Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.05.2021
Share:

By Village Missionary Movement

Friday, 07-May-2021

ಧೈನಂದಿನ ಧ್ಯಾನ(Kannada) – 07.05.2021

 

ಶಬ್ದವನ್ನು ಕೇಳುವ ಮೇಕೆ

 

"... ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು.." - ಮಾರ್ಕನು 1:17

 

ಸೆಪ್ಟೆಂಬರ್ 11, 2001 ರಂದು ಅಪಹರಣಕ್ಕೊಳಗಾದ ವಿಮಾನವು ಪೆಂಟಗನ್‌ಗೆ ಅಪ್ಪಳಿಸಿದಾಗ ಅನೇಕ ಜನರು ಕಟ್ಟಡದ ಒಳಗೆ ಇದ್ದರು.  ವಿಮಾನ ಅಪಘಾತದಿಂದ ಸೃಷ್ಟಿಯಾದ ಭಯಾನಕ ಹೊಗೆಯಲ್ಲಿ ಅವರು ಸಿಕ್ಕಿಬಿದ್ದರು ಮತ್ತುಆ ಹೊಗೆ ಅವರ ಕಣ್ಣುಗಳನ್ನು ಆವರಿಸಿದ್ದರಿಂದ ಹೊರಬರಲು ಸಾಧ್ಯವಾಗದಷ್ಟು ತೊಂದರೆ ಅನುಭವಿಸಿದರು.  ಉಸಿರಾಡಲು ಸಾಧ್ಯವಾಗದೆ ತುಂಬಾ ಕಷ್ಟವನ್ನು ಅನುಭವಿಸಿದರು.  ಆಗ ಐಸಾಕ್ ಹುಪ್ಪೀ ಎಂಬ ಪೊಲೀಸ್ ಅಧಿಕಾರಿ ಒಳಗೆ ಓಡಿ, ಜನರು ಜೀವಂತವಾಗಿ ಇದ್ದಾರೆಂದು ಹುಡುಕಿದರು.  ಒಳಗೆ ಪರಿಸ್ಥಿತಿಯನ್ನು ನೋಡಿದ ಕೂಡಲೇ ಅವರು ಹೊರಗೆ ಬಂದು ನನ್ನ ಧ್ವನಿಯನ್ನು ಆಲಿಸಿ ಆ ಶಬ್ದವನ್ನು ಅನುಸರಿಸಬೇಕೆಂದು ಮತ್ತೆ ಮತ್ತೆ ಜೋರಾಗಿ ಹೇಳುತ್ತಲೇ ಇದ್ದರು.  ಅವನ ಧ್ವನಿಯನ್ನು ಕೇಳಿ ಆತನನ್ನು ಹಿಂಬಾಲಿಸಿದ ಅನೇಕರು ಹೊರಬಂದು ಬದುಕುಳಿದರು.

 

ಮೀನು ಹಿಡಿಯುತ್ತಿದ್ದ ಪೇತ್ರನು ಮತ್ತು ಅವನ ಸಹೋದರ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುತ್ತಿದ್ದಾಗ, ಯೇಸು ಅವರನ್ನು ನೋಡಿ, ನನ್ನನ್ನು ಹಿಂಬಾಲಿಸಿರಿ ಎಂದು ಕರೆದರು.  ಯೇಸು ಕ್ರಿಸ್ತನು ಅವರನ್ನು ಕರೆದ ಕೂಡಲೇ ಅವರು ತಮ್ಮ ಬಲೆಗಳನ್ನು, ದೋಣಿಯನ್ನು ಬಿಟ್ಟು ಆತನ ಮಾತಿಗೆ ವಿಧೇಯರಾಗಿ ಆತನನ್ನು  ಹಿಂಬಾಲಿಸಿದರು.  ಯೇಸು ಸಹ ಅವರನ್ನು ತನ್ನೊಂದಿಗೆ ಇಟ್ಟುಕೊಂಡು ಅವರಿಗೆ ತರಬೇತಿ ಕೊಡುತ್ತಾ, ಕಲಿಸಿಕೊಡುತ್ತಾ  ಅವರನ್ನು ಬಹು ಪ್ರಬಲ ಸೇವಕರನ್ನಾಗಿ ಮಾಡಿದ್ದನ್ನು, ಮತ್ತು ಅವರನ್ನು ಸೇವೆಯಲ್ಲಿ ಉಪಯೋಗಿಸಿದ್ದನ್ನು  ನಾವು ಸತ್ಯವೇದದಲ್ಲಿ ಓದುತ್ತೇವೆ.

 

ಇದನ್ನು ಓದುತ್ತಿರುವ ಪ್ರಿಯರೇ!  ಈ ಲೋಕದ ಪಾಪ ಮತ್ತು ಶಾಪದಿಂದ ಹೊರಬರಲು ಸಾಧ್ಯವಾಗದೆ ಕೋಟ್ಯಂತರ ಜನರು ಬಳಲುತ್ತಿದ್ದಾರೆ.  ಯೇಸು ಅಂತಹ ಪ್ರತಿಯೊಬ್ಬರನ್ನು ಪ್ರತಿದಿನ, ಪ್ರತಿ ನಿಮಿಷ, ನನ್ನ ಬಳಿಗೆ ಬನ್ನಿರಿ ಎಂದು  ಕರೆಯುತ್ತಲೇ ಇದ್ದಾರೆ.  ಈ ಸ್ಥಿರವಲ್ಲದ  ಲೋಕದಲ್ಲಿ ದಿಕ್ಕು ತೋಚದೇ ಬದುಕಲು ದಾರಿ ಇಲ್ಲದ, ಚಲನಚಿತ್ರ ತಾರೆಯರು ಮತ್ತು ರಾಜಕಾರಣಿಗಳಿಂದ ದ್ರೋಹಕ್ಕೊಳಗಾದ ಜನರನ್ನು ನೋಡಿ "ನನ್ನ ಹಿಂದೆ ಬನ್ನಿ" ಎಂದು ಯೇಸು ಕ್ರಿಸ್ತನು ಹೇಳುತ್ತಿದ್ದಾರೆ!  ಕುರುಬನ ಧ್ವನಿಯನ್ನು ಕೇಳಿ ಅವರನ್ನು ಹಿಂಬಾಲಿಸುವ ಕುರಿಗಳಂತೆ, ಆತನ ಶಬ್ದವನ್ನು ಕೇಳಿ ತನ್ನ ಹೆಜ್ಜೆಗಳನ್ನು ಅನುಸರಿಸುವವರು ರಕ್ಷಿಸಲ್ಪಡುತ್ತಾರೆ, ಮತ್ತು ಧನ್ಯರಾಗಿರುತ್ತಾರೆ.  ಆತನ ಧ್ವನಿಯನ್ನು ಕೇಳುವ ಕುರಿಗಳಂತೆ ನಾವು ಇಂದೇ ಆತನನ್ನು ಹಿಂಬಾಲಿಸೋಣ, ಮತ್ತು ಅನೇಕರು ಯೇಸುವನ್ನು ಅನುಸರಿಸುವವರಾಗಿ ಮಾರ್ಪಡಿಸೋಣ!

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:-

ಪ್ರತಿ ಭಾನುವಾರ ಪ್ರಸಾರವಾಗುತ್ತಿರುವ ಯುವಕರ ಸಂಜೆ ಕಾರ್ಯಕ್ರಮವನ್ನು ನೋಡುತ್ತಿರುವ ಯುವಕರ ಮಧ್ಯದಲ್ಲಿ ಉಜ್ಜೀವನವು ಉಂಟಾಗುವಂತೆ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino