Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.01.2025
Share:

By Village Missionary Movement

Friday, 03-Jan-2025

ಧೈನಂದಿನ ಧ್ಯಾನ(Kannada) – 03.01.2025

 

ಎರಡು ಮುಖ

 

"ಬನ್ನಿರಿ, ನಾನು ಮಾಡಿದವುಗಳನ್ನೆಲ್ಲಾ ನನಗೆ ತಿಳಿಸಿದ ಮನುಷ್ಯನನ್ನು ನೋಡಿರಿ; ಈತನು ಆ ಕ್ರಿಸ್ತನಲ್ಲವೇ ಅಂದಳು" - ಯೋಹಾನ 4:29

  

ವರ್ಷದ ಮೊದಲ ತಿಂಗಳು "ಜನವರಿ" ಎಂಬ ಹೆಸರು ರೋಮನ್ ದೇವರು ಜಾನಸ್ ಎಂಬ ಹೆಸರಿನಿಂದ ಬಂದಿದೆ. ಜಾನಸ್ ಎಂದು ಕರೆಯಲ್ಪಡುವ ರೋಮನ್ ದೇವತೆಯ ರೂಪವು ಎರಡು ಮಾನವ ಮುಖಗಳನ್ನು ಒಳಗೊಂಡಂತೆ ಇರುತ್ತದೆ. ಒಂದು ಮುಖ ಹಿಂತಿರುಗಿ ನೋಡುತ್ತದೆ. ಇನ್ನೊಂದು ಮುಖ ಮುಂದೆ ನೋಡುತ್ತದೆ. ವರ್ಷದ ಅಂತ್ಯ ಮತ್ತು ಆರಂಭವನ್ನು ಪ್ರತಿನಿಧಿಸಲು ಈ ರೂಪದ ಪ್ರಕಾರ ಜನವರಿಯನ್ನು ಹೆಸರಿಸಲಾಗಿದೆ. ಇದರ ಹೊರತಾಗಿ ಪ್ರತಿಯೊಬ್ಬರ ಜೀವನದಲ್ಲೂ ಎರಡು ಮುಖಗಳಿರುತ್ತವೆ, ಯೇಸುವನ್ನು ಭೇಟಿಯಾಗುವ ಮೊದಲು ಮತ್ತು ಯೇಸುವನ್ನು ಭೇಟಿಯಾದ ನಂತರ. ಯೋಹಾನ ನಾಲ್ಕನೆಯ ಅಧ್ಯಾಯದಲ್ಲಿಯೂ ಹಾಗೆಯೇ ಸಮಾರ್ಯದ ಸ್ತ್ರೀ ಗೂ ಸಂಭವಿಸಿತು.

           

ಈ ಎರಡು ಮುಖಗಳು ಏಕೆ? ನಾವು ಹಾದು ಬಂದ ಹಾದಿಗಳನ್ನು ನೋಡುವ ಹಾಗೆ ಒಂದು ಮುಖ, ನಾವು ಎದುರಿಸಬೇಕಾದ ಸವಾಲುಗಳನ್ನು ನೋಡುವ ಇನ್ನೊಂದು ಮುಖ. ಒಂದು ವೇಳೆ ನಾವು ಹಾದು ಬಂದ ದಾರಿಯಲ್ಲಿ ಅನೇಕ ಸೋಲುಗಳನ್ನು ನೋಡಿರಬಹುದು. ಅಥವಾ ನಾವು ಅನೇಕ ಕಹಿ ಅನುಭವಗಳನ್ನು ಮತ್ತು ಅದರಿಂದ ಉಂಟಾದ ಗೊಂದಲದಿಂದಲೂ, ಮನೋವೇದನೆಯಿಂದಲೂ ನಾವು ಹೊಸ ವರ್ಷದೊಳಗೆ ಪ್ರವೇಶಿಸಿರಬಹುದು. ಆದರೆ ಸಂಭವಿಸಿದ ಎಲ್ಲಾ ಪರಿಸ್ಥಿತಿಯಲ್ಲೂ ನಮ್ಮನ್ನು ಪ್ರೀತಿಸುವ ಮತ್ತು ನಮ್ಮನ್ನು ಹೊತ್ತೊಯ್ಯುವ ದೇವರು ಇಮ್ಮಾನುವೇಲನಾಗಿ ನಮ್ಮೊಂದಿಗಿದ್ದಾರೆ ಎಂಬುದನ್ನು ನಾವು ಮರೆಯಲೇ ಬಾರದು.

  

ನಮ್ಮ ಹಳೆಯ ವೈಫಲ್ಯಗಳ ಕಾರಣವನ್ನು ನಾವು ಯೋಚಿಸಬೇಕು ಮತ್ತು ಸರಿಪಡಿಸಬೇಕಾದದ್ದನ್ನು ಸರಿಪಡಿಸಲು ಪ್ರಯತ್ನಿಸಬೇಕು. ಅದಕ್ಕೆ ಪವಿತ್ರಾತ್ಮನ ಸಹಾಯ ಬೇಕು. ಸಮಾರ್ಯ ಸ್ತ್ರೀ ಗೆ ಯೇಸುವನ್ನು ನೋಡುವ ಮೊದಲು ಯಾರನ್ನೂ ನೋಡುವ ಅಥವಾ ಮಾತನಾಡುವ ಬಯಕೆ ಇರಲಿಲ್ಲ. ಹಾಗಾಗಿಯೇ ಸುಡು ಬಿಸಿಲಿನಲ್ಲಿ ಮದ್ಯಾಹ್ನ ನೀರು ತರಲು ಬರುತ್ತಾಳೆ. ನಾನು ಯಾರನ್ನೂ ನೋಡಲು ಬಯಸುವುದಿಲ್ಲ. ಈ ಸಮಾಜವು ನನ್ನನ್ನು ಹೊರಗಿಟ್ಟಿದೆ ಮತ್ತು ನನಗೂ ಸಹ ಈ ಸಮಾಜಕ್ಕೆ ಹೊಂದಿಕೊಂಡು ಇರಬೇಕೆಂಬ ಬಯಕೆ ಇಲ್ಲ. ಏನೋ ಬದುಕಬೇಕು ಅದಕ್ಕೆ ಬದುಕುತ್ತಿದ್ದೇನೆ ಎಂದು ಮನನೊಂದ ಸ್ತ್ರೀಯಾಗಿ ಬದುಕುತ್ತಿದ್ದಳು. ಆದರೆ ಯೇಸುವನ್ನು ಭೇಟಿಯಾದ ಸಮಯದಲ್ಲಿ, ಮೊದಲು ಅವರು ಮಾತನಾಡಲು ಪ್ರಾರಂಭಿಸುತ್ತಾರೆ. ಯೇಸು ಆ ಒಂದು ಮಹಿಳೆಗಾಗಿ ಆ ದಾರಿಯಲ್ಲಿ ಬಂದಿದ್ದನ್ನು ಯೋಹಾನ 4:4 ರಲ್ಲಿ ನಾವು ಗಮನಿಸಬಹುದು. ಮಾನಸಾಂತರ ಹೊಂದುವ ಒಬ್ಬ ಪಾಪಿಯ ನಿಮಿತ್ತವಾಗಿ ಪರಲೋಕದಲ್ಲಿ ಬಹಳ ಸಂತೋಷವುಂಟಾಗುತ್ತದೆ ಎಂಬ ಅವರ ಮಾತುಗಳು ಎಷ್ಟು ನಿಜ.

  

ಆ ಸ್ತ್ರೀಯು ದೇವರೊಂದಿಗೆ ಮಾತನಾಡಿದಳು, ಪ್ರಶ್ನೆಗಳನ್ನು ಕೇಳಿದಳು, ಮತ್ತು ಉತ್ತರಗಳನ್ನು ಪಡೆದಳು. ಯೇಸುವೇ ಮೆಸ್ಸೀಯ ಎಂದು ಅರ್ಥಮಾಡಿಕೊಂಡಳು. ಯಾರೊಂದಿಗೂ ಮಾತನಾಡದ ಆ ಸ್ತ್ರೀ, ಮೊದಲ ಮಿಷನರಿಯಾಗಿ ಪಟ್ಟಣದೊಳಕ್ಕೆ ಹೋಗಿ ಯೇಸುವಿನ ಬಗ್ಗೆ ಪ್ರಕಟಿಸಿದಳು. ಅವರು ಕ್ರಿಸ್ತನೋ ಏನೋ? ಎಂದು ನೋಡಲು ಅವರನ್ನು ಆಹ್ವಾನಿಸಿದಳು. "ಕ್ರಿಸ್ತ" ಎಂಬ ಪದವನ್ನು ಗ್ರೀಕ್ ಭಾಷೆಯಲ್ಲಿ "christos" ಎಂದು ಕರೆಯಲಾಗುತ್ತದೆ. ಇದರರ್ಥ ಮೆಸ್ಸೀಯ, ವಿಮೋಚಕ ಎಂದು. ನಮ್ಮ ರಕ್ಷಕನು ಬಂದು ಬಿಟ್ಟರು ಎಂದು ಸಮಾರ್ಯ ಸ್ತ್ರೀ ಹೇಳಿದ್ದನ್ನು ಅನೇಕರು ಅಂಗೀಕರಿಸಿ ಯೇಸುವನ್ನು ಭೇಟಿಯಾದರು. ಯೇಸುವಿನ ಉಪದೇಶವನ್ನು ಕೇಳಿದ ಪಟ್ಟಣವಾಸಿಗಳು ಅವರನ್ನು ಇನ್ನೂ ಎರಡು ದಿನ ತಮ್ಮಲ್ಲಿ ಉಳಿಯಲು ಕೇಳಿಕೊಂಡರು ಮತ್ತು ಆತನನ್ನು ನಂಬಿದರು, ಅವರು "ನಿಜವಾಗಿಯೂ ಕ್ರಿಸ್ತನು, ಪ್ರಪಂಚದ ರಕ್ಷಕ" ಎಂದು ಅರಿಕೆ ಮಾಡಿ ನಂಬಿದರು.

           

ಪ್ರೀತಿಯ ಸ್ನೇಹಿತರೇ! ನಾವೂ ಸಹ ಈ ಹೊಸ ವರ್ಷದಲ್ಲಿ ಹಳೆಯ ನೋವುಗಳನ್ನು ಮರೆತು ಹೊಸ ಭರವಸೆಯೊಂದಿಗೆ ಯೇಸುವನ್ನು ಇತರರಿಗೆ ಪರಿಚಯಿಸೋಣ ಮತ್ತು ಸಿದ್ಧರಾಗೋಣ. ಇತರರನ್ನು ಸಿದ್ಧಪಡಿಸೋಣ. ಕರ್ತನೇ ನಮ್ಮನ್ನು ಸಂತೈಸಿ, ನಮ್ಮ ಜೀವನದ ಮುರಿದ ಭಾಗಗಳನ್ನು ಸರಿಪಡಿಸಲಿ. ಆಮೆನ್.

- Rev. ಎಲಿಜಬೆತ್

 

ಪ್ರಾರ್ಥನಾ ಅಂಶ:

ಇಂದು ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಸ್ವಸ್ಥತೆಯ ಆರಾಧನೆಯಲ್ಲಿ ದೇವರು ಶಕ್ತಿಯುತವಾಗಿ ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel