Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.12.2024
Share:

By Village Missionary Movement

Wednesday, 25-Dec-2024

ಧೈನಂದಿನ ಧ್ಯಾನ(Kannada) – 25.12.2024

 

ಅಲ್ಪವಾದ ಆರಂಭಗಳು

 

"(ಕುರುಬರು) ಅವಸರದಿಂದ ಬಂದು ಮರಿಯಳನ್ನೂ ಯೋಸೇಫನನ್ನೂ ಗೋದಲಿಯಲ್ಲಿ ಮಲಗಿರುವ ಆ ಕೂಸನ್ನೂ ಕಂಡುಕೊಂಡರು." - ಲೂಕ 2:16

 

6 ವರ್ಷದ ಬಾಲಕಿ ತನ್ನ ತಂದೆಯೊಂದಿಗೆ ಪ್ರತಿನಿತ್ಯ ತಮ್ಮ ಹಸುಗಳ ಫಾರಂಗೆ ಹೋಗಿ ಹಸುಗಳಿಗೆ ಹಾಲು ಕರೆಯುವುದನ್ನು ನೋಡುವುದು, ಅವುಗಳಿಗೆ ಹುಲ್ಲು ತಿನ್ನಿಸುವುದು ಅಭ್ಯಾಸವಾಗಿತ್ತು. ಒಂದು ದಿನ ಅವಳ ತಂದೆ, "ಇವತ್ತು ನಾವು ಹೊಲದ ದಕ್ಷಿಣ ಭಾಗದಲ್ಲಿ ಕಟ್ಟಿದ ದನಗಳನ್ನು ನೋಡಿಬಿಟ್ಟು, ಗೋದಲಿಯಲ್ಲಿರುವ ಹಸುಗಳಿಗೆ ಹುಲ್ಲು ಹಾಕಬೇಕು" ಎಂದು ಹೇಳಿದರು. "ಗೋದಲಿ" ಎಂಬ ಪದವನ್ನು ಕೇಳಿದ ಕೂಡಲೇ ಚಿಕ್ಕ ಹುಡುಗಿಗೆ ತುಂಬಾ ಉತ್ಸಾಹ. ಮಗುವಾಗಿ ಹುಟ್ಟಿದ ಯೇಸುವನ್ನು ಗೋದಲಿಯಲ್ಲಿ ಮಲಗಿಸಿದ್ದರು ಎಂದು ತಾಯಿ ನನಗೆ ಹೇಳಿದ್ದಾರಲ್ಲಾ. ನಮ್ಮ ದನದ ಫಾರಂನಲ್ಲಿಯೂ ಒಂದು ಗೋದಲಿ ಇದೆಯಾ ಎಂದು ಆಶ್ಚರ್ಯಪಟ್ಟು, ತಕ್ಷಣ ತನ್ನ ತಂದೆಯನ್ನು ಅಲ್ಲಿಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದಳು. ಕುತೂಹಲದಿಂದ ಅಲ್ಲಿಗೆ ಹೋದಾಗ ಆ ಆವರಣ ಮಾಮೂಲಿ ರಟ್ಟಿನಿಂದ ಮಾಡಿರುವುದು ಕಂಡು ಬೆಚ್ಚಿಬಿದ್ದು ಆಶ್ಚರ್ಯಚಕಿತಳಾದಳು. ಇಷ್ಟು ಸರಳವಾದ ಜಾಗದಲ್ಲಿ ಯೇಸು ಹುಟ್ಟಿರುತ್ತಾರಾ ಎಂದು ಸಂದೇಹದಿಂದ ತಂದೆಯನ್ನು ಕೇಳಿ, ಸ್ಪಷ್ಟತೆ ಪಡೆದಳು.

  

ಗೋದಲಿಯು ನಮಗೆ ಹೇಳುವುದೇನು? ಯೇಸುಕ್ರಿಸ್ತನ ಪ್ರಾರಂಭವೂ ಕೂಡ ಅಲ್ಪವಾದ ಸ್ಥಳದಿಂದಲೇ ಪ್ರಾರಂಭವಾಯಿತು. ಆದ್ದರಿಂದ ಇತರರಿಗೆ ಉಪಯುಕ್ತವಾದ, ಆಶೀರ್ವಾದಕರವಾದ ಜೀವನವನ್ನು ಜೀವಿಸಲು ಮತ್ತು ದೇವರ ಬಗ್ಗೆ ಪ್ರಕಟಿಸಲು ಪ್ರಾರಂಭವು ಮುಖ್ಯವಲ್ಲ ಎಂದು ತಿಳಿಸುತ್ತಿದೆ. ಯೇಸುಕ್ರಿಸ್ತನು ಒಬ್ಬ ಬಡಗಿಯ ಮಗ, ದನದ ಗೋದಲಿಯಲ್ಲಿ ಜನಿಸಿದವರು, ಗೋದಲಿಯಲ್ಲಿ ಮಲಗಿಸಲ್ಪಟ್ಟವರು ಮತ್ತು ಸಾಮಾನ್ಯ ಅಪರಾಧಿಯಾಗಿ ಕೊಲ್ಲಲ್ಪಟ್ಟವರು. ಆದರೆ ಇವರೇ ಇಡೀ ಮಾನವ ಕುಲಕ್ಕೆ ರಕ್ಷಕನಾದರು ಎಂಬುದು ಊಹಿಸಲಾಗದ ಸತ್ಯವಲ್ಲವಾ?

 

ದಣಿದಿರುವ ದೇವರ ಮಕ್ಕಳೇ! ಉತ್ಸಾಹಪಡಿರಿ. ಸಾಮಾನ್ಯರೂ ಮತ್ತು ಅತ್ಯಲ್ಪರೂ ಆಗಿರುವ ನಾವು ಸಹ ದೇವರ ಸೇವೆ ಮಾಡಲು ಮತ್ತು ದೇವರ ವಾಕ್ಯವನ್ನು ಪ್ರಕಟಿಸಲು ಅರ್ಹರು ಎಂದು ಗೋದಲಿಯು, ಹೇಳದೆಯೇ ಹೇಳುತ್ತಿದೆಯಲ್ಲವೇ? ಒಂದು ಸತ್ಯ ಗೊತ್ತಾ? ನಮ್ಮಂತಹ ಸಾಮಾನ್ಯ ಜನರ ಮೂಲಕ ಈ ಜಗತ್ತಿಗೆ ದೇವರ ಸಂದೇಶವನ್ನು ತರಲಾಗುತ್ತಿದೆ. ಆದ್ದರಿಂದ ನಿಮ್ಮ ಆರಂಭವು ಅಲ್ಪವಾಗಿದ್ದರೂ, ದೇವರು ಅಂತ್ಯವನ್ನು ಆಶೀರ್ವದಿಸುತ್ತಾರೆ. ಯೇಸುಕ್ರಿಸ್ತನ ಆರಂಭವು ಅಲ್ಪವಾದದ್ದೇ, ಆದರೆ ಅವರ ಅಂತ್ಯವು ಅದ್ಭುತವಾಗಿತ್ತು. ಗೋದಲಿಯು ಕಲಿಸಿಕೊಟ್ಟ ಸಿಹಿ ಸತ್ಯವು ನಮ್ಮನ್ನು ಕ್ರೈಸ್ತ ಜೀವನದಲ್ಲಿ ಉತ್ಸಾಹದಿಂದ ಓಡುವಂತೆ ಮಾಡಲಿ. HAPPY CHRISTMAS ಹ್ಯಾಪಿ ಕ್ರಿಸ್ಮಸ್

- M. ಶಾರೋನ್ ಕುಯೆಟ್ಜರ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಟ್ಯೂಷನ್ ಸೆಂಟರ್‌ಗೆ ಬರುವ ಮಕ್ಕಳ ಪೋಷಕರ ರಕ್ಷಣೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al