Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.12.2024
Share:

By Village Missionary Movement

Thursday, 19-Dec-2024

ಧೈನಂದಿನ ಧ್ಯಾನ(Kannada) – 19.12.2024

 

HEALING 

 

"…ಆತನ ಉಡುಪನ್ನು ಮುಟ್ಟಿದಳು" - ಮಾರ್ಕ 5:28

  

ಸಹೋದರಿಯೊಬ್ಬಳು ಎರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಳಲುತ್ತಾ ಅನೇಕ ಔಷಧಿಗಳನ್ನು ತೆಗೆದುಕೊಂಡರೂ ಸ್ವಸ್ಥವಾಗದೇ ವೈದ್ಯರಿಂದ ಕೈಬಿಡಲ್ಪಟ್ಟ ಸ್ಥಿತಿಯಲ್ಲಿ ಮರಣದ ಹಾಸಿಗೆಯಲ್ಲಿ ಕಾಣಲ್ಪಟ್ಟರು. ಸ್ವಸ್ಥತೆಗಾಗಿ ಅನೇಕ ಸ್ಥಳಗಳಿಗೆ ಹೋದರೂ ಸ್ವಸ್ಥವಾಗಲಿಲ್ಲ. ಇವರ ಜೀವಿತ ದಿನಗಳು ಕಡಿಮೆ ಎಂದು ಹೇಳಿ ವೈದ್ಯರೂ ಕೈಬಿಟ್ಟರು. ಈ ಸಹೋದರಿಯ ಮನೆಯ ಬಳಿ ಒಂದು ಪ್ರಾರ್ಥನಾ ಸಭೆ ನಡೆಯಿತು. ಸಂದೇಶ ನೀಡಲು ಬಂದ ಬೋಧಕರ ಬಳಿ ಈ ಸಹೋದರಿಯ ಪರಿಸ್ಥಿತಿಯ ಬಗ್ಗೆ ತಿಳಿಸಲಾಯಿತು. ಮರುದಿನ ಈ ಬೋಧಕರು ಸಹೋದರಿಯ ಮನೆಗೆ ಬಂದು ಯೇಸುವಿನ ಪ್ರೀತಿಯನ್ನು ಪ್ರಕಟಿಸಿ, ಅವರಿಗಾಗಿ ಪ್ರಾರ್ಥಿಸಿದರು. ಆ ಪ್ರಾರ್ಥನೆಯ ಸಮಯದಲ್ಲೇ, ಒಂದು ಶಕ್ತಿಯು ಇಳಿಯಿತು. ಆ ಕ್ಷಣದಲ್ಲಿ ರಕ್ತಸ್ರಾವವು ನಿಂತುಹೋಯಿತು. ಆ ಬೋಧಕರು ಆ ಸಹೋದರಿಗೆ, ದೇವರು ನಿನ್ನನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಿದರು. ಇಂದು ಆ ಸಹೋದರಿ ಸೇವೆ ಮಾಡುತ್ತಿದ್ದಾರೆ.

  

ಇದೇ ರೀತಿಯ ಘಟನೆಯು ಹೊಸ ಒಡಂಬಡಿಕೆಯಲ್ಲಿ ಬರೆಯಲ್ಪಟ್ಟಿದೆ. 12 ವರ್ಷಗಳಿಂದ ರಕ್ತಸ್ರಾವವುಳ್ಳ ಮಹಿಳೆ ನಮಗೆ ಗೊತ್ತು. ಆ ಸ್ತ್ರೀಯು ಅನೇಕ ವೈದ್ಯರಿಂದ ಬಹಳವಾಗಿ ಸಂಕಟಪಟ್ಟು ತನಗಿದ್ದದ್ದನ್ನೆಲ್ಲಾ ಖರ್ಚು ಮಾಡಿದರೂ ವಾಸಿಯಾಗದೆ ಇದ್ದಾಗ ಯೇಸುವಿನ ಬಗ್ಗೆ ಕೇಳಿ, ನಾನು ಆತನ ಬಟ್ಟೆಯನ್ನು ಮುಟ್ಟಿದರೆ ನಾನು ಸ್ವಸ್ಥಳಾಗುತ್ತೇನೆ ಎಂದು ಹೇಳಿ, ಯೇಸುವಿನ ವಸ್ತ್ರವನ್ನು ಮುಟ್ಟಿ, ವೇದನೆ ನೀಗಿ ಸ್ವಸ್ಥವಾದಳು.

  

ಹೌದು, ಪ್ರಿಯರೇ! ಯೇಸುವಿನಿಂದ ಎಲ್ಲರಿಗೂ ಕೊಡಲ್ಪಟ್ಟ ಆಜ್ಞೆ ಲೋಕದ ಕಟ್ಟಕಡೆಯವರೆಗೂ ಹೋಗಿ ಸುವಾರ್ತೆಯನ್ನು ಸಾರಿರಿ ಎಂದು. ನಾವು ಇತರರಿಗೆ ಯೇಸುವನ್ನು ಪ್ರಕಟಿಸಿದಾಗ ಮಾತ್ರವೇ ಅವರು ಯೇಸುವಿನ ಬಗ್ಗೆ ತಿಳಿದುಕೊಳ್ಳುತ್ತಾರೆ. ಕೇಳುವವರಿಗೆ ಯೇಸುವಿನ ಮೇಲೆ ನಂಬಿಕೆ ಬರುತ್ತದೆ. ಈ ಮಹಿಳೆಯೂ ಹಾಗೆಯೇ ಮಾಡಿದಳು. ಅವಳು ಯೇಸುವಿನ ಬಗ್ಗೆ ಕೇಳಿದ ತಕ್ಷಣ, ಅವಳು ಆತನನ್ನು ನೋಡಲು ಬಯಸಿದ್ದಳು. ಆತನನ್ನು ಮುಟ್ಟಿದರೆ ಗುಣವಾಗುತ್ತೇನೆ ಎಂಬ ನಂಬಿಕೆ ಅವಳಲ್ಲಿ ಬಂದಿರುತ್ತದೆ. ವೈದ್ಯರು ಕೈಬಿಡಲ್ಪಟ್ಟ ಯಾವುದೇ ಕಾಯಿಲೆಯಾದರೂ, ಕ್ಯಾನ್ಸರ್ ಆಗಿದ್ದರೂ ಗುಣಪಡಿಸುವ ಶಕ್ತಿ ಯೇಸುವಿಗೆ ಇದೆ. ಇವರು ತನ್ನ ವಾಕ್ಯವನ್ನು ಕಳುಹಿಸಿ ಗುಣಪಡಿಸುವ ದೇವರು. ಸತ್ತವರನ್ನೂ ಜೀವಂತವಾಗಿ ಎಬ್ಬಿಸುವ ಅದ್ಭುತವಾದ, ಅತಿಶಯವಾದ ದೇವರು. ಆದ್ದರಿಂದ ಸ್ವಸ್ಥತೆ ನೀಡುವ ಯೇಸುವಿನ ಬಳಿಗೆ ಬಂದು, ಸ್ವಸ್ಥತೆಯನ್ನು ಪಡೆದುಕೊಳ್ಳೋಣ. ಆಮೆನ್.

- Sis. ಸಿಂಧು 

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವಂತಹ ಟ್ಯೂಷನ್ ಸೆಂಟರ್‌ನಲ್ಲಿ ಪಾಠ ಮಾಡಲು ಬರುವ ಶಿಕ್ಷಕರು ದೇವರ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel