By Village Missionary Movement
Monday, 06-Jan-2025ಧೈನಂದಿನ ಧ್ಯಾನ(Kannada) – 06.01.2025
ಕೃತಜ್ಞತೆಯೇ ಒಳ್ಳೆಯದನ್ನು ತರುತ್ತದೆ
"…ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ." - ಕೀರ್ತನೆ 103:2
ಇಸ್ರಾಯೇಲ್ಯರು ದೇವರು ತಮಗೆ ಮಾಡಿದ ಉಪಕಾರಗಳನ್ನು ಮರೆತದ್ದರಿಂದ, ಕೃತಜ್ಞತೆ ಸಲ್ಲಿಸುವ ಬದಲು ಗುಣುಗುಟ್ಟಿದರು. ಗುಣುಗುಟ್ಟುವುದರಿಂದ ಅವರು ಕಾನಾನ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಮತ್ತು ಅರಣ್ಯದಲ್ಲಿ ನಾಶವಾದರು. ದೇವರು ಮಾಡಿದ ಉಪಕಾರಗಳನ್ನು ನಾವು ಸಹ ಮರೆತರೆ ತಾನಾಗಿಯೇ ದೂರುವುದು, ಗೊಣಗುವುದು ನಮ್ಮ ಹೃದಯದಲ್ಲಿ ಬರುತ್ತದೆ. ಅದು ನಮ್ಮನ್ನು ನೇರವಾಗಿ ಪಾಪದೆಡೆಗೆ ಕರೆದೊಯ್ಯುತ್ತದೆ. ಅದರ ನಿಮಿತ್ತವಾಗಿ ಪರಮ ಕಾನಾನ್ ಅನ್ನು ಪ್ರವೇಶಿಸುವುದು ಅಸಾಧ್ಯವಾದ ಕಾರ್ಯವಾಗಿಬಿಡುತ್ತದೆ. ಆದುದರಿಂದ, ದೇವರು ಮಾಡಿದ ಉಪಕಾರಗಳನ್ನು ನೆನೆಸಿ ನೋಡಿ ಸ್ತೋತ್ರಗಳ ಯಜ್ಞವನ್ನು ಸಲ್ಲಿಸುವಂತೆ ನಮ್ಮ ಜೀವನವನ್ನು ಸರಿಮಾಡೋಣ.
ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಬಾಲಕನೊಬ್ಬ ತನ್ನ ಹಸಿವು ನೀಗಿಸಲು ಬೇಡಿಕೊಳ್ಳತೊಡಗಿದ. ಅಂಗಡಿಯೊಂದರ ಮುಂದೆ ನಿಂತು ಹಸಿವಾಗುತ್ತಿದೆ, ಏನಾದರೂ ಕೊಡಿ ಎಂದು ಹಲವರ ಬಳಿ ಕೇಳಿದನು. ಯಾರೂ ಸಹ ಆಹಾರವನ್ನು ತೆಗೆದುಕೊಳ್ಳಲು ಸಾಕಷ್ಟು ಹಣವನ್ನು ನೀಡಲಿಲ್ಲ. ಒಬ್ಬ ವ್ಯಕ್ತಿ ಹುಡುಗನ ಸ್ಥಿತಿಯನ್ನು ನೋಡಿ ಅವನಿಗೆ ತೃಪ್ತಿಯಾಗುವಂತೆ ತಿನ್ನಲು ಆಹಾರವನ್ನು ತೆಗೆದುಕೊಟ್ಟು, ಅವರು ಊಟ ಮಾಡಲು ಹೊರಟು ಹೋದರು. ತನಗೆ ಆಹಾರವನ್ನು ತೆಗೆದುಕೊಟ್ಟವರು ಊಟಮಾಡಿ ಬರುವವರೆಗೂ ಕಾದು ಕುಳಿತಿದ್ದ ಹುಡುಗ, ಅವರು ಬಂದ ಕೂಡಲೇ ಅಯ್ಯಾ, ಧನ್ಯವಾದ ಎಂದನು. ಹುಡುಗನ ಈ ಕಾರ್ಯವು ಆಹಾರವನ್ನು ತೆಗೆದುಕೊಟ್ಟ ವ್ಯಕ್ತಿಯನ್ನು ಆಶ್ಚರ್ಯಗೊಳಿಸಿತು. ಅವರು ಹುಡುಗನನ್ನು ಕ್ರಿಸ್ತನಲ್ಲಿ ಮುನ್ನಡೆಸಿ ಅವನನ್ನು ಸೇವಕನನ್ನಾಗಿ ಮಾಡಿದರು. ಅವರು ಬ್ರೆಜಿಲಿಯನ್ ಮಿಷನರಿ ಮ್ಯಾಕ್ಸ್ ಲುಕಾಡೊ. ಹತ್ತು ಮಂದಿ ಕುಷ್ಠರೋಗಿಗಳಲ್ಲಿ ಒಬ್ಬರು ಮಾತ್ರ ಕೃತಜ್ಞರಾಗಿದ್ದರು. ಯೇಸುವಿನಿಂದ ವಾಸಿಯಾದ ಹತ್ತು ಕುಷ್ಠರೋಗಿಗಳಲ್ಲಿ ಒಂಭತ್ತು ಮಂದಿಯೂ ಕೃತಜ್ಞತೆಯನ್ನು ಮರೆತವರಾಗಿದ್ದರು. ಮೂವತ್ತು ಬೆಳ್ಳಿಯ ನಾಣ್ಯಗಳಿಗಾಗಿ ಯೇಸುವಿಗೆ ದ್ರೋಹ ಮಾಡಿದನು ಇಸ್ಕರಿಯೋತ ಯೂದ. ಯೇಸುವಿನಿಂದ ಆಧ್ಯಾತ್ಮಿಕ ಒಳಿತನ್ನು ಮತ್ತು ಲೌಕಿಕ ಒಳಿತನ್ನು ಪಡೆದ ಇಸ್ಕರಿಯೋತ ಯೂದ ಕೃತಜ್ಞತೆ ಸಲ್ಲಿಸಲು ಮರೆತದ್ದರಿಂದ ದ್ರೋಹಿಯಾದನು. ಪರಲೋಕದ ಒಳಿತನ್ನು ಪಡೆಯದ ಹಾಗೆ ಈ ಲೋಕದ ಆಶೆಯು ಅವನನ್ನು ನಾಶಮಾಡಿಬಿಟ್ಟಿತು. ಪೇತ್ರನು ಯೇಸುವಿನಿಂದ ಪಡೆದ ಉಪಕಾರವನ್ನು ನೆನಪಿಸಿಕೊಂಡದ್ದರಿಂದಲೇ, ತನ್ನ ಕೃತಜ್ಞತೆಯಿಲ್ಲದ ಸ್ವಭಾವಕ್ಕಾಗಿ ಪಶ್ಚಾತ್ತಾಪದಿಂದ ಅತ್ತರು. ಯೇಸು ಕೂಡ ಪೇತ್ರನನ್ನು ಅಂಗೀಕರಿಸಿದರು.
ಇಂದು, ನಾವು ಸಹ ಕೃತಜ್ಞತೆಯನ್ನು ಮರೆತು ನಮ್ಮ ಕ್ರಿಯೆಗಳಿಂದ ಯೇಸುವನ್ನು ತಿರಸ್ಕರಿಸಿದ್ದರೆ, ಮೊದಲಿನ ಪ್ರೀತಿಯಿಂದ ಯೇಸು ಮಾಡಿದ ಉಪಕಾರಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಹಾಗೆ ನಮ್ಮ ಕಾರ್ಯಗಳನ್ನು ಸರಿಮಾಡೋಣ. ಸ್ನಾನಿಕನಾದ ಯೋಹಾನನು ಹೇಳಿದ ಹಾಗೆ, (ಮತ್ತಾಯ 3: 8) ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲದಿಂದ ತೋರಿಸಿ ಭೂಲೋಕದಲ್ಲಿಯೂ ಪರಲೋಕದಲ್ಲಿಯೂ
ನೂರು ಪಟ್ಟು ಪ್ರತಿಫಲವನ್ನು ಪಡೆಯೋಣ. ಆಮೆನ್
- Mr. ಸೆಲ್ವರಾಜ್
ಪ್ರಾರ್ಥನಾ ಅಂಶ:
ಭಾರತದಾದ್ಯಂತ 1000 ಮಿಷನರಿಗಳು ರೂಪುಗೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482