Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.01.2025
Share:

By Village Missionary Movement

Friday, 10-Jan-2025

ಧೈನಂದಿನ ಧ್ಯಾನ(Kannada) – 10.01.2025

 

ಹೃದಯ ರಿಪೇರಿ ಮಾಡಲು 

 

"...ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು" - 1 ಸಮುವೇಲ 30:6

  

ಕೇರಿ ಅತ್ಯುತ್ತಮವಾದ ಸತ್ಯವೇದ ಅನುವಾದಕರು. ಇಡೀ ಸತ್ಯವೇದವನ್ನು ಎರಡು ಭಾಷೆಗಳಲ್ಲಿ ಮತ್ತು ಹೊಸ ಒಡಂಬಡಿಕೆಯನ್ನು 40 ಭಾಷೆಗಳಲ್ಲಿ ಭಾಷಾಂತರಿಸಲು ಕಾರಣರಾಗಿದ್ದರು. ಅವರು ಸತ್ಯವೇದದ ಕೆಲವು ಭಾಗಗಳನ್ನು 12 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಅನುವಾದಿಸಿದರು. ಹೀಗೆ ಅವರು ಅನುವಾದಿಸಿದ ಅನೇಕ ಮಹತ್ವದ ಸುರುಳಿಗಳನ್ನು ತಮ್ಮ ಶೇಖರಣಾ ಕೊಠಡಿಯಲ್ಲಿ ಭದ್ರವಾಗಿ ಇಟ್ಟಿದ್ದರು. ಇದು ಒಂದು ದಿನ ಅಥವಾ ಎರಡು ದಿನದ ಪ್ರಯತ್ನವಲ್ಲ, ಅನೇಕ ವರ್ಷಗಳು ಹಗಲು ರಾತ್ರಿ ನಿದ್ದೆಯಿಲ್ಲದೆ ಮಾಡಿದ ಕಠಿಣವಾದ ಪರಿಶ್ರಮ ಮತ್ತು ಪರಿಶ್ರಮದ ಪ್ರತಿಫಲ. ಆ ದಿನಗಳಲ್ಲಿ ಅವರು ಬರೆದಿದ್ದನ್ನು ಶೇಖರಿಸಿಡಲು ಕಂಪ್ಯೂಟರ್ ಸೌಲಭ್ಯವಿರಲಿಲ್ಲ ಮತ್ತು ಬರೆಯುವ ಪ್ರಕ್ರಿಯೆಗೆ ಅನುಕೂಲವಾಗುವಂತೆ ಜೆರಾಕ್ಸ್ ಸೌಲಭ್ಯವೂ ಇರಲಿಲ್ಲ. ಕಟ್ಟುಕಟ್ಟಾಗಿ ಬರೆದು ಸಾಲು ಸಾಲಾಗಿ ಜೋಡಿಸಲಾಗಿದ್ದ ಎಲ್ಲಾ ಪ್ರಮುಖ ಪತ್ರಿಕೆಗಳು ಅಂದು! ಹಠಾತ್ ಅಗ್ನಿ ಅವಘಡದಲ್ಲಿ ಎರಡು ಗಂಟೆಗಳೊಳಗೆ ಬೂದಿಯಾದವು. ಎಷ್ಟು ದೊಡ್ಡ ನಷ್ಟ. ಈ ಅನಿರೀಕ್ಷಿತ ನಷ್ಟವು ಅವರಿಗೆ ಸಹಿಸಲಾಗದ ಒಂದು ಮೋಸವಾಗಿತ್ತು. ಅವರ ಹೃದಯ ಒಡೆದು ಹೋಯಿತು. ಅವರೇ ಮಿಷನರಿಗಳ ತಂದೆಯಾದ ವಿಲಿಯಂ ಕೇರಿ.  

   

ಇದೇ ರೀತಿಯ ಒಂದು ಸಂಕಟವು ದಾವೀದನಿಗೆ ಬಂದಿತು. ದಾವೀದನು ಮತ್ತು ಅವನ ಜನರು ಯುದ್ಧದಿಂದ ಚಿಕ್ಲಾಗ್ಗೆ ಹಿಂದಿರುಗುವ ಮೊದಲು, ಅಮಾಲೇಕ್ಯರು ಚಿಕ್ಲಾಗ್ ಅನ್ನು ಲೂಟಿ ಮಾಡಿದರು, ಅದನ್ನು ಬೆಂಕಿಯಿಂದ ಸುಟ್ಟುಹಾಕಿದರು ದಾವೀದನು ಮತ್ತು ಅವನೊಂದಿಗೆ ಇದ್ದ ಪುರುಷರ ಹೆಂಡತಿಯರು, ಪುತ್ರರು ಮತ್ತು ಹೆಣ್ಣುಮಕ್ಕಳನ್ನು ಸೆರೆಹಿಡಿಯಲಾಯಿತು. ದಾವೀದನೂ ಅವನೊಂದಿಗಿದ್ದ ಜನರೂ ಇನ್ನು ಅಳಲಾಗದ ಮಟ್ಟಿಗೆ ಗಟ್ಟಿಯಾಗಿ ಅತ್ತರು. ದಾವೀದನು ತುಂಬಾ ಇಕ್ಕಟ್ಟಿಗೆ ಒಳಗಾದನು. ಎಲ್ಲಾ ಜನರು ಅವನ ಮೇಲೆ ಕಲ್ಲೆಸೆಯಲು ಮಾತಾಡಿಕೊಂಡರು. ದಾವೀದನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು. ಹೀಗೆ ದಾವೀದನು ತನ್ನ ಹೃದಯವನ್ನು ಸರಿಮಾಡಿ ರಿಪೇರಿ ಮಾಡಿಟ್ಟಿದ್ದರು. 

 

ಪ್ರಿಯರೇ! ರಿಪೇರಿ ಮಾಡುವುದು ಎಂದರೆ ಸರಿಪಡಿಸುವುದಾಗಿದೆ. ವಿಲಿಯಂ ಕೇರಿ ಅವರು ತಮ್ಮ ಹೃದಯವನ್ನು ಚೆನ್ನಾಗಿ ರಿಪೇರಿ ಮಾಡಿಕೊಂಡಿದ್ದದರಿಂದ ಸ್ವಲ್ಪವೂ ಸೋತುಹೋಗದೆ ತಾವು ಮಾಡಬೇಕಾದ ಎಲ್ಲಾ ಅನುವಾದಗಳನ್ನು ಮಾಡಿ ಮುಗಿಸಿದರು. ಅಂತೆಯೇ, ದಾವೀದನು ತನ್ನ ಹೃದಯವನ್ನು ಬಲಪಡಿಸಿಕೊಂಡದ್ದರ ಪರಿಣಾಮವಾಗಿ ಕಳೆದುಹೋದ ಎಲ್ಲವನ್ನೂ ಮರಳಿ ಪಡೆದರು. ರಿಪೇರಿ ಮಾಡುವುದು ಕಠಿಣವೇ. ಆದರೂ ದಿನವೂ ನಮ್ಮನ್ನು ನಾವೇ ಸರಿಮಾಡಿಕೊಂಡರೆ ಪ್ರತಿ ದಿನವೂ ನಮಗೆ ಜಯವೇ. ನಮ್ಮನ್ನು ನಾವೇ ನಿಧಾನವಾಗಿ, ಪರೀಕ್ಷಿಸಿಕೊಂಡರೆ ನಾವು ನ್ಯಾಯತೀರ್ಪಿಗೊಳಗಾಗುವುದಿಲ್ಲ ಎಂದು ಸತ್ಯವೇದವು ಎಚ್ಚರಿಸುತ್ತಿದೆ. ಆದ್ದರಿಂದ ನಮ್ಮನ್ನು ಉಂಟುಮಾಡಿದ ದೇವರ ಮುಂದೆ, ನಮ್ಮನ್ನು , ನಮ್ಮ ಹೃದಯವನ್ನು ಮತ್ತು ನಮ್ಮ ಎಲ್ಲಾ ಕಾರ್ಯಗಳನ್ನು ರಿಪೇರಿ ಮಾಡೋಣ. 

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಈ ವರ್ಷ ನಮ್ಮ ಗುರಿಗಳಲ್ಲಿ ನಮ್ಮೊಂದಿಗೆ ಸೇರಿ ತೋಳು ಕೊಡುವ ದೇವರ ಮಕ್ಕಳನ್ನು ದೇವರು ರಿಪೇರಿ ಮಾಡಿ ಪರಿಶುದ್ಧಗೊಳಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş