದೇವರೇ ನನ್ನ ದೇವರು" ಎಂದು ಹೇಳಿ, ಬಿಡದೇ ಹಿಡಿದುಕೊಂಡಳು. ದೇವರು ಅವಳನ್ನು ಆಶೀರ್ವದಿಸಿದರು. ಅವಳ ಬರಿದಾದ ಕಾರ್ಯಗಳನ್ನೆಲ್ಲಾ ದೇವರು ಸಂಪೂರ್ಣ ಮಾಡಿದರು. ಅವಳು ಬೋವಜನನ್ನು ಮದುವೆಯಾಗಿ ಓಬೇದನೆಂಬ ಮಗನನ್ನು ಸಹ ಹೆತ್ತಳು. ಎಲ್ಲಾ ರೀತಿಯ ಆಶೀರ್ವಾದಗಳನ್ನು ಪಡೆದು, ದೇಶದಲ್ಲಿ ಆರಾಮವಾಗಿ ವಾಸಿಸುತ್ತಿದ್ದಳು. ಅಷ್ಟೇ ಅಲ್ಲ, ಅವಳು ದೇವರ ಮಗನಾದ ಯೇಸು ಕ್ರಿಸ್ತನಿಗೆ ಮುತ್ತಜ್ಜಿಯೂ ಆದಳು.
ಹೌದು, ನನಗೆ ಪ್ರಿಯವಾದವರೇ! ಇಂದಿಗೂ ಸಹ, ನಮ್ಮ ದೇವರು ನೀವು ಈ ದೇಶದಲ್ಲಿ ಸಂತೋಷದಿಂದ ಬದುಕಬೇಕೆಂದು ಬಯಸುತ್ತಿದ್ದಾರೆ. ಇತರರಿಗೆ ವಿರುದ್ಧವಾದ ಕೆಟ್ಟದ್ದನ್ನು ತೊಲಗಿಸಿ, ಒಳ್ಳೆಯದನ್ನು ಮಾಡಿ, ದೇವರ ಆಜ್ಞೆಗಳ ಪ್ರಕಾರ ನಡೆಯಿರಿ. ದೇವರು ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುವರು. ಆತನು ನಿಮಗೆ ಇಹಲೋಕದ, ಪರಲೋಕದ ಆಧ್ಯಾತ್ಮಿಕ ಆಶೀರ್ವಾದಗಳೊಂದಿಗೆ ಆಶೀರ್ವದಿಸಿ, ಸಕಲ ವಿಧವಾದ ಉಪಕಾರಗಳನ್ನು ಕಾಣುವಂತೆ ಮಾಡುತ್ತಾರೆ. ನೀವು ಕೊರತೆಯನ್ನು ಕಾಣುವುದಿಲ್ಲ. ನಿಮ್ಮ ಕೊಟ್ಟಿಗೆಗಳು ಸಂಪೂರ್ಣವಾಗಿ ತುಂಬುವವು. ಪರದೇಶಿಯಾಗಿ ಹೋದ ಅಬ್ರಹಾಮನನ್ನು, ಯಾಕೋಬನನ್ನು, ರೂತಳನ್ನು ಆಶೀರ್ವದಿಸಿದ ಹಾಗೆ ಆಶೀರ್ವಾದವಾಗಿ ಜೀವಿಸಿ ಸುಖವಾಗಿರುವಂತೆ ಮಾಡುತ್ತಾರೆ.
- Sis. ಮಂಜುಳಾ
ಪ್ರಾರ್ಥನಾ ಅಂಶ:
ಮಹಿಳೆಯರಿಗಾಗಿ ಆಮೆನ್ ವಿಲೇಜ್ ಟಿವಿಯಲ್ಲಿ ಪ್ರಸಾರವಾಗುವ "ಇನಿಯವಳೆ" ಎಂಬ ಕಾರ್ಯಕ್ರಮಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482