Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.01.2025
Share:

By Village Missionary Movement

Tuesday, 07-Jan-2025

ಧೈನಂದಿನ ಧ್ಯಾನ(Kannada) – 07.01.2025

 

ತಾಳ್ಮೆಯ ಬಲಿಪೀಠವನ್ನು ಸರಿಮಾಡೋಣ

 

"…ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು…" - ಲೂಕ 18:14

  

ಇಂದು ನಿಜವಾಗಿ ತಾಳ್ಮೆಯಿಂದ ಇರುವವರನ್ನು ನೋಡುವುದು ಬಹಳ ಅಪರೂಪವಾಗಿದೆ. ಪ್ರಾಪಂಚಿಕ ಜೀವನದಲ್ಲಿ ತಮ್ಮನ್ನು ನಿಜವಾಗಿಯೂ ತಗ್ಗಿಸಿಕೊಂಡ ಅನೇಕರು ಉನ್ನತ ಸ್ಥಾನವನ್ನು ಪಡೆದರು. ಹೆಮ್ಮೆ ಪಡುತ್ತಿದ್ದ ಅನೇಕರು ಹೊಟ್ಟಿನಂತೆ ಕಾಣದೆ ಮಾಯವಾದರು. ಲೂಷಿಫರ್ ಹೆಮ್ಮೆಯಿಂದ ತನ್ನ ಸ್ಥಾನವನ್ನು ಕಳೆದುಕೊಂಡನು. ನಾವು ಸಹ ಹೆಮ್ಮೆಪಡುವಂತಹ ಮಾರ್ಗಗಳನ್ನು ನಮಗೆ ಸಿದ್ಧ ಮಾಡಿಕೊಟ್ಟು, ಹೆಮ್ಮೆ ಪಡುವಂತೆ ಮಾಡಿ ಪಾತಾಳಕ್ಕೆ ಕೊಂಡೊಯ್ಯಲು ಕಾಯುತ್ತಿದ್ದಾನೆ. ಅವನು ಹವ್ವಳನ್ನು ವಂಚಿಸಿ ಹೆಮ್ಮೆಪಡುವಂತೆ ಮಾಡಿ, ವಿಧೇಯಳಾಗದೆ ದೇವರ ಆಜ್ಞೆಗೆ ಕಿವಿಗೊಡದಂತೆ ಹವ್ವಳನ್ನು ತಳ್ಳಿದನು. (ಆದಿ. 3 : 5) ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗುವಿರಿ ಎಂದು ಆಸೆ ತೋರಿಸಿದನು.

 

ಅವನು ತನ್ನ ಸಿಂಹಾಸನವನ್ನು ದೇವರ ಸಿಂಹಾಸನಕ್ಕಿಂತ ಮೇಲೆ ಏರಿಸಲು ಯೋಚಿಸಿದ್ದರಿಂದ ಬಿದ್ದು ಹೋದನು. ಜನರಿಗೆ ದೇವರಂತಾಗಲು ಆಸೆ ತೋರಿಸಿ ಬೀಳಿಸುತ್ತಿದ್ದಾನೆ. ಅವನು ಯೇಸುವನ್ನು ಪರೀಕ್ಷಿಸಿದನು ಮತ್ತು ನೀನು ನನಗೆ ನಮಸ್ಕರಿಸಿದರೆ ಎಲ್ಲವೂ ನಿನದಾಗುತ್ತದೆ ಎಂದು ಹೇಳಿದನು. ಸೈತಾನನ ತಂತ್ರದ ಬಲೆಯಲ್ಲಿ ಸಿಕ್ಕಿಕೊಂಡು ಅನೇಕರು ನಾಶವಾಗುವುದನ್ನು ನೋಡುತ್ತಿದ್ದೇವೆ.      

  

ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್ಟನ್ ತುಂಬಾ ತಾಳ್ಮೆಯುಳ್ಳವರು. ಕಠಿಣವಾಗಿ ದುಡಿಯುವವರು, ದೇವರಿಗೆ ಭಯಪಡುವ ಮನುಷ್ಯ ಎಂದು ಎಲ್ಲರೂ ಕರೆಯುವ ಹಾಗೆ ಬದುಕಿದ ಅವರು ಇಂದಿಗೂ ನಂಬರ್ ಒನ್ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದಾರೆ. ಅಧ್ಯಕ್ಷರಾಗುವ ಮೊದಲು ಅವರು ಸೇನಾ ಕಮಾಂಡರ್ ಆಗಿದ್ದರು. ಒಂದು ದಿನ ಇವರು ಸಾಮಾನ್ಯ ಮನುಷ್ಯನಂತೆ ವೇಷ ಧರಿಸಿ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದರು. ಇವರು ಸೇನಾ ಕಮಾಂಡರ್ ಎಂದು ಯಾರೂ ತಿಳಿಯಲಿಲ್ಲ. ಸೈನಿಕರ ನಾಯಕನಾಗಿದ್ದ ವ್ಯಕ್ತಿಯೊಬ್ಬ ತನ್ನ ಕೈಕೆಳಗಿನ ಸೈನಿಕರ ಬಳಿ ಕಠಿಣವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇದನ್ನು ನೋಡಿದ ವಾಷಿಂಗ್ಟನ್, ನೀವು ಸಹ ಅವರಿಗೆ ಸಹಾಯ ಮಾಡಬಹುದಲ್ಲಾ ಎಂದು ನಾಯಕನಿಗೆ ಹೇಳಿದರು. ಕೂಡಲೇ ಅವರು, "ನಾನು ನಾಯಕನು ಕೆಲಸ ಮಾಡುವುದಿಲ್ಲ, ಕೆಲಸ ಮಾಡಿಸುವುದಕ್ಕಾಗಿಯೇ ಇದ್ದೇನೆ" ಎಂದರು. ತಕ್ಷಣವೇ ವಾಷಿಂಗ್ಟನ್, ಉಳಿದ ಸೈನಿಕರೊಂದಿಗೆ, ಕಠಿಣವಾಗಿ ಕೆಲಸಮಾಡಿಬಿಟ್ಟು, ಹೊರಡುವಾಗ ಕಾರ್ಡ್ ಕೊಟ್ಟು ಕೆಲಸಮಾಡಲು ಅಗತ್ಯವಿದ್ದರೆ ನನ್ನನ್ನು ಸಂಪರ್ಕಿಸಿ ಬರುತ್ತೇನೆ ಎಂದರು. ಅದರ ಮೇಲೆ ಯುನೈಟೆಡ್ ಸ್ಟೇಟ್ಸ್ ಸೈನ್ಯದ ಕಮಾಂಡರ್ ಇನ್ ಚೀಫ್ ಜಾರ್ಜ್ ವಾಷಿಂಗ್ಟನ್ ಎಂದು ಬರೆಯಲಾಗಿತ್ತು. ಇದನ್ನು ಓದಿದ ನಾಯಕ ತಕ್ಷಣ ಸಾಷ್ಟಾಂಗವಾಗಿ ಅವರ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡನು.

  

ಇದನ್ನು ಓದುತ್ತಿರುವ ನಮ್ಮ ಹೃದಯದಲ್ಲಿಯೂ ಹೆಮ್ಮೆ ಇದ್ದರೆ, ನಮ್ಮ ಹೃದಯವಾಗಿರುವ ಬಲಿಪೀಠವನ್ನು ಸರಿಮಾಡೋಣ. ತಾಳ್ಮೆಯನ್ನು ದೇವರ ಬಳಿ ಕೇಳೋಣ. ಮಾಯಾ ಜಾಲದಂತಹ ತಾಳ್ಮೆಯಿಂದ ಜನರನ್ನು ವಂಚಿಸುತ್ತಿದ್ದರೆ ಮನತಿರುಗೋಣ. ನಿಜವಾದ ತಾಳ್ಮೆಯನ್ನು ಧರಿಸಿಕೊಳ್ಳೋಣ.

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಭಾರತದಾದ್ಯಂತ 50,000 ಹಳ್ಳಿಗಳಿಗೆ ಸುವಾರ್ತೆಯನ್ನು ಪ್ರಕಟಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel