Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.01.2025
Share:

By Village Missionary Movement

Wednesday, 01-Jan-2025

ಧೈನಂದಿನ ಧ್ಯಾನ(Kannada) – 01.01.2025

 

ನಂಬಿಕೆ ಬೆಳೆಸಿಕೊಳ್ಳಿ

 

"…ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ" - ಯೋಹಾನ 11:40

  

ಸಹೋದರಿಯರು ತಮ್ಮ ಸತ್ತ ಸಹೋದರನಿಗಾಗಿ ಅಳುತ್ತಿದ್ದಾರೆ. ಅವರು ಅಳುವುದನ್ನು ಕಂಡು ಜೊತೆಗಿದ್ದವರೂ ಅಳುತ್ತಿದ್ದಾರೆ. ಅವರು ಸಹೋದರನನ್ನು ಸಮಾಧಿ ಮಾಡಿದ ಸಮಾಧಿಯ ಬಳಿಗೆ ಬಂದರು. ಅವರು ಅಳುತ್ತಿರುವ ಸಹೋದರಿಯರಿಗೆ ಹೇಳುತ್ತಾರೆ, ನೀವು ಬಯಸುವ ಆಶೀರ್ವಾದವು ಈ ಕಲ್ಲಿನ ಹಿಂದೆ ಇದೆ. ಈ ಸಹೋದರಿಯರು ಹೇಳುತ್ತಾರೆ ನಾಲ್ಕು ದಿನಗಳು ಆಗೋಯ್ತಲ್ಲಾ, ದುರ್ವಾಸನೆ ಬರುತ್ತದಲ್ಲಾ. ಅವರು ಹೇಳುತ್ತಾರೆ, ಕಲ್ಲನ್ನು ತೆಗೆಯಿರಿ. ಕಲ್ಲನ್ನು ತೆಗೆಯಲಾಯಿತು! ಅವರು ಸತ್ತವನ ಹೆಸರನ್ನು ಹೇಳಿ ಕರೆದರು. ಅವರು ಜೀವಂತವಾಗಿ ಬರುತ್ತಾರೆ. ಹೌದು, ಅವರೇ ಲಾಜರ್, ಆ ವ್ಯಕ್ತಿ ಯೇಸು ಕ್ರಿಸ್ತನು, ಸಹೋದರಿಯರು ಮಾರ್ಥಳು ಮತ್ತು ಮರಿಯಳು.

         

ಕರ್ತನಾದ ಯೇಸು ಕ್ರಿಸ್ತನು ನಿಮ್ಮೊಂದಿಗಿದ್ದಾರೆ. ಅವರು ನಿಮ್ಮ ಜೀವನದಲ್ಲಿ ಅದ್ಭುತ ಮಾಡಲು ಸಿದ್ಧರಾಗಿದ್ದಾರೆ. ಅವರು ತಮ್ಮ ಕೈಯ ಶಕ್ತಿಯನ್ನು ತೋರಿಸಲು ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ, ಆತನು ನಮ್ಮ ದುಃಖ, ಸಂಕಟ, ನೋವುಗಳೆಲ್ಲವನ್ನು ಅರಿತಿದ್ದಾರೆ. ಅವುಗಳಿಗೆ ಬೇಕಾದ ಉತ್ತರ ಮತ್ತು ಮಾರ್ಗವು ಆತನ ಬಳಿ ಇದೆ. ಮಾರ್ಥಳು ಮತ್ತು ಮರಿಯಳು ಅತ್ತಾಗ, ಯೇಸು ಅವರೊಂದಿಗೆ ಸೇರಿ ಅತ್ತರು. ಜನರು ಕಣ್ಣೀರಿಟ್ಟು ಹೊರಟು ಹೋಗುತ್ತಾರೆ. ಇಂದಿನ ಕಾಲಘಟ್ಟದಲ್ಲಿ ನಮ್ಮ ಪರಿಸ್ಥಿತಿಯ ಬಗ್ಗೆ ಕನಿಕರ ಪಡುವವರೇ ಹೆಚ್ಚು. ನಾವು ಅಳುವಾಗ ನಮ್ಮೊಂದಿಗೆ ಅಳುವವರು ಕಡಿಮೆ. ಆದರೆ ಯೇಸು ನಿಮ್ಮೊಂದಿಗೆ ಅಳುವವರು ಮಾತ್ರವಲ್ಲ, ನೀವು ಅಳುವ ಪರಿಸ್ಥಿತಿಗಳನ್ನು ಮಾರ್ಪಡಿಸುವವರು. ಆದರೆ ನನ್ನ ಜೀವನದಲ್ಲಿ ಅದ್ಭುತವೇ ನಡೆಯಲಿಲ್ಲವಲ್ಲಾ ಎಂದು ಕೇಳುತ್ತೀರಾ? ಅದಕ್ಕೆ ಕಲ್ಲನ್ನು ತೆಗೆದುಹಾಕಬೇಕು. ಅಪನಂಬಿಕೆ ಎಂಬ ಕಲ್ಲು ಅದ್ಭುತಗಳನ್ನು ಸ್ವೀಕರಿಸಲು ಸಾಧ್ಯವಾಗದ ಹಾಗೆ ತಡೆಗೋಡೆಯಾಗಿದೆ. ಯೇಸು ಹೇಳುತ್ತಾರೆ, "ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು." (ಯೋಹಾನ 11:25) ಎಂದು ಹೇಳುತ್ತಾರೆ. ಹಾಗಾದರೆ ಅದ್ಭುತವನ್ನು ಪಡೆಯಲು ಸಾಧ್ಯ. ಮಾರ್ಥಳು ದುರ್ವಾಸನೆ ಬರುತ್ತದಲ್ಲಾ ಅಂದಾಗ, ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ಯೇಸು ಮಾರ್ಥಳಿಗೆ ಹೇಳಿದರು.

 

ಹೊಸ ವರ್ಷ ಬಂದುಬಿಟ್ಟಿತು. ಈ ವರ್ಷ ಹೇಗಿರುತ್ತದೋ ನನಗೆ ಯಾವ ದಾರಿಯೂ ಇಲ್ಲವಲ್ಲಾ? ನಾನು ನಂಬಿದ್ದದ್ದೆಲ್ಲವೂ ಸತ್ತ ಹಾಗೆ ಆಗಿದೆಯಲ್ಲಾ ನಾನು ಏನು ಮಾಡುವುದು ಎಂದು ಪ್ರಲಾಪಿಸುತ್ತಿದ್ದೀರಾ? ನಿಮ್ಮನ್ನು ನೀವೇ ಪರೀಕ್ಷಿಸಿಕೊಂಡು ನಿಮ್ಮ ನಂಬಿಕೆಯನ್ನು ಹೆಚ್ಚಿಸಿಕೊಂಡು, ನಂಬಿಕೆಯಿಂದ ಆತನನ್ನು ನೋಡಿರಿ. ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ತೊರೆಯುವದಿಲ್ಲ ಎಂದು ಹೇಳಿದವರು ಪ್ರಪಂಚದ ಅಂತ್ಯದವರೆಗೂ ಯಾವಾಗಲೂ ನಿಮ್ಮೊಂದಿಗೇ ಇರುತ್ತಾರೆ. ಅವರು, ಇನ್ನು ಅಷ್ಟೇ ಮುಗಿದುಹೋಯ್ತು ಇನ್ನು ನನ್ನ ಜೀವನ ದುರ್ವಾಸನೆ ಬರುತ್ತದೆ ಎಂದು ನೀವು ಅಂದುಕೊಳ್ಳುವ ಸ್ಥಳದಲ್ಲಿ ಜೀವವನ್ನು ಕೊಟ್ಟು, ಪ್ರಾರಂಭವನ್ನು ಕೊಟ್ಟು ಕರ್ತನನ್ನು ಮಹಿಮೆಪಡಿಸುವಂತೆ ಮಾಡುತ್ತಾರೆ. ಅದಕ್ಕೆ ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಬೇಕು. ಆಶೀರ್ವಾದ ಮತ್ತು ಅದ್ಭುತವನ್ನು ಸ್ವಾಸ್ಥ್ಯವಾಗಿ ಪಡೆಯಲು ನಂಬಿಕೆಯನ್ನು ಬೆಳೆಸಿಕೊಳ್ಳಿ. ನಾನು ಯಾವಾಗಲೂ ಹೇಳುವಂತೆ ಈಗಲೂ ಹೇಳುತ್ತೇನೆ ನಿಮ್ಮ ಬಲಗಡೆಯಲ್ಲಿ ಕರ್ತನು ಇದ್ದಾರೆ. ಸಮಸ್ಯೆ, ಗೊಂದಲ ಮತ್ತು ಹೋರಾಟ ಬಂದಾಗ, ನಂಬಿಕೆಯಿಂದ ನಿಮ್ಮ ಬಲಗಡೆ ನೋಡಿ. ಯೇಸಪ್ಪಾ, ನೀವು ನನ್ನ ಜೊತೆ ಇದ್ದೀರಲ್ಲಾ, ನೀವೇ ಎಲ್ಲವನ್ನೂ ನೋಡಿಕೊಳ್ಳಿ . . . ಎಂದು ಅವರ ಬಳಿ ಸಮರ್ಪಿಸಿರಿ. ಪ್ರತಿದಿನ ಅದ್ಭುತಗಳನ್ನು ಕಾಣುತ್ತೀರ.

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ವರ್ಷದಲ್ಲಿ ನಮ್ಮ ಸೇವಕರಿಗಾಗಿ, ಮತ್ತು ಸೇವಕರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel