By Village Missionary Movement
Friday, 27-Dec-2024ಧೈನಂದಿನ ಧ್ಯಾನ(Kannada) – 27.12.2024
ಕೃತಜ್ಞತೆಯುಳ್ಳ . . .
"…ಕೃತಜ್ಞತೆಯುಳ್ಳವರಾಗಿರ್ರಿ" - ಕೊಲೊಸ್ಸೆ 3:15
ವಿಯೆಟ್ನಾಂನಲ್ಲಿ ನಡೆದ ಯುದ್ಧದಲ್ಲಿ, ಸೈನ್ಯದ ಕಮಾಂಡರ್ ತನ್ನ ಅಡಿಯಲ್ಲಿ ಕೆಲಸ ಮಾಡಿದ ಸಾಮಾನ್ಯ ಸೈನಿಕನನ್ನು ಉಳಿಸಲು ಪ್ರಯತ್ನಿಸುವಾಗ, ಅವನನ್ನು ಕಾಪಾಡಿ ಬಿಟ್ಟು, ಅದರಿಂದ ಅವರು ಹಾನಿಗೊಳಗಾಗಿ ಸ್ಥಳದಲ್ಲೇ ಸತ್ತುಹೋದರು. ಈ ಬಗ್ಗೆ ಆತನ ಪೋಷಕರಿಗೆ ಮಾಹಿತಿ ನೀಡಲಾಯಿತು. ಅವರು ಅವರ ಜ್ಞಾಪಕಾರ್ಥ ಕೂಟವನ್ನು ಏರ್ಪಡಿಸಿದ್ದರು. ಆಗ ತನ್ನ ಮಗನಿಂದ ರಕ್ಷಿಸಲ್ಪಟ್ಟ ಯೋಧನನ್ನೂ ಕೂಟಕ್ಕೆ ಆಹ್ವಾನಿಸಲಾಯಿತು. ಅವನು ತಡವಾಗಿ ಬಂದಿದ್ದನಲ್ಲದೆ, ಚೆನ್ನಾಗಿ ಕುಡಿದು ಬಂದಿದ್ದ. ಅಲ್ಲಿದ್ದ ಊಟವನ್ನು ಅಸಭ್ಯವಾಗಿ ತಿಂದಿದ್ದು ಮಾತ್ರವಲ್ಲದೆ, ತನ್ನನ್ನು ಕಾಪಾಡಿದ ಆ ನಾಯಕನ ತ್ಯಾಗದಿಂದ ನಾನು ಉಳಿದಿದ್ದೇನೆ ಎಂಬ ಕೃತಜ್ಞತೆಯನ್ನೂ ಸಹ ವ್ಯಕ್ತಪಡಿಸಲಿಲ್ಲ. ಅಷ್ಟೇ ಅಲ್ಲ, ಊಟ ಮುಗಿಸಿ ತನ್ನನ್ನು ಕರೆದ ಮನೆಯವರಿಗೆ ಒಂದು ಕೃತಜ್ಞತೆಯನ್ನೂ ಹೇಳದೆ, ಮಾತಾಡದೆ ಹೊರಟು ಹೋದನು. ಅವನು ಹೋದ ಕೂಡಲೇ, ಆ ಕಮಾಂಡರ್ ನ ತಾಯಿ ಗೋಳಾಡಿ ಈ ಕೃತಜ್ಞತೆ ಇಲ್ಲದ ಮನುಷ್ಯನಿಗಾ ನನ್ನ ಮಗ ತನ್ನ ಪ್ರಾಣವನ್ನು ಕೊಟ್ಟಿದ್ದಾನೆ ಎಂದು ಕಣ್ಣೀರು ಹಾಕಿದರು.
ಯೇಸು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ ಹತ್ತು ಕುಷ್ಠರೋಗಿಗಳು ಯೇಸುವಿನ ಮುಂದೆ ಬಂದು, ದೂರದಲ್ಲಿ ನಿಂತು ಯೇಸುವೇ, ನಮ್ಮನ್ನು ಕರುಣಿಸು ಎಂದು ಕೂಗಿದರು. ಅದೇ ರೀತಿಯಾಗಿ ಹತ್ತು ಜನರೂ ವಾಸಿಯಾದರು. ಅವರಲ್ಲಿ ಒಬ್ಬನೇ ಒಬ್ಬನು ಮಾತ್ರ ಬಂದು ಆತನ ಪಾದದ ಮುಂದೆ ಸಾಷ್ಟಾಂಗವಾಗಿ ಬಿದ್ದು, ಆತನಿಗೆ ಕೃತಜ್ಞತೆಯನ್ನು ಸಲ್ಲಿಸಿದನು. ಆಗ ಯೇಸು ಹತ್ತು ಮಂದಿ ಶುದ್ಧರಾದರಲ್ಲಾ, ಉಳಿದ ಒಂಭತ್ತು ಮಂದಿ ಎಲ್ಲಿ? ಎಂದು ಕೇಳಿದರು.
ಹೌದು, ನನಗೆ ಪ್ರಿಯವಾದವರೇ! ಕರ್ತನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಅವರು ನಮ್ಮಿಂದ ಕೃತಜ್ಞತೆಯನ್ನು ಹೊರತುಪಡಿಸಿ ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ನಾವು ಮನುಷ್ಯರು ಮಾಡುವ ಉಪಕಾರಕ್ಕೆಲ್ಲಾ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಆದರೆ ದೇವರಿಗೆ ಕೃತಜ್ಞತೆಯನ್ನು ಹೇಳಲು ಮರೆತುಹೋಗುತ್ತೇವೆ. ಸ್ವಲ್ಪ ಯೋಚಿಸಿ ನೋಡೋಣವಾ? ಎಷ್ಟೊಂದು ಕಣ್ಣೀರಿನ ಕಣಿವೆಗಳು, ಜಾರು ದಾರಿಗಳು, ಮರೆತುಹೋದ ಸನ್ನಿವೇಶಗಳು, ಒಂಟಿತನದ ಹಾದಿಗಳು, ಅನಾರೋಗ್ಯದ ಸಮಯಗಳು, ಎಲ್ಲವೂ ಮುಗಿಯಿತು ಇನ್ನು ಅಷ್ಟೇ ಎಂದು ಭಾವಿಸಿದ ಸಮಯಗಳಲೆಲ್ಲಾ, ನಮ್ಮೊಂದಿಗೆ ಇದ್ದು ಮತ್ತು ನಮ್ಮೊಂದಿಗೆ ಇರುವ ಯೇಸುವಿಗೆ ಕೃತಜ್ಞತೆಯನ್ನು ಹೇಳುವುದನ್ನು ಒಂದು ಕ್ಷಣವೂ ನಾವು ಮರೆಯಬಾರದು. ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ನಮ್ಮನ್ನು ಈ ಕ್ಷಣದವರೆಗೂ ಬದುಕಿಸಿದ್ದಾರಲ್ಲಾ ಅದಕ್ಕೆ ಅವರಿಗೆ ನಾವು ಎಷ್ಟೋ ಹೆಚ್ಚಾಗಿ ಕೃತಜ್ಞತೆ ಹೇಳಬೇಕಾಗಿದೆ ಅಲ್ವಾ?
- Mr. ಶಂಕರ್ ರಾಜ್
ಪ್ರಾರ್ಥನಾ ಅಂಶ:
ಪ್ರತಿ ಜಿಲ್ಲೆಯಲ್ಲೂ ಟ್ಯೂಷನ್ ಸೆಂಟರ್ ಆರಂಭಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482