By Village Missionary Movement
Monday, 23-Dec-2024ಧೈನಂದಿನ ಧ್ಯಾನ(Kannada) – 23.12.2024
ಮತ್ಸರ
"…ಮತ್ಸರವು ಎಲುಬುಗಳಿಗೆ ಕ್ಷಯವು" - ಜ್ಞಾನೋಕ್ತಿ 14:30
ಮಾಲತಿ ಕುಟುಂಬದವರು ಒಳ್ಳೆಯ ಸೌಖರ್ಯವುಳ್ಳವರು. ಹಾಗಾಗಿ ಇವರ ಮನೆಯಲ್ಲಿ ವಸ್ತುಗಳಿಗೋ, ಹಣಕ್ಕೋ ಕೊರತೆಯೇ ಇರಲಿಲ್ಲ. ಇವರ ಎದುರಿನ ಮನೆಯಲ್ಲಿ ವಾಸವಿದ್ದ ಅಮ್ಮುಗೆ ಯಾವುದೇ ಸೌಲಭ್ಯಗಳಿಲ್ಲದ ಕಾರಣ ಹೆಚ್ಚಿನ ವಸ್ತುಗಳೂ ಇರಲಿಲ್ಲ. ಆದರೆ ಅಮ್ಮು ಮಾಲತಿಯ ಮನೆಯಲ್ಲಿನ ಸೌಲಭ್ಯಗಳನ್ನು ಕಂಡು ಹೊಟ್ಟೆಕಿಚ್ಚುಪಡುತ್ತಿದ್ದಳು. ಒಂದು ದಿನ ಮಾಲತಿಯ ಮನೆಗೆ ಬೆಂಕಿ ಹೊತ್ತಿಕೊಂಡು ವಸ್ತುಗಳೆಲ್ಲ ಸುಟ್ಟು ಬೂದಿಯಾದವು. ಎದುರಿನ ಮನೆಯ ಅಮ್ಮು ಹಾಡು ಕೇಳುತ್ತಾ, ತನ್ನ ಮನಸ್ಸಿನಲ್ಲಿ ಹೀಗೆ ಆಗಬೇಕು. ಒಂದು ಸಾಮಾನು ಕೂಡ ಇಲ್ಲದೆ ಬೀದಿಯಲ್ಲಿ ನಿಲ್ಲಬೇಕು ಅಂದುಕೊಂಡು ಸಂತೋಷಪಟ್ಟಳು. ಮಾಲತಿಗೆ ಇನ್ಸೂರೆನ್ಸ್ ಮೂಲಕ ಸ್ವಲ್ಪ ಹಣ ಸಿಕ್ಕಿತು. ಅವಳು ಆ ಮನೆಯನ್ನು ಮರುನಿರ್ಮಾಣ ಮಾಡಲು ಮಣ್ಣನ್ನು ಅಗೆಯುವಾಗ ಚಿನ್ನದ ನಾಣ್ಯಗಳ ನಿಧಿಯು ದೊರೆಯಿತು. ಮಾಲತಿ ಕುಟುಂಬದವರು ನೆಮ್ಮದಿಯ ಬದುಕನ್ನು ಮರಳಿ ಪಡೆದರು. ಮತ್ಸರ ಪಟ್ಟ ಅಮ್ಮು ನೆಮ್ಮದಿಯಿಲ್ಲದೆ ಬದುಕಿದಳು. ನೋಡಿ, ಹೊಟ್ಟೆಕಿಚ್ಚಿನ ಗುಣ ಇವಳ ಜೀವನವನ್ನು ಸಂತೋಷವಾಗಿ ಅನುಭವಿಸಲು ಸಾಧ್ಯವಾಗದಂತೆ ಮಾಡಿತು.
ಸತ್ಯವೇದದಲ್ಲಿ ಯಾಕೋಬ ಮತ್ತು ರಾಹೇಲಳಿಗೆ ಜನಿಸಿದವರೇ ಯೋಸೇಫನು. ಯೋಸೇಫನ ಮೇಲೆ ದೇವರ ಯೋಜನೆ ಬಹು ದೊಡ್ಡದಾಗಿತ್ತು. ಯೋಸೇಫನು ತಾನು ಕಂಡ ಕನಸನ್ನು ಬಹಿರಂಗಪಡಿಸಿದಾಗ, ಯೋಸೇಫನು ತನ್ನ ಸ್ವಂತ ಸಹೋದರರಿಂದ ದ್ವೇಷಿಸಲ್ಪಟ್ಟನು. ಸಹೋದರರು ಅವನ ಮೇಲೆ ಮತ್ಸರಪಟ್ಟರು. ಆದ್ದರಿಂದ ಅವನನ್ನು ಒತ್ತಾಯಿಸಿ ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಇಷ್ಮಾಯೇಲ್ಯ ರಿಗೆ ಮಾರಿದರು. ಆದರೆ ಯೋಸೇಫನ ಮೇಲೆ ದೇವರ ಯೋಜನೆ ಇದ್ದುದರಿಂದ ಐಗುಪ್ತ ದೇಶಕ್ಕೆ ಅಧಿಪತಿಯಾದರು.
ನನಗೆ ಪ್ರಿಯವಾದವರೇ! ಎದುರು ಮನೆಯವರು ಮತ್ತು ಅಕ್ಕಪಕ್ಕದ ಮನೆಯ ಸಂಬಂಧಿಕರು ಅಭಿವೃದ್ಧಿಯಾಗುವುದನ್ನು ಕಂಡು ನಾವು ಅದರ ಕುರಿತು ಕರ್ತನಿಗೆ ಸ್ತೋತ್ರ ಮಾಡಿ ಸಂತೋಷಪಡೋಣ. ಹೊಟ್ಟೆಕಿಚ್ಚು ಕ್ಯಾನ್ಸರ್ ಇದ್ದಂತೆ. ಸ್ವಲ್ಪ ಸ್ವಲ್ಪವಾಗಿ ನಮ್ಮ ಜೀವವನ್ನು ತೆಗೆಯುವಂಥದ್ದು. ಈ ಮತ್ಸರ ಎಂಬ ರೋಗವು ನಮ್ಮನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಮತ್ತು ಮತ್ಸರವು ಯಾವುದಕ್ಕಾದರೂ, ಎಷ್ಟು ಎತ್ತರಕ್ಕಾದರೂ ಕೊಂಡೊಯ್ಯುವಂಥದ್ದು. ಆದುದರಿಂದ ಮತ್ಸರ ಎಂಬ ರೋಗವನ್ನು ತೊಲಗಿಸಿ ನಂಬಿಕೆಯಿಂದ ದೇವರನ್ನು ಸೇರೋಣ. ಆತ್ಮವನ್ನು ತಿನ್ನುವ ಮಾರಣಾಂತಿಕ ಮತ್ಸರದಿಂದ ಹೊರಬರಲು ದೇವರು ಮಾತ್ರವೇ ನಮಗೆ ಸಹಾಯ ಮಾಡಲು ಸಾಧ್ಯ. ಆದ್ದರಿಂದ ಅವರ ಸಹಾಯವನ್ನು ಪಡೆಯೋಣ.
- Mrs. ಗ್ರೇಸ್ ಜೀವಮಣಿ
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ ನಲ್ಲಿ ನಡೆಯುವ ಟ್ಯೂಷನ್ ಸೆಂಟರ್‌ನಲ್ಲಿರುವ ಮಕ್ಕಳು ದೇವರ ಜ್ಞಾನದಿಂದ ತುಂಬಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482