Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.01.2025
Share:

By Village Missionary Movement

Wednesday, 08-Jan-2025

ಧೈನಂದಿನ ಧ್ಯಾನ(Kannada) – 08.01.2025

 

ಆರಾಧನೆಯೆಂಬ ಬಲಿಪೀಠ 

 

"ಯೆಹೋವನು ಮಹಾದೇವರೂ ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ" - ಕೀರ್ತನೆ 95:3

  

ಕರ್ತನಿಗೆ ನಾವು ಮಾಡಬೇಕಾದ ಆರಾಧನೆಯನ್ನು ಸತ್ಯವೇದವು ಎರಡು ವಿಧಗಳಾಗಿ ವಿಂಗಡಿಸುತ್ತದೆ. 1. ವ್ಯರ್ಥವಾದ ಆರಾಧನೆ (ಮತ್ತಾಯ 15:8, ಯೆಶಾಯ 29:13) 2. ಬುದ್ಧಿಯುಳ್ಳ ಆರಾಧನೆ. (ರೋಮಾ 12:1) ನಮ್ಮನ್ನು ಜೀವಂತ ಯಜ್ಞವಾಗಿ ಅರ್ಪಿಸಿಕೊಳ್ಳುವುದು ಮತ್ತು ಆರಾಧಿಸುವುದು ಬುದ್ಧಿಯುಳ್ಳ ಆರಾಧನೆಯಾಗಿದೆ! ಕರ್ತನನ್ನು ಹೆಚ್ಚಿಸಿ ಸ್ತುತಿಸುವುದು, ಸ್ತೋತ್ರ ಸಲ್ಲಿಸುವುದು ಮತ್ತು ಕಾಣಿಕೆಯಂತವುಗಳನ್ನು ಯಜ್ಞವೇದಿಯ ಮೇಲೆ ಅರ್ಪಿಸುವುದು ಕೂಡ ಆರಾಧನೆಯೇ! ಇಂದು ನಾವು ಹೇಗೆ ಆರಾಧಿಸಬೇಕೆಂದು ಧ್ಯಾನಿಸೋಣ. ಹೀಗೆ ನಮ್ಮ ಆರಾಧನೆಯು ಬುದ್ಧಿಯುಳ್ಳ ಆರಾಧನೆಯಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆರಾಧನೆ ಎಂಬ ಯಜ್ಞವೇದಿಯನ್ನು ಸರಿಮಾಡಿ ಆರಾಧಿಸೋಣ!

 

1.ನಮ್ಮ ಪ್ರಾಣ, ಆತ್ಮ, ಶರೀರವನ್ನು ಜೀವಂತ ಯಜ್ಞವಾಗಿ ದೇವರಿಗೆ ಅರ್ಪಿಸಬೇಕು. ಇದರ ಅರ್ಥವೇನು? ತಮ್ಮ ಚಿತ್ತವನ್ನು ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತಕ್ಕೆ ಒಪ್ಪಿಸಿಬಿಡಬೇಕು. ನಮ್ಮ ಸ್ವಾರ್ಥ ಮತ್ತು ಶಾರೀರಿಕ ಕ್ರಿಯೆಗಳನ್ನು ದೇವರು ಸುಟ್ಟು ಹಾಕುವಂತೆ ಅರ್ಪಿಸಬೇಕು.

 

2 .ಕೃತಜ್ಞತಾ ಸ್ತುತಿಗಳೊಂದಿಗೆ ಆತನ ಸನ್ನಿಧಿಯ ಮುಂದೆ ಬರಬೇಕು. ಸ್ತೋತ್ರ ಯಜ್ಞಗಳನ್ನು ಸಮರ್ಪಿಸಬೇಕು. (ಕೀರ್ತನೆ 95:2) (ಕೀರ್ತನೆ 100:4)

  

3.ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ಅಡ್ಡಬೀಳಬೇಕು. (ಕೀರ್ತನೆ 29:2) ನಮ್ಮನ್ನು ನಾವು ಪರೀಕ್ಷಿಸಿಕೊಂಡು, ಪಾಪಗಳನ್ನು ಒಪ್ಪಿಕೊಳ್ಳಬೇಕು. ಪಾಪಗಳಿಗಾಗಿ ನಿಜವಾಗಿಯೂ ಪಶ್ಚಾತ್ತಾಪ ಪಡಬೇಕು.

  

 4.ಆತ್ಮದಿಂದಲೂ, ಸತ್ಯದಿಂದಲೂ ಆರಾಧಿಸಬೇಕು. (ಯೋಹಾನ 4 : 23, 24) ನಾನು ಮತ್ತು ಪರಿಶುದ್ಧಾತ್ಮನು ಎಂಬ ಗ್ರಹಿಕೆಯೊಂದಿಗೆ, ಆಲೋಚನೆಗಳನ್ನು ಚದುರಿಸದೆ, ಆರಾಧನೆಯ ಎಲ್ಲಾ ಭಾಗಗಳಲ್ಲಿ ದೇವರಾತ್ಮನೊಂದಿಗೆ ನಮ್ಮ ಆತ್ಮ ಸೇರಿಬಿಡಬೇಕು.

 

5.ಭಯದಿಂದಲೂ, ಭಕ್ತಿಯಿಂದಲೂ ದೇವರಿಗೆ ಇಷ್ಟವಾದ ಆರಾಧನೆಯನ್ನು ಮಾಡಬೇಕು. (ಇಬ್ರಿಯ 12:28)

 

6.ನಮ್ಮಿಂದ ಸಾಧ್ಯವಾದ ಕಾಣಿಕೆಯನ್ನು ಕೃತಜ್ಞತೆ ಮತ್ತು ಪ್ರಾರ್ಥನೆಯೊಂದಿಗೆ ಸಲ್ಲಿಸಬೇಕು.

 

7.ನಮ್ಮನ್ನು ತಗ್ಗಿಸಿಕೊಳ್ಳಬೇಕು ಮತ್ತು ದೇವರನ್ನು ಹೆಚ್ಚಿಸಿ ಆರಾಧಿಸಬೇಕು. ಆತನು ಸರ್ವಶಕ್ತನು. ಆತನ ಹೊರತಾಗಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಪರಿಶುದ್ಧನಾದ ಆತನನ್ನು ಆರಾಧಿಸಲು ನಾವು ಅರ್ಹರಲ್ಲ. ನಾವು ನಂಬಿಗಸ್ಥರಲ್ಲ, ಬದಲಾಗುವವರು. ಆತನೋ ನಂಬಿಗಸ್ಥನು, ಮಾರ್ಪಡದಾತನು ಎಂಬುದನ್ನೆಲ್ಲಾ ಯೋಚಿಸಿ ಆರಾಧಿಸಬೇಕು.

            

"ನಿನ್ನ ಸತ್ಯಪ್ರಸನ್ನತೆಗಳನ್ನು [ದೂತರನ್ನೋ ಎಂಬಂತೆ] ಕಳುಹಿಸು; ಅವೇ ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಸೇರಿಸಲಿ. ಆಗ ನಾನು ನಿನ್ನ ಯಜ್ಞವೇದಿಯ ಬಳಿಗೆ, ನನ್ನ ಆನಂದನಿಧಿಯಾಗಿರುವ ನಿನ್ನ ಹತ್ತಿರಕ್ಕೆ ಸೇರುವೆನು. (ಕೀರ್ತನೆ 43:3, 4) ಎಂಬ ಪ್ರಾರ್ಥನೆಯನ್ನು ಮಾಡಿ, ನಮ್ಮ ಆರಾಧನೆ ಎಂಬ ಯಜ್ಞವೇದಿಯನ್ನು ಸರಿಮಾಡಿ, ಬುದ್ಧಿಯುಳ್ಳ ಆರಾಧನೆಯನ್ನು ಮಾಡೋಣ!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ: 

ಈ ವರ್ಷ ನಮ್ಮ ಗುರಿಗಳನ್ನು ಹೊಂದಲು ಯೋಜನೆ ಹಾಕುವ ನಮ್ಮ ನಾಯಕರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel