Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.12.2024
Share:

By Village Missionary Movement

Thursday, 26-Dec-2024

ಧೈನಂದಿನ ಧ್ಯಾನ(Kannada) – 26.12.2024

 

ಕೃತಜ್ಞತೆ ಸಲ್ಲಿಸುವ ಸಮಯವಿದು

 

"ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ, ... ಆತನಿಗೆ ಉಪಕಾರಸ್ತುತಿಮಾಡಿದನು…" - ಲೂಕ 17:15,16

 

ಈ ಸತ್ಯವೇದ ಭಾಗದಲ್ಲಿ ಸಮಾಜದಿಂದ ತಿರಸ್ಕರಿಸಲ್ಪಟ್ಟ ಹತ್ತು ಕುಷ್ಠರೋಗಿಗಳು ಯೇಸುವನ್ನು ಶಬ್ದವಾಗಿ ಕರೆಯುತ್ತಿದ್ದಾರೆ. ( ಮತ್ತಾ. 8:2-4 ) ರಲ್ಲಿ ಒಬ್ಬ ಕುಷ್ಠರೋಗಿಯನ್ನು ತನ್ನ ಕೈಯಿಂದ ಮುಟ್ಟಿ ವಾಸಿಮಾಡಿದರು. ಆದರೆ ಇಲ್ಲಿ ತನ್ನ ಮಾತಿನ ಮೂಲಕ ಅವರನ್ನು ವಾಸಿಮಾಡಿ, ನೀವು ಹೋಗಿ ಯಾಜಕನಿಗೆ ನಿಮ್ಮನ್ನು ತೋರಿಸಿ ಎಂದರು. ನಂಬಿಕೆಯಿಂದ ದೇವರ ವಾಕ್ಯವನ್ನು ನಂಬಿ ಹೋದವರು ವಾಸಿಯಾದರು. ಅವರಲ್ಲಿ ಒಬ್ಬನು ಮಾತ್ರ ತಾನು ಗುಣಮುಖನಾದುದನ್ನು ಕಂಡು ಅವರಿಗೆ ಮನಸಾರೆ ಸಾಷ್ಟಾಂಗ ನಮಸ್ಕಾರ ಮಾಡಿ ಧನ್ಯವಾದ ಹೇಳಿದನು. ಅವನು ದೇವರ ಪ್ರಶಂಸೆಯನ್ನು ಪಡೆದು ನಂಬಿಕೆಯೊಂದಿಗೆ, ರಕ್ಷಣೆಯನ್ನು ಸಹ ಪಡೆದುಕೊಂಡು ಹೋದನು. ಇಂದು ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಆದರೆ ಇಂದಿನ ಸಮಾಜದಲ್ಲಿ ಕೊಲೆ, ದರೋಡೆ, ಅತ್ಯಾಚಾರ, ವ್ಯಭಿಚಾರ, ಅಪಘಾತಗಳು, ಕುಡಿತ, ಮಾದಕ ವ್ಯಸನ, ರೋಗರುಜಿನಗಳು, ಆರ್ಥಿಕ ಬಿಕ್ಕಟ್ಟು, ವಂಚನೆಗಳಂತಹ ಹಲವಾರು ಸಮಸ್ಯೆಗಳು ಜನರನ್ನು ಕಂಗಾಲಾಗಿಸಿದೆ. ಆದರೆ ದೇವರ ಮಕ್ಕಳಾದ ನಮ್ಮನ್ನು ಪ್ರತಿದಿನವೂ ಕಣ್ಮಣಿಯಂತೆ ಕಾಪಾಡಿ, ನಾವು ನಿರ್ಮೂಲವಾಗದಂತೆ ಕಾಪಾಡುವ ದೇವರ ಕೃಪೆ ಎಷ್ಟು ದೊಡ್ಡದು. (ಪ್ರಲಾಪಗಳು 3:23).

        

2024 ರ ಕೊನೆಯ ತಿಂಗಳನ್ನು ನೋಡುವಂತೆ ಮಾಡಿದ್ದಕ್ಕಾಗಿ ನಾವು ದೇವಾದಿ ದೇವರಿಗೆ ಧನ್ಯವಾದ ಹೇಳಲು ಬದ್ಧರಾಗಿದ್ದೇವೆ. "ನಮ್ಮನ್ನು ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯ ಶಕ್ತಿಯು ನಮಗೆ ಕೊಟ್ಟದ್ದರಲ್ಲಿ ಜೀವಕ್ಕೂ ಭಕ್ತಿಗೂ ಬೇಕಾದದ್ದೆಲ್ಲವು ದೊರೆಯಿತೆಂದು" (2 ಪೇತ್ರ 1:3). ಕಳೆದ ತಿಂಗಳುಗಳಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಹಣ, ಆಹಾರ, ಬಟ್ಟೆ, ವಸತಿ ಮತ್ತು ಎಲ್ಲಾ ಭದ್ರತೆಯನ್ನು ನೀಡಿದ ದೇವರಿಗೆ ಕೃತಜ್ಞತೆ ಸಲ್ಲಿಸೋಣ.

 

ದೇವರ ನಮಗೆ ಕೊಡುವ ಆಶೀರ್ವಾದಗಳು ಹೇರಳ. ಎಲ್ಲಾ ಸಮಯದಲ್ಲೂ ನಾವು ನಿರೀಕ್ಷಿಸಿದಂತೆ ಅಲ್ಲದಿದ್ದರೂ, ಎಲ್ಲಾ ಪರಿಸ್ಥಿತಿಯಲ್ಲಿ ನಮ್ಮನ್ನು ಹೊರುತ್ತಾ, ಸಹಿಸುತ್ತಾ, ನಿರ್ವಹಿಸುತ್ತಾ ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಆದ್ದರಿಂದ ಯಾವಾಗಲೂ ಎಲ್ಲಾದಕ್ಕಾಗಿಯೂ ಕೃತಜ್ಞತೆಯ ಹೃದಯದೊಂದಿಗೆ ಬದುಕೋಣ. ಇಲ್ಲಿವರೆಗೂ ನಡೆಸಿದ ಇಮ್ಮಾನುವೇಲನು, ಇನ್ನು ಮುಂದೆ ನಡೆಸುವ ಎಬಿನೇಜರ್ ಆಗಿ ನಮ್ಮೊಂದಿಗೆ ಇರುತ್ತಾರೆ. ನನಗೆ ಪ್ರಿಯವಾದವರೇ! ದೇವರು ಕೊಡುವ ನಿಜವಾದ ಸಂತೋಷ, ಸಮಾಧಾನದೊಂದಿಗೆ ಹೊಸ ವರ್ಷದಲ್ಲಿ ಪ್ರವೇಶಿಸಲು ದೇವರು ನಮಗೆ ಕೃಪೆ ನೀಡಲಿ! ಆಮೆನ್.

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ನಮ್ಮ ದರ್ಶನದಲ್ಲಿ ನಮ್ಮೊಂದಿಗೆ ಸೇರಿ ಸೇವೆ ಮಾಡುತ್ತಿರುವ ಸಹ ಸೇವಕರು ಮತ್ತು ದೆಬೋರಾಳ್ ಸೇವಕರುಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al