Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.01.2025
Share:

By Village Missionary Movement

Thursday, 09-Jan-2025

ಧೈನಂದಿನ ಧ್ಯಾನ(Kannada) – 09.01.2025

 

ನರ್ತಕಿ ಮತ್ತು ಸುವಾರ್ತಾಬೋಧಕರು

 

"ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು" - ಯೋಹಾನ 17:17

  

ಪ್ರಿಸ್ಸಿಲ್ಲಾ ಹದಿನಾರು ವರ್ಷದ ಸುಂದರ ನರ್ತಕಿ. ನೃತ್ಯದಲ್ಲಿ ಜಗತ್ಪ್ರಸಿದ್ಧಿಯಾಗಬೇಕೆಂಬುದು ಆಕೆಯ ಕನಸು. ಒಂದು ದಿನ ಅವಳು ಒಂದು ಕನಸು ಕಂಡಳು. ಆ ಕನಸಿನಲ್ಲಿ ಅವಳು ತನ್ನ ಸ್ನೇಹಿತೆಯರೊಂದಿಗೆ ಆಟವಾಡುತ್ತಿದ್ದಳು. ಜನಸಮೂಹದ ಮಧ್ಯೆ ಎತ್ತರದ, ವೈಭವದ, ಕಾಂತಿಯುತವಾಗಿ ಕಾಣುವ ವ್ಯಕ್ತಿಯನ್ನು ನೋಡಿದಳು. ಅವರು ಅವಳ ಬಳಿಗೆ ಬಂದು "ನೀನು ನನಗೆ ಗೊತ್ತಿಲ್ಲ" ಎಂದು ಹೇಳಿ ಹೊರಟುಹೋದರು. ಇವಳ ಮನಸಿಗೆ ತುಂಬಾ ನೋವಾಯಿತು. ಈ ವೇಳೆ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಪಟ್ಟಣಕ್ಕೆ ತೆರಳಿದ ಆಕೆ ಹೋಟೆಲ್ ಕೊಠಡಿಯಲ್ಲಿ ತಂಗಿದ್ದಳು. ಅಲ್ಲಿ ಪಕ್ಕದ ಕೋಣೆಯಲ್ಲಿದ್ದ ಹದಿಹರೆಯದ ಹುಡುಗಿಯ ಪರಿಚಯವಾಯಿತು. ರಕ್ಷಣೆ ಹೊಂದಿದ್ದ ಆ ಹುಡುಗಿಯ ಬಳಿ ತನ್ನ ಕನಸನ್ನು ಹೇಳಿದಳು. ಆ ಕನಸನ್ನು ಕೇಳಿದ ಹುಡುಗಿ ಬೆಚ್ಚಿಬಿದ್ದಳು. "ಆ ಎತ್ತರದಲ್ಲಿರುವ ಮನುಷ್ಯನೇ ಯೇಸು ಕ್ರಿಸ್ತನು" ಎಂದು ಹೇಳಿ ಪ್ರಿಸ್ಸಿಲ್ಲಾಳನ್ನು ರಕ್ಷಣೆಯೊಳಗೆ ನಡೆಸಿದಳು. ಪ್ರಿಸ್ಸಿಲ್ಲಾ ರಕ್ಷಣೆ ಹೊಂದಿದಳು. ನೃತ್ಯವನ್ನು ತ್ಯಜಿಸಿದಳು. ಅವಳು ಸುವಾರ್ತಾಬೋಧಕಿಯಾಗಿ ಚೀನಾಕ್ಕೆ ಹೋದಳು. ಚೀನಾ ಮಿಷನರಿ ಸಿ.ಟಿ. ಸ್ಟಡ್ ಅನ್ನು ಮದುವೆಯಾಗಿ ತೀವ್ರವಾಗಿ ಸೇವೆ ಮಾಡುವ ಸೇವಕಿಯಾದಳು.

      

ಫರಿಸಾಯನ ಮನೆಯಲ್ಲಿ ಪಂಕ್ತಿಯಲ್ಲಿದ್ದ ಯೇಸು ಕ್ರಿಸ್ತನನ್ನು ಒಬ್ಬ ಪಾಪಿಯಾದ ಸ್ತ್ರೀಯು ಹುಡುಕಿಕೊಂಡು ಬಂದಳು. ಅವಳು ಅವರ ಪಾದಗಳ ಬಳಿ ನಿಂತು, ತನ್ನ ಕಣ್ಣೀರಿನಿಂದ ಅವರ ಕಾಲುಗಳನ್ನು ತೇವಗೊಳಿಸಿ, ಮಹಿಳೆಯರಿಗೆ ವೈಭವಯುತವಾಗಿ ನೀಡಲ್ಪಟ್ಪಿರುವ ತನ್ನ ತಲೆಯ ಕೂದಲಿನಿಂದ ಒರೆಸಿದಳು. ಅವರ ಪಾದಗಳಿಗೆ ಮುತ್ತಿಟ್ಟು ಪರಿಮಳ ತೈಲವನ್ನು ಹಚ್ಚಿದಳು. ತನ್ನ ಪಾಪಗಳಿಗಾಗಿ ಅತ್ತಳು. ತನ್ನ ಮಹಿಮೆಯನ್ನು ಯೇಸುವಿನ ಪಾದದಲ್ಲಿ ಸಲ್ಲಿಸಿದಳು. ತನ್ನ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಲು ಸತತವಾಗಿ ಮುತ್ತಿಟ್ಟಳು. ತನ್ನ ಬಳಿ ಇದ್ದ ಬೆಲೆಬಾಳುವ ಪರಿಮಳ ತೈಲವನ್ನು ಹಚ್ಚಿ ತನ್ನ ಜೀವನವನ್ನು ದೇವರಿಗೆ ಅರ್ಪಿಸಿದಳು. ಪರಿಣಾಮವಾಗಿ ಯೇಸು, ಇವಳು ಮಾಡಿದ ಅನೇಕ ಪಾಪಗಳು ಕ್ಷಮಿಸಲ್ಪಟ್ಟವು ಎಂದರು. "ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿತು. ಸಮಾಧಾನದಿಂದ ಹೋಗು" ಎಂದು ಹೇಳಿದರು. ಇಲ್ಲಿ ಯೇಸು ಅವಳ ಅನೇಕ ಪಾಪಗಳನ್ನು ನೋಡದೆ ಅವಳ ಪ್ರೀತಿಯನ್ನು ಮತ್ತು ನಂಬಿಕೆಯನ್ನು ನೋಡಿದರು. ಅವಳ ಜೀವನವನ್ನು ಸಂಸ್ಕರಿಸಿ ಅವಳನ್ನು ಸಮಾಧಾನದಿಂದ ಕಳುಹಿಸಿದರು. ತಪ್ಪಾದ ಆದರ್ಶಗಳೊಂದಿಗೆ ಬದುಕಿದ ಪ್ರಿಸ್ಸಿಲ್ಲಾಳನ್ನು ತಕ್ಕ ದಾರಿಯಲ್ಲಿ ನಡೆಸಿ ಸರಿಮಾಡಿದರು. ಆದ್ದರಿಂದ ಅವಳು ಸಾವಿರಾರು ಆತ್ಮಗಳನ್ನು ದೇವರ ಬಳಿಗೆ ಮುನ್ನಡೆಸಿದಳು. ಯೇಸು ಕ್ರಿಸ್ತನನ್ನು ಕರ್ತನೆಂದು ನಂಬಿ ಸ್ವೀಕರಿಸಿದಾಗ, ಅವರು ಪಾಪಗಳನ್ನು ಕ್ಷಮಿಸಿ ಅನೇಕ ಪ್ರತಿಭೆಗಳನ್ನು ನೀಡಿ ಸರಿ ಮಾಡುತ್ತಾರೆ.

  

ನಮ್ಮನ್ನು ನಾವೇ ನಿಧಾನವಾಗಿ ಪರೀಕ್ಷಿಸಿ ನೋಡಿಕೊಳ್ಳೋಣ. ಧೂಳಿನಂತಹ ಪಾಪಗಳು, ಮುಲಾಮುನಂತಹ ಪಾಪಗಳು ಇವೆಯೇ? ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟು ನಿಮ್ಮ ಪ್ರೀತಿಯನ್ನು ಆತನಿಗೆ ನೀಡಿ. ನಿಮಗೆ ಸಮಾಧಾನ ನೀಡಿ ನಿಮ್ಮನ್ನೂ ಎತ್ತಿ ಉಪಯೋಗಿಸುತ್ತಾರೆ.

- Mrs. ವನಜಾ ಬಾಲರಾಜ್

 

ಪ್ರಾರ್ಥನಾ ಅಂಶ:

ನಮ್ಮ ಸೇವಕರನ್ನು ದೇವರು ರಿಪೇರಿ ಮಾಡಿ ಪರಿಶುದ್ಧಗೊಳಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al