Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.12.2024
Share:

By Village Missionary Movement

Tuesday, 31-Dec-2024

ಧೈನಂದಿನ ಧ್ಯಾನ(Kannada) – 31.12.2024

 

ಸ್ತುತಿಸು

 

 "ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ…" - ಕೀರ್ತನೆ 89:52

  

ಹೋಟೆಲ್ ಗೆ ಹೋದ ಒಂದು ತಾತ, ಊಟ ಮುಗಿಸಿ ಟೀ ಹೇಳಿಬಿಟ್ಟು ಬಟ್ಟಲುಗಳನ್ನು ತಟ್ಟೆಯಲ್ಲಿ ಜೋಡಿಸಿಟ್ಟರು. ಅಷ್ಟೊತ್ತಿಗಾಗಲೇ ಸರ್ವರ್ ಬಂದು ತಟ್ಟೆಯಲ್ಲಿದ್ದ ಎಲೆಗಳನ್ನು ಪಕ್ಕಕ್ಕೆ ಇಟ್ಟು ತಟ್ಟೆ, ಲೋಟ, ಬಟ್ಟಲು ಎಲ್ಲವನ್ನೂ ಪ್ರತ್ಯೇಕವಾಗಿ ತೆಗೆದುಕೊಂಡು ಟೇಬಲ್ ಕೂಡ ಕ್ಲೀನ್ ಮಾಡಿದ. ತಾತ ಆ ವ್ಯಕ್ತಿಯನ್ನು ನೋಡಿ ನಗುತ್ತಾ ಧನ್ಯವಾದ ಹೇಳಿದರು. ಕೆಲವು ವಾರಗಳ ನಂತರ ಬಸ್ ನಿಲ್ದಾಣದಲ್ಲಿ ತುಂಬಾ ಜನರ ಗುಂಪು! ಜನರ ಗುಂಪನ್ನು ಸ್ವಲ್ಪ ತಳ್ಳಿ ನೋಡಿದಾಗ, ಆ ತಾತ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಒಬ್ಬರು ಓಡಿ ಹೋಗಿ ನೀರಿನ ಪ್ಯಾಕೆಟ್ ತೆಗೆದುಕೊಂಡು ಬಂದು ಚಿಮುಕಿಸಿ ಹಿರಿಯನನ್ನು ಹೋಟೆಲ್‌ಗೆ ಕರೆದೊಯ್ದು ಅವರನ್ನು ಕೂರಿಸಿ ಊಟಮಾಡುತ್ತೀರಾ? ಎಂದು ಕೇಳಿದರು. ಆ ತಾತ ನೀನು ಯಾರಪ್ಪಾ? ಎಂದು ಕೇಳಿದರು. ಕಳೆದ ವಾರ ಇದೇ ಹೋಟೆಲ್‌ನಲ್ಲಿ ನಿಮ್ಮ ಎಲೆ ಎತ್ತಿದ್ದಕ್ಕಾಗಿ ನನಗೆ ಧನ್ಯವಾದ ಹೇಳಿದಿರಲ್ಲಾ! ಅವನೇ ನಾನು. ನನ್ನ ಕೆಲಸದಲ್ಲಿ ಯಾರೂ ನನಗೆ ಧನ್ಯವಾದ ಹೇಳಿದ್ದಿಲ್ಲ. ಅಷ್ಟೇ ಯಾಕೆ ಯಾರೂ ನನ್ನ ಮುಖವನ್ನು ಸಹ ನೋಡುವುದಿಲ್ಲ. ನಾನು ಅದನ್ನು ನಿರೀಕ್ಷಿಸುವುದೂ ಇಲ್ಲ. ಆದರೆ ನನ್ನ ಜೀವನದುದ್ದಕ್ಕೂ ನೀವು ನಗುಮುಖದಿಂದ ನನಗೆ ಧನ್ಯವಾದ ಹೇಳಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ ಎಂದರು.

  

"ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ." ಎಂದು 1 ಥೆಸ. 5:18 ರಲ್ಲಿ ಓದುತ್ತೇವೆ. ನಾವು ಕೃತಜ್ಞತೆ ಸಲ್ಲಿಸುವುದು ದೇವರ ಚಿತ್ತವಾಗಿದೆ. ಹೌದು, ದೇವರು ಹತ್ತು ಕುಷ್ಠರೋಗಿಗಳನ್ನು ಗುಣಪಡಿಸುತ್ತಾರೆ. ಆದರೆ ಒಬ್ಬನು ಮಾತ್ರ ಬಂದು ದೇವರಿಗೆ ಕೃತಜ್ಞತೆ ಸಲ್ಲಿಸಿದಾಗ ಅವರು ದುಃಖದಿಂದ ಶುದ್ಧವಾದವರು ಹತ್ತು ಮಂದಿಯಲ್ಲವೇ! ಉಳಿದ ಒಂಭತ್ತು ಮಂದಿ ಎಲ್ಲಿ? ಎಂದರು. ಸ್ತುತಿಸುವಾಗ, ನಾವು ದೇವರನ್ನು ಮಹಿಮೆಪಡಿಸುತ್ತೇವೆ. ಈ ವರ್ಷಪೂರ್ತಿ ನಮ್ಮ ಜೀವವನ್ನು ವಿಮೋಚಿಸಿ ಕಾಪಾಡಿದ್ದಾರೆ. ಆದರೆ ನೀವು ಎಷ್ಟು ಪಾಡುಗಳು ಎಂದು ಯೋಚಿಸುತ್ತಿದ್ದೀರ? ಚಿಕ್ಕ ಚಿಕ್ಕ ವಿಷಯಗಳಲ್ಲೇ ಸೋತುಹೋಗಿದ್ದ ನಮಗೆ ಭರವಸೆ ನೀಡಿದರಲ್ಲವೇ ಅದಕ್ಕಾಗಿ ಕೃತಜ್ಞತೆ ಸಲ್ಲಿಸಬಾರದಾ? ದೇವರೇ ನಮ್ಮ ನಂಬಿಕೆಯನ್ನು ಕಾಪಾಡುತ್ತಿದ್ದಾರೆ. ಏಕೆಂದರೆ ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆತನೇ. ( ಇಬ್ರಿ. 12:1 ) ನಾವು ಎಷ್ಟೇ ಬಲಹೀನರಾಗಿದ್ದರೂ, ನಮ್ಮ ಜೀವವನ್ನು ವಿಮೋಚಿಸಿ ಪುನಃ ನಮಗೊಂದು ಅವಕಾಶವನ್ನು ಕೊಟ್ಟಿದ್ದಾರೆ. ಸಾವಿನ ಅಂಚಿನಲ್ಲಿದ್ದೇನೆ ಎಂದು ನೀವು ಹೇಳಿದರೂ, ಇನ್ನೂ ನಮಗೆ ಜೀವವನ್ನು ಕೊಟ್ಟಿದ್ದಾರಲ್ಲಾ ಸ್ತುತಿಸಿ. ಎಲ್ಲವನ್ನು ಕಳೆದುಕೊಂಡ ಮೇಲೂ ಕೃತಜ್ಞತೆ ಸಲ್ಲಿಸಿದ ಯೋಬನು ಎರಡರಷ್ಟು ಆಶೀರ್ವಾದವನ್ನು ಪಡೆದುಕೊಂಡರಲ್ಲವೇ.

 

ಪ್ರಿಯರೇ, ಈ ವರ್ಷದ ಆರಂಭವನ್ನು ನೋಡಿದ ಕೆಲವರು ಅಂತ್ಯವನ್ನು ನೋಡಿಲ್ಲ. ಆದರೆ ದೇವರು ನಮ್ಮನ್ನು ಜೀವಂತವಾಗಿ ಇಟ್ಟಿದ್ದಾರೆ. ಇದಕ್ಕಾಗಿ ನಾವು ಕೃತಜ್ಞತೆ ಸಲ್ಲಿಸಿ ಸ್ತುತಿಸಲು ಬದ್ಧರಾಗಿದ್ದೇವೆ. ಈ ವರ್ಷದ ಕಷ್ಟಗಳು ಮತ್ತು ನೋವುಗಳೇ ನೆನಪಿಗೆ ಬರುತ್ತಿವೆ ಎಂದರೂ, ನಮ್ಮ ಜೀವಕ್ಕಾಗಿ ನಾವು ಆತನಿಂದ ಪಡೆದ ಉಪಕಾರಕ್ಕಾಗಿ ಕೃತಜ್ಞತೆಯೊಂದಿಗೆ ಸ್ತುತಿಸಿ ನೋಡಿ. ಯೆರಿಕೋದಂತಹ ಕಷ್ಟಗಳು ಮತ್ತು ನೋವುಗಳು ಇದ್ದ ಸ್ಥಳವೇ ಕಾಣದ ಹಾಗೆ ಮಾಯವಾಗುತ್ತದೆ. ಹೊಸ ವರ್ಷದಲ್ಲಿ ಹೊಸ ಉಪಕಾರದೊಂದಿಗೆ ಪ್ರವೇಶಿಸೋಣ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಹೊಸ ವರ್ಷದ ನಿರ್ಣಯಗಳು ಮತ್ತು ಗುರಿಗಳನ್ನು ಯೋಜಿಸುವಲ್ಲಿ ನಮ್ಮ ಸೇವೆಯ ನಾಯಕರೊಂದಿಗೆ ದೇವರು ಜೊತೆ ಇದ್ದು ನಡೆಸಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin