By Village Missionary Movement
Sunday, 12-Jan-2025ಧೈನಂದಿನ ಧ್ಯಾನ(Kannada) – 12.01.2025 (Kids Special)
TASTE-ಆದ ಜೀವನ
"ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು" - ಕೀರ್ತನೆ 34:8
Hello ಮುದ್ದು ಪುಟಾಣಿಗಳೇ! Happy New year. ಹೊಸ ವರ್ಷವನ್ನು ನೋಡಲು ಸಹಾಯ ಮಾಡಿದ ಯೇಸಪ್ಪನಿಗೆ Thanks ಹೇಳಿಬಿಡೋಣವಾ? Super. ಈ ಹೊಸ ವರ್ಷದಲ್ಲಿ ನೀವು ಮಾಡುವ ಎಲ್ಲದರಲ್ಲೂ ಸಮೃದ್ಧಿ ಹೊಂದಿ ಯಶಸ್ಸು ಕಾಣಲು ನನ್ನ ಶುಭಾಶಯಗಳು. O.K. ಕಥೆ ಕೇಳೋಣ್ವಾ?
ಮೀನು ಯಾರಿಗೆಲ್ಲಾ ಇಷ್ಟ? ಎಲ್ಲರಿಗೂ ಇಷ್ಟಾನಾ? ಮೀನು ಕಣ್ಣಿಗೆ ತುಂಬಾ ಒಳ್ಳೆಯದು. ಕೂದಲು ಚೆನ್ನಾಗಿ ಬೆಳೆಯುತ್ತದೆ. ಇನ್ನೂ ಹಲವು ಆರೋಗ್ಯ ಸಲಹೆಗಳನ್ನು ಹೇಳ್ತಾರೆ. ಚೆನ್ನಾಗಿ ಮೀನು ತಿನ್ನಿ... O.K. ಜಪಾನ್‌ನಲ್ಲಿರುವವರು ಸಹ ನಿಮ್ಮಂತೆ ಮೀನು ಮತ್ತು ಏಡಿಗಳನ್ನು ಚೆನ್ನಾಗಿ ತಿನ್ನುತ್ತಾರಂತೆ. ಅವರು ಸಮುದ್ರಕ್ಕೆ ಹೋಗಿ, ಜೀವಂತವಾಗಿ ಮೀನುಗಳನ್ನು ಹಿಡಿದು ತರುತ್ತಾರೆ. ಆ ಮೀನುಗಳನ್ನು ಜನರು ಬೇಗನೆ ತೆಗೆದುಕೊಳ್ಳುತ್ತಾರೆ. ಆದರೆ ಹೆಚ್ಚಿನ ಜನರು ಐಸ್ ಬಾಕ್ಸ್‌ನಲ್ಲಿ ಇಟ್ಟು ತರುವ ಮೀನುಗಳನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಯಾಕೆ ಗೊತ್ತಾ? ಯಾಕಂದ್ರೆ ಅದು ಟೇಸ್ಟಾಗಿ ಇರೋದಿಲ್ವಂತೆ? ಓಕೆನಾ ಮುದ್ದು ಪುಟಾಣಿಗಳೇ!
ಪೀಟರ್ ಎಂಬ ಮಾಮ ಬಹಳ ದೂರ ಸಮುದ್ರದಲ್ಲಿ ಹೋಗಿ ಮೀನು ಹಿಡಿದು, ಎರಡು ದಿನಗಳ ನಂತರವೇ ಹಿಂತಿರುಗುತ್ತಿದ್ದರು. ಐಸ್ ನಲ್ಲಿ ಇಟ್ಟುಕೊಂಡು ಬರುವುದರಿಂದ ಯಾರೂ ಅದನ್ನು ತೆಗೆದುಕೊಳ್ಳಲಿಲ್ಲ. ಕೆಲವು ಜನರು ಮಾತ್ರ ತೆಗೆದುಕೊಂಡರು. ಐಸ್ ಮೀನು ರುಚಿ ಇರಲ್ಲ ಎಂದು ಹೇಳಿಕೊಂಡೆ ಹೋದರು. ಕಷ್ಟಪಟ್ಟು ಕೆಲಸ ಮಾಡಿದರೂ ಉತ್ತಮ ಆದಾಯ ಸಿಗಲಿಲ್ಲವಲ್ಲಾ ಎಂದು ಪೀಟರ್ ಮಾಮ ಬೇಸರಗೊಂಡಿದ್ದರು. "ಯೇಸಪ್ಪಾ, ದಯವಿಟ್ಟು ನನಗೆ ಏನಾದರೂ ಮಾರ್ಗವನ್ನು ತಿಳಿಸಿ" ಎಂದು ಅವರು ಪ್ರಾರ್ಥಿಸಿದರು. ಮುಂದೆ ಇನ್ನೇನು, ಯೇಸಪ್ಪ ತನಗೆ ಒಂದು ಒಳ್ಳೆಯ ಉಪಾಯವನ್ನು ಕೊಟ್ಟರು. ಅವರು ಸಮುದ್ರದ ಪಕ್ಕದಲ್ಲಿ ಗೋಡೆಯಿಟ್ಟು ತೊಟ್ಟಿ ಕಟ್ಟಿದರು. ಅವರು ಅದನ್ನು ನೀರಿನಿಂದ ತುಂಬಿಸಿದರು. ಅವರು ಜೀವಂತವಾಗಿ ಹಿಡಿದ ಮೀನುಗಳನ್ನು ಪ್ರತಿದಿನ ತೊಟ್ಟಿಯಲ್ಲಿರುವ ನೀರಿಗೆ ಹಾಕುತ್ತಿದ್ದರು. ಜೀವಂತ ಮೀನನ್ನು ಯಾರಾದರೂ ತೆಗೆದುಕೊಳ್ಳದೆ ಇರುತ್ತಾರಾ? ಖಂಡಿತ ತೆಗೆದುಕೊಳ್ಳುತ್ತಾರೆ ಅಲ್ವಾ. ಸಾಲಿನಲ್ಲಿ ನಿಂತು ಖರೀದಿಸಲು ಬಂದರು. ವ್ಯಾಪಾರ ಜೋರಾಗಿತ್ತು. ಪೀಟರ್ ಅಂಕಲ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಜೀವಂತ ಮೀನು ಟೇಸ್ಟ್ ಆಗಿ ಇದ್ದು ಇಷ್ಟು ಜನರನ್ನು ಸಂತೋಷಪಡಿಸಲು ಸಾಧ್ಯ ಎಂದರೆ... ಯೇಸಪ್ಪನ ಜೊತೆ ಜೀವನ ಎಷ್ಟು ರುಚಿಕರವಾಗಿರುತ್ತದೆ ಎಂದು ಅರಿತುಕೊಂಡ ಪೀಟರ್ ಮಾಮ, ಮೀನು ಖರೀದಿಸಲು ಬಂದ ಎಲ್ಲರಿಗೂ ಯೇಸಪ್ಪನ ಬಗ್ಗೆ ಹೇಳಲು ಪ್ರಾರಂಭಿಸಿದರು.
ಮುದ್ದು ಪುಟಾಣಿಗಳೇ! ಕಥೆ ಹೇಗಿತ್ತು? ಸೂಪರ್-ಆಗಿ ಇತ್ತಾ? ಮೀನಿನ ಟೇಸ್ಟ್ ಗಿಂತ ನೀವು Jesus ಕೂಡ ಇರುವ ಲೈಫ್ ತುಂಬಾ ಟೇಸ್ಟ್ ಆಗಿ ಇರುತ್ತದೆ. ಯೇಸಪ್ಪ ಇಲ್ಲದ ಜೀವನ ವ್ಯರ್ಥವಾಗಿ ಹೋಗಿಬಿಡುತ್ತದೆ ಬಂಗಾರ... ಈ ಹೊಸ ವರ್ಷದಲ್ಲಿ ನನ್ನ ಜೀವನ ಸಹ ಹೊಸದಾಗಿ ಬದಲಾಗಲಿ, ಯೇಸಪ್ಪಾ ಎಂದು ಕೇಳಿದರೆ, ಟೇಸ್ಟ್ ಆದ ಜೀವನವಾಗಿ ಬದಲಾಗಿ ಬಿಡುತ್ತದೆ. ತಕ್ಷಣ ಮೊಣಕಾಲೂರಿ. ದಯವಿಟ್ಟು ಪ್ರಾರ್ಥಿಸಿ. ನಿಮ್ಮನ್ನು ಯೇಸಪ್ಪನ ಕೈಗೆ ಒಪ್ಪಿಸಿಬಿಡಿ. O.k bye!
- Sis. ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482