Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.12.2024
Share:

By Village Missionary Movement

Tuesday, 24-Dec-2024

ಧೈನಂದಿನ ಧ್ಯಾನ(Kannada) – 24.12.2024

 

ಸಂತೈಸುವ ದೇವರು

 

"ಆದರೆ ನೋಹನಿಗೆ ಯೆಹೋವನ ದಯವು ದೊರಕಿತು" - ಆದಿಕಾಂಡ 6:8

 

ಕರ್ತನಾದ ದೇವರು ಲೋಕವನ್ನು ಸೃಷ್ಟಿಸಿ ಒಂದು ಸುಂದರವಾದ ಕುಟುಂಬವನ್ನು ಸೃಷ್ಟಿಸಿದರು. ಆದರೆ ದೇವರು ಒಳ್ಳೆಯದೆಂದು ಕಂಡದ್ದೆಲ್ಲವೂ ಅಕ್ರಮವಾಗಿ ಮಾರ್ಪಟ್ಟಿತು. ಭೂಮಿಯ ಮೇಲೆ ಮನುಷ್ಯನನ್ನು ಸೃಷ್ಟಿಸಿದ್ದಕ್ಕಾಗಿ ದೇವರು ಪಶ್ಚಾತ್ತಾಪಪಟ್ಟರು. ಇದು ಅವರ ಹೃದಯವನ್ನು ದುಃಖಿಸಿತು (ಆದಿಕಾಂಡ 6:6) ಮತ್ತು ಅವರ ಹೃದಯವನ್ನು ಸಾಂತ್ವನ ಮಾಡಲು ಯಾರೂ ಇರಲಿಲ್ಲ. ಆದರೆ ಅವರ ಕಣ್ಣುಗಳು ಒಬ್ಬನೇ ಒಬ್ಬ ಮನುಷ್ಯನನ್ನು ಮಾತ್ರ ನೋಡಿದವು. ಅವನ ಹೆಸರು ನೋಹ. ನೋಹ ಎಂದರೆ ಇವನು ನಮ್ಮನ್ನು ಸಂತೈಸುತ್ತಾನೆ (ಆದಿಕಾಂಡ 5:29) ಎಂದು ಅರ್ಥ. ಕರ್ತನ ಕಣ್ಣುಗಳು ಭೂಮಿಯನ್ನೆಲ್ಲಾ ಹುಡುಕಿದಾಗ, ಇವನು ಮಾತ್ರ ಅರ್ಹನಾಗಿ, ಅವರ ಹೃದಯವನ್ನು ಸಂತೈಸುವವನಾಗಿ ಕಂಡನು. ನೋಹನಿಗೋ ದೇವರ ಕಣ್ಣುಗಳಲ್ಲಿ ದಯೆ ದೊರಕಿತು. ಭೂಮಿಯಾದ್ಯಂತ ವಿನಾಶವು ಉಂಟಾದಾಗ, ನಾವೆಯಲ್ಲಿ ಇಟ್ಟು ಕುಟುಂಬವಾಗಿ ಕಾಪಾಡಲ್ಪಟ್ಟರು. ಪಶ್ಚಾತ್ತಾಪಪಟ್ಟ ದೇವರ ಹೃದಯವನ್ನು ಸಂತೈಸಿದ ನೋಹನಲ್ಲಿನ ಕೆಲವು ಗುಣಗಳನ್ನು ನಾವು ಸ್ವಲ್ಪ ಧ್ಯಾನಿಸೋಣ. 

 

ನೀತಿವಂತನಾಗಿ ಇದ್ದನು (ಆದಿ. 6:9): ನೋಹನು ಪಾಪಭರಿತ ಜಗತ್ತಿಗೆ ಹೊಂದಿಕೆಯಾಗಲಿಲ್ಲ. ಅವನು ತನ್ನ ಕಾಲದವರಲ್ಲಿ ನೀತಿವಂತನೂ ಯಥಾರ್ಥನೂ ಆಗಿದ್ದನು. ನಿಮ್ಮ ಸುತ್ತಲಿನ ಸಂದರ್ಭಗಳು ಏನೇ ಇರಲಿ, ನಿಮ್ಮ ಆಲೋಚನೆಗಳು, ಕಾರ್ಯಗಳು ಮತ್ತು ನಡವಳಿಕೆಗಳು ದೇವರಿಗೆ ಇಷ್ಟವಾಗಿದ್ದರೆ, ಆತನ ಕಣ್ಣುಗಳು ನಿಮ್ಮ ಕಡೆಗೆ ತಿರುಗುತ್ತವೆ. ದೇವರ ಕಣ್ಣುಗಳಲ್ಲಿ ನಿಮಗೆ ದಯೆ ದೊರೆಯುತ್ತದೆ. 

 

ದೇವರೊಂದಿಗೆ ನಡೆಯುತ್ತಿದ್ದನು (ಆದಿ. 6:9): ದೇವರೊಂದಿಗೆ ನಡೆಯುವುದು ಎಂಬುದು ಆತನೊಂದಿಗೆ ಮುಂದೆ ಸಾಗುವ ಅನುಭವ. ದೇವರೊಂದಿಗೆ ನಡೆಯುವವರು ಆತನೊಂದಿಗೆ ಮಾತನಾಡುತ್ತಲೇ ಇರುತ್ತಾರೆ. ನಮ್ಮ ಜೀವನದಲ್ಲಿ ಅವರೊಂದಿಗೆ ನಡೆಯುವ ಅನುಭವ ಇದೆಯೇ? ಎಂಬುದನ್ನು ಯೋಚಿಸೋಣ. 

  

ಪ್ರಿಯರೇ, ನೋಹನ ಸಲುವಾಗಿ ಅವನ ಇಡೀ ಕುಟುಂಬವನ್ನು ಕಾಪಾಡಲಾಯಿತು. ನೋಹನ ಕಾಲದಲ್ಲಿ ಸಂಭವಿಸಿದಂತೆಯೇ, ನಾವು ಈಗ ವಾಸಿಸುತ್ತಿರುವ ಈ ಜಗತ್ತಿನಲ್ಲಿ, ನಮ್ಮ ಸುತ್ತಲೂ ಪಾಪಗಳು ಮತ್ತು ಅಕ್ರಮಗಳು ಹೆಚ್ಚಾಗುತ್ತಿವೆ. ಮನುಷ್ಯನ ಅಕ್ರಮ ಮತ್ತು ಪಾಪವು ದೇವರನ್ನು ದುಃಖಪಡಿಸುತ್ತಿದೆ ಮತ್ತು ಪಶ್ಚಾತ್ತಾಪ ಪಡುವಂತೆ ಮಾಡುತ್ತಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇದರ ಮಧ್ಯದಲ್ಲಿ, ನಿಮ್ಮ ಜೀವನವು ನೋಹನಂತೆ ದೇವರನ್ನು ಸಂತೈಸುವಂಥದ್ದಾಗಿರಲಿ. ಆಮೆನ್.

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆದ ಕ್ರಿಸ್‌ಮಸ್ ಸುವಾರ್ತೆ ಕೂಟಕ್ಕೆ ಆಗಮಿಸಿದ ಜನರ ಹೃದಯದಲ್ಲಿ ದೇವರು ಮಧ್ಯಸ್ಥಿಕೆ ವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş