Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.01.2025 (Kids Special)
Share:

By Village Missionary Movement

Sunday, 05-Jan-2025

ಧೈನಂದಿನ ಧ್ಯಾನ(Kannada) – 05.01.2025 (Kids Special)

 

ಧನ್ಯವಾದ! ಧನ್ಯವಾದ!

 

"ವರ್ಣಿಸಲಶಕ್ಯವಾದ ದೇವರ ವರಕ್ಕಾಗಿ ಆತನಿಗೆ ಸ್ತೋತ್ರ" - 2 ಕೊರಿಂಥ. 9:15

 

ಹಾಯ್ ಪುಟಾಣಿಗಳೇ, ಹೊಸ ವರ್ಷದ ಶುಭಾಶಯಗಳು. ದಿನಗಳು ಎಷ್ಟು ವೇಗವಾಗಿ ಓಡುತ್ತಿವೆ ನೋಡುದ್ರಾ? 2024 ನೇ ವರ್ಷ ಮುಗಿದು ಹೊಸ ವರ್ಷ ಬಂದುಬಿಡ್ತು! ಇಂದು ನಮ್ಮ Sunday school ನಲ್ಲಿ ಒಂದು ವಿಶೇಷ ದಿನ. ಅದು ಏನು ಗೊತ್ತಾ? ಕಳೆದ ವರ್ಷವಿಡೀ ನಮ್ಮನ್ನು ಕಾಪಾಡಿದ ದೇವರಿಗೆ ಧನ್ಯವಾದ ಹೇಳಿ, ಈ ಹೊಸ ವರ್ಷವನ್ನು ನೋಡುವಂತೆ ಮಾಡಿದ್ದಕ್ಕಾಗಿ ಸ್ತೋತ್ರಗಳನ್ನು ಅರ್ಪಿಸಲಿದ್ದೇವೆ. 0.k ಅದಕ್ಕೂ ಮುನ್ನ ಒಂದು ಪುಟ್ಟ ಕಥೆ ಕೇಳೋಣ್ವಾ?

  

ಟಾಟಾ see you bye, school bus ಬಂದುಬಿಡ್ತು ಎಂದು ದಿವ್ಯ ಅವಸರದಿಂದ ಓಡಿದಳು. ಬಸ್ಸು ಮರೆಯಾಗುವವರೆಗೂ ಅಜ್ಜಿ ನಿಂತು ಕೈ ಬೀಸುತ್ತಿದ್ದರು. ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ದಿವ್ಯ ಅಜ್ಜಿಯ ಬಳಿಯೇ ಬೆಳೆದಳು. ಅಜ್ಜಿ ತುಂಬಾ ಪ್ರೀತಿಯಿಂದಲೂ ಅದೇ ಸಮಯದಲ್ಲಿ ಕಟ್ಟುನಿಟ್ಟಾಗಿಯೂ ಇರುತ್ತಿದ್ದರು. ದಿವ್ಯಾಗೆ ಒಳ್ಳೆಯ ಪ್ರಾರ್ಥಿಸುವ ಅಭ್ಯಾಸವಿತ್ತು. ನಿದ್ರೆಯಿಂದ ಎದ್ದ ನಂತರ, ಅಧ್ಯಯನ ಮಾಡುವ ಮೊದಲು, ಮಲಗುವ ಮೊದಲು, ಹೀಗೆ ಯಾವಾಗಲೂ ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದಳು. ಒಂದೊಂದು ಹೊತ್ತು ಸಹ ಊಟ ತಿನ್ನುವ ಮೊದಲು ಯೇಸಪ್ಪನಿಗೆ ಧನ್ಯವಾದ ಹೇಳಿಬಿಟ್ಟು ನಂತರವೇ ತಿನ್ನುತ್ತಿದ್ದಳು. ನೀವು ಹೇಗೆ? ಪೂರಿ ಮತ್ತು ಮಟನ್ ಸಾರು ಅಮ್ಮ ಇಟ್ಟ ಕೂಡಲೇ ಲಬಕ್ ಎಂದು ತಿಂದುಬಿಡುತ್ತೀರ ತಾನೇ! ಎಲ್ಲದಕ್ಕೂ ಧನ್ಯವಾದ ಹೇಳುತ್ತಿರುವ ದಿವ್ಯಾಳನ್ನು ನೋಡಿ ಕ್ಲಾಸಿನ ಮಕ್ಕಳೆಲ್ಲ ಅವಳನ್ನು ಗೇಲಿ ಮಾಡುತ್ತಿದ್ದರು. ಅದೆಲ್ಲವನ್ನೂ ಕಂಡುಕೊಳ್ಳದೆ, ನನಗೆ ಸಿಗುವ ಎಲ್ಲಾ ಪ್ರಯೋಜನಗಳು ಯೇಸಪ್ಪ ಕೊಟ್ಟದ್ದೇ ಎಂದು ಹೇಳುವುದಕ್ಕೆ ನಾಚಿಕೊಳ್ಳುತ್ತಿರಲಿಲ್ಲ.

 

ಆ ದಿನ ಬೆಳಿಗ್ಗೆ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಅವರು ಎದ್ದು ದಿವ್ಯಾಗೆ ಊಟ ಕೊಡಲು ವೇಗವಾಗಿ ಕೆಲಸ ಮಾಡಿದರು. ಅಜ್ಜಿಗೆ ಆಗದಿದ್ದರೂ ನನಗೋಸ್ಕರ ಊಟ ಮಾಡುತ್ತಿದ್ದಾರಲ್ಲಾ ಎಂದುಕೊಂಡು ಯೇಸಪ್ಪನಿಗೆ ಧನ್ಯವಾದ ಹೇಳಿದಳು. ಲಂಚ್ ಟೈಮ್ ನಲ್ಲಿ ದಿವ್ಯಾಳನ್ನು ಗೇಲಿ ಮಾಡುವುದಕ್ಕಾಗಿಯೇ ಒಂದು ಗುಂಪು ಇತ್ತು. ದಿವ್ಯಾ ಟಿಫಿನ್ ಬಾಕ್ಸ್ ತೆರೆದು ಪ್ರಾರ್ಥನೆ ಮಾಡಿಬಿಟ್ಟು ಊಟವನ್ನು ನೋಡಿದಳು. ಕಾಗೆ ಗಲೀಜು ಹಾಕಿಬಿಟ್ಟಿತ್ತು. ಅಷ್ಟೇ ಎಲ್ಲಾ ಮಕ್ಕಳು ನಕ್ಕರು. "ನಿನ್ನ ಪ್ರಾರ್ಥನೆಗೆ ಉತ್ತರ ಇದೇನಾ?" ಎಂದು ಗೇಲಿ ಮಾಡಿದರು. ದಿಢೀರನೆ ಅಜ್ಜಿ ವೇಗವಾಗಿ ಬಂದು, "ದಿವ್ಯಾ ತಿಂದುಬಿಟ್ಟಾ? ಈಗಷ್ಟೇ ಸಾಂಬಾರಿನಲ್ಲಿ ಹಲ್ಲಿ ಬಿದ್ದಿದ್ದು ನೋಡಿದೆ" ಎಂದು ಅಳಲು ತೋಡಿಕೊಂಡರು. ದಿವ್ಯಾ "ಇಲ್ಲ ಅಜ್ಜಿ ಯೇಸಪ್ಪ ನನ್ನನ್ನು ಕಾಪಾಡಿದರು, ಕಾಗೆ ಗಲೀಜು ಹಾಕಿದ್ದರಿಂದ ನಾನು ಆಹಾರವನ್ನು ಕೆಳಗೆ ಚೆಲ್ಲಿಬಿಟ್ಟೆ" ಎಂದಳು ದಿವ್ಯ. "ನನ್ನ ಬಂಗಾರಿ ಯೇಸಪ್ಪ ನಿನ್ನನ್ನು ಎಷ್ಟು ಅದ್ಭುತವಾಗಿ ಕಾಪಾಡಿದ್ದಾರೆ" ಎಂದು ಕಣ್ಣೀರಿನೊಂದಿಗೆ ದಿವ್ಯಾಳನ್ನು ಅಪ್ಪಿಕೊಂಡರು. ದಿವ್ಯಾಳನ್ನು ಗೇಲಿ ಮಾಡಿದ ಮಕ್ಕಳೆಲ್ಲ ನಡೆದದ್ದನ್ನು ನೋಡಿ ಆಶ್ಚರ್ಯಪಟ್ಟರು. ತಮ್ಮ ತಪ್ಪಿನ ಅರಿವಾಗಿ ದಿವ್ಯಾಗೆ ಸ್ನೇಹಿತರಾಗಿ ಬದಲಾದರು.

  

ಮುದ್ದು ಪುಟಾಣಿಗಳೇ! ಕಳೆದ ವರ್ಷ ಪೂರ್ತಿ ಯೇಸಪ್ಪ ನಿಮ್ಮನ್ನು ಕಣ್ಣಿನ ಗುಡ್ಡೆಯಂತೆ ಕಾಪಾಡಿ ಯಾವ ಕೇಡು ಬಳಿ ಬರದಂತೆ, ಅನಾರೋಗ್ಯದಿಂದ ತಪ್ಪಿಸಿ ಸ್ವಸ್ಥತೆಯನ್ನು ಕೊಟ್ಟು, ಅಗತ್ಯಗಳನ್ನು ಪೂರೈಸಿ ಅದ್ಭುತವಾಗಿ ನಡೆಸುತ್ತಾ ಬಂದರಲ್ಲಾ, ಇಂದಿನವರೆಗೂ ಜೀವಂತವಾಗಿ ಇಟ್ಟಿದ್ದಾರಲ್ಲಾ! ಯೇಸಪ್ಪನಿಗೆ ಧನ್ಯವಾದ ಹೇಳಬೇಕು. ದಿವ್ಯಾಳ ಹಾಗೆ, ಎಲ್ಲದಕ್ಕೂ ಧನ್ಯವಾದ ಹೇಳಲು ಮರೆಯಲೇ ಬಾರದು. O.k ನಾ!

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice