Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.12.2024
Share:

By Village Missionary Movement

Saturday, 28-Dec-2024

ಧೈನಂದಿನ ಧ್ಯಾನ(Kannada) – 28.12.2024

 

ಕೃತಜ್ಞತೆ

 

"…ಕೃತಜ್ಞತೆಯುಳ್ಳವರಾಗಿರ್ರಿ" - ಕೊಲೊಸ್ಸೆ 3:15

  

ದೇವರು ನಮಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ಮೊದಲನೆಯದಾಗಿ, ನಾವು ಉಸಿರಾಡಲು ಆಮ್ಲಜನಕ ಭರಿತ ಗಾಳಿ, ಕುಡಿಯಲು ಉತ್ತಮ ನೀರು ಮತ್ತು ತಿನ್ನಲು ಉತ್ತಮ ಹಣ್ಣುಗಳು, ತರಕಾರಿಗಳು ಹೀಗೆ ಹೇಳಿಕೊಂಡೇ ಹೋಗಬಹುದು. ಇವುಗಳಲ್ಲಿ ಕೆಲವನ್ನು ನಾವು ಉಚಿತವಾಗಿ ಪಡೆಯುತ್ತೇವೆ ಮತ್ತು ಕೆಲವನ್ನು ಶ್ರಮದ ಪರಿಣಾಮವಾಗಿ ಪಡೆಯುತ್ತೇವೆ. ಇಷ್ಟೆಲ್ಲಾ ಕೊಟ್ಟ ದೇವರನ್ನು ನಾವು ಕೃತಜ್ಞತೆಯೊಂದಿಗೆ ಯೋಚಿಸುತ್ತೇವೆಯೇ? ಕೃತಜ್ಞತೆ ಮರೆಯದೆ ಆತನ ಕೆಲಸವನ್ನು ಮಾಡುತ್ತೇವೆಯೇ? ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ.  

  

ಸತ್ಯವೇದದಲ್ಲಿಯೂ ಕೃತಜ್ಞತೆ ಸಲ್ಲಿಸಲು ಮರೆತಿರುವ ಅನೇಕರನ್ನು ಕಾಣುತ್ತೇವೆ. ಯೆಹೂದದ ರಾಜ ಅಹಜ್ಯನ ಮರಣದ ನಂತರ, ಅವನ ತಾಯಿ ಅತಲ್ಯಳು ಯೆಹೂದ್ಯ ಕುಟುಂಬದ ಎಲ್ಲಾ ರಾಜಮನೆತನದವರನ್ನು ಕೊಂದು ಹಾಕಿದಾಗ, ರಾಜಕುಮಾರಿಯಾದ ಯೋಸೇಫಿಯಾ ಮತ್ತು ಅಹಜ್ಯನ ಮಗನಾದ ಯೋವಾಷನನ್ನು ಕರೆದೊಯ್ದು ಆರು ವರ್ಷಗಳ ಕಾಲ ಬಚ್ಚಿಟ್ಟು ಅವನನ್ನು ಕಾಪಾಡಿದರು. ಏಳನೆಯ ವರ್ಷದಲ್ಲಿ ಯೆಹೋಯಾದನು ಜನರನ್ನು ಒಟ್ಟುಗೂಡಿಸಿ ತನ್ನ ಏಳನೆಯ ವರ್ಷದಲ್ಲಿ ಯೋವಾಷನನ್ನು ದೇವಾಲಯದಲ್ಲಿ ಇರಿಸಿ ಅವನನ್ನು ಅರಸನನ್ನಾಗಿ ಮಾಡಿದನು. ಆಗ ಜನರು ಮತ್ತು ಲೇವಿಯರು ಯೋವಾಷನನ್ನು ರಕ್ಷಿಸಿದರು ಮತ್ತು ಅತಲ್ಯಳನ್ನು ಕೊಂದರು, ರಾಜ್ಯವು ಯೋವಾಷನಿಗೆ ಬಂದಿತು. ಯೋವಾಷನು ತನ್ನ ಜೀವನದ ಎಲ್ಲಾ ದಿನಗಳಲ್ಲಿ ದೇವರ ಆಜ್ಞೆಗಳಿಗೆ ವಿಧೇಯನಾಗಿ ಆಶೀರ್ವದಿಸಲ್ಪಟ್ಟನು. ಯಾಜಕನಾದ ಯೆಹೋಯಾದನ ಮರಣದ ನಂತರ, ಅವನು ಇತರ ಪ್ರಭುಗಳ ಮಾತನ್ನು ಕೇಳಿ ಕರ್ತನನ್ನು ಬಿಟ್ಟು ಹಿಂಜಾರಿ ಹೋದನು. ದೇವರ ಸೇವೆ ಮಾಡುವ ಬದಲು ಅನ್ಯ ದೇವರುಗಳ ಸೇವೆ ಮಾಡಿದನು. ರಾಜ ಯೋವಾಷನು ತನ್ನ ಬಾಲ್ಯದಿಂದಲೂ ತನ್ನನ್ನು ಬೆಳೆಸಿ, ರಾಜನನ್ನಾಗಿ ಮಾಡಿ ಅವನ ಮರಣದವರೆಗೂ ಅವನಿಗೆ ಮಾರ್ಗದರ್ಶನ ನೀಡಿ, ಸಲಹೆಗಾರನಾಗಿದ್ದು ಕಾಪಾಡಿದ

 

ಯೆಹೋಯಾದಾನನ್ನು ಮರೆತು, ಅವನು ಮಾಡಿದ ಸಹಾಯವನ್ನು, ಕಾರ್ಯಗಳನ್ನು ಎಲ್ಲವನ್ನೂ ಮರೆತು, ಅವನ ಮಗನಾದ ಜೆಕರ್ಯನನ್ನು ಅದೂ ಸಹ ದೇವಾಲಯದಲ್ಲಿ ಕೊಂದನು. ಕೃತಜ್ಞತೆಯನ್ನು ಮರೆತ ದ್ರೋಹಿಯಾದನು. ಕರ್ತನು ಇದನ್ನು ನೋಡಿದರು. ಯೆಹೂದದ ಸೈನ್ಯಗಳು ಬಹಳ ದೊಡ್ಡ ಸೈನ್ಯವಾಗಿದ್ದರೂ, ಯೆಹೋವನು ಯೋವಾಷನನ್ನು ಅವರ ಕೈಗೆ ಒಪ್ಪಿಸಿ ಕೊಟ್ಟರು. ಅವರು ಯೋವಾಷನನ್ನು ಬಹಳ ಸಂಕಟಕ್ಕೆ ಗುರಿಮಾಡಿ ಬಿಟ್ಟು ಹೋದರು. ಅವನ ಸಂಗಡ ಇದ್ದವರೇ ಯೋವಾಷನನ್ನು ಕೊಂದರು.

 

ಯೇಸು ಕ್ರಿಸ್ತನು ಸಹ ನಮ್ಮ ಪಾಪಗಳಿಗಾಗಿ ತನ್ನ ಸ್ವಂತ ರಕ್ತವನ್ನು ಸುರಿಸಿ ನಮ್ಮನ್ನು ವಿಮೋಚಿಸಿದ್ದಾರೆ. ಯೇಸುವಿನ ಪಾಡುಗಳು ಶಿಲುಬೆಯ ಮರಣ ಯಾರಿಗಾಗಿ? ನಮ್ಮ ಪ್ರತಿಯೊಬ್ಬರಿಗಾಗಿಯೂ. ಪಾಪದ ಶಾಪದಿಂದ ಪ್ರತಿಯೊಬ್ಬರನ್ನು ವಿಮೋಚನೆಗೊಳಿಸಲು ಅವರು ತನ್ನ ರಕ್ತವನ್ನು ಸುರಿಸಿದರು. ನಾವು ಈ ಅನುಪಮ ಪ್ರೀತಿಯನ್ನು ಅಂಗೀಕರಿಸಿದ್ದೇವೆಯೇ? ಅಥವಾ ಅಸಡ್ಡೆ ಮಾಡಿ ಕೃತಜ್ಞತೆ ಇಲ್ಲದೆ ಅವರ ಜೀವನ ತ್ಯಾಗವನ್ನು ತಿರಸ್ಕರಿಸುತ್ತಿದ್ದೇವೆಯೇ? ಪ್ರೀತಿಯ ಸಹೋದರ ಸಹೋದರಿಯರೇ, ದೇವರು ಮಾಡಿದ ಒಳ್ಳೆಯ ಕಾರ್ಯಗಳಿಗಾಗಿ ನಾವು ಮೊದಲು ಕೃತಜ್ಞತೆ ಹೇಳೋಣ. ಅವರು ಅನುಗ್ರಹಿಸಿರುವ ರಕ್ಷಣೆಯನ್ನು ಮತ್ತು ವಿಮೋಚನೆಯನ್ನು ಅಸಡ್ಡೆ ಮಾಡದೇ ಅಂಗೀಕರಿಸೋಣ, ಅವರ ಆಶೀರ್ವಾದವನ್ನು ಸಹ ಪಡೆದುಕೊಳ್ಳೋಣ. ನಿತ್ಯಜೀವದೊಳಗೆ ಪ್ರವೇಶಿಸಲು ದೇವರು ಕೃಪೆಯನ್ನು ಅನುಗ್ರಹಿಸಲಿ! ಆಮೆನ್.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಈ ವರ್ಷದ ಸೇವೆಯ ಯೋಜನೆಗಳಲ್ಲಿ ದೇವರ ಹಸ್ತವು ನಮ್ಮೊಂದಿಗಿದ್ದು ನಡೆಸುತ್ತಾ ಬಂದದ್ದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al