Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.12.2024
Share:

By Village Missionary Movement

Wednesday, 18-Dec-2024

ಧೈನಂದಿನ ಧ್ಯಾನ(Kannada) – 18.12.2024

 

ತಪ್ಪಿಸುವ ಬಂಡೆ

 

"ನಮ್ಮ ಜೀವವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು" - ಕೀರ್ತನೆ 124:7

 

ಕೊಚ್ಚಿಹೋದ ನೀರಿನಲ್ಲಿ ಇರುವೆ ಒದ್ದಾಡುತ್ತಿತ್ತು. ಅದನ್ನು ನೋಡಿದ ಪಾರಿವಾಳವೊಂದು ಮರದಿಂದ ಎಲೆ ಕಿತ್ತು ಹಾಕಲು, ಇರುವೆ ತಪ್ಪಿಸಿಕೊಂಡು ಹೋಯಿತು. ತನ್ನನ್ನು ಕಾಪಾಡಿದ ಆ ಪಾರಿವಾಳವನ್ನು ಗುರಿಯಿಡುತ್ತಿದ್ದ ಬೇಟೆಗಾರನ ಕಾಲನ್ನು ಇರುವೆ ಕಚ್ಚಿತು. ಆ ಪಾರಿವಾಳ ಬೇಟೆಗಾರನ ವೇದನೆಯ ಶಬ್ದವನ್ನು ಕೇಳಿ ಓಡಿಹೋಗಿ ತನ್ನನ್ನು ಕಾಪಾಡಿಕೊಂಡಿತು. ಒಂದು ಕ್ಷಣದಲ್ಲಿ ಇರುವೆ ಮತ್ತು ಪಾರಿವಾಳ ಕಾಪಾಡಲ್ಪಟ್ಟವು. ಇದು ನಾವು ಪ್ರಿಸ್ಕೂಲ್‌ನಲ್ಲಿ ಓದಿದ ಕಥೆ, ಮತ್ತು ಈ ವರ್ಷದ ಕೊನೆಯ ತಿಂಗಳಲ್ಲಿ ಹಾದು ಹೋಗುತ್ತಿರುವ ನಾವು ದಾಟಿ ಬಂದಂತಹ ಹಾದಿಯನ್ನು ಹಿಂತಿರುಗಿ ನೋಡಿದರೆ, ನಮ್ಮ ಜೀವನ ಪ್ರಯಾಣದಲ್ಲಿ, ಅನಾರೋಗ್ಯ, ವೈಫಲ್ಯ ಮತ್ತು ನಷ್ಟಗಳಲ್ಲಿ ನಮ್ಮ ದೇವರು ನಮ್ಮನ್ನು ಕೈಬಿಡಲೇ ಇಲ್ಲ. ಸಾವಿನ ಅಂಚಿಗೆ ಹೋಗಿದ್ದ ನಮ್ಮಲ್ಲಿ ಹಲವರನ್ನು ತಪ್ಪಿಸುವ ಬಂಡೆಯಾಗಿ ನಮ್ಮ ದೇವರು ಇದ್ದರಲ್ಲವೇ!

        

ದೇವರು ತನ್ನನ್ನು ಕರೆಯುವವರನ್ನು ರಕ್ಷಿಸುತ್ತಾರೆ ಎಂದು ಸತ್ಯವೇದದ ಆರಂಭದಿಂದ ನಾವು ಓದುತ್ತೇವೆ. ದಾವೀದನು ಅರಸನಾದ ಸೌಲನಿಗೆ ಅನೇಕ ಉಪಕಾರಗಳನ್ನು ಮಾಡಿದ್ದರೂ, ಸೌಲನು ದಾವೀದನನ್ನು ಕೊಲ್ಲಲು ಯತ್ನಿಸಿದನು. ಜೀಫ್ ಊರಿನ ಜನರು ಸಹ ರಾಜನ ಬಳಿಗೆ ಬಂದು ದಾವೀದನನ್ನು ಸೆರೆಹಿಡಿಯಲು ಸಹಾಯ ಮಾಡುವುದಾಗಿ ಹೇಳಿದರು, ಮತ್ತು ಅವನ ಜನರು ಮಾವೋನ್ ಅರಣ್ಯದಲ್ಲಿ ದಾವೀದನು ಮತ್ತು ಅವನ ಜನರನ್ನು ಸುತ್ತುವರೆದರು. (1 ಸಮುವೇಲ 23 : 26) ಮುಗಿಯಿತು ಇದರೊಂದಿಗೆ ದಾವೀದನ ಜೀವನವು ಎಂದು ಮೊದಲ ಬಾರಿಗೆ ಸತ್ಯವೇದವನ್ನು ಓದುವವರಿಗೆ ಅನಿಸುತ್ತದೆ. ಆದರೆ ದಾವೀದನು ಪ್ರತಿ ಬಾರಿ ತಪ್ಪಿಸಿಕೊಂಡರು. ತನ್ನನ್ನು ರಕ್ಷಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವ ವಿಧದಲ್ಲಿ ಅದಕ್ಕೆ "ಸೆಲಾಹ್ ಅಮ್ಮಾಲಿಕೋತ್" (ಆಶ್ರಯದ ಬಂಡೆ) ಎಂದು ಹೆಸರಿಸಿದ ನಂತರ, ದಾವೀದನು ಸುರಕ್ಷಿತ ಸ್ಥಳವನ್ನು ಹುಡುಕಿ ಹೋಗುತ್ತಾರೆ. ದಾವೀದನು ಬರೆದ ಕೀರ್ತನೆಗಳಲ್ಲಿ ಕರ್ತನು ನನ್ನ ಬಂಡೆ, ನನ್ನ ಕೋಟೆ, ನನ್ನ ಆಶ್ರಯ, ನನ್ನ ದುರ್ಗವು... ಎಂದು ನಿರಂತರವಾಗಿ ಏಕೆ ಹೇಳಿದರೆಂದು ನಿಮಗೆ ಗೊತ್ತಾ? ಹೌದು, ಏಕೆಂದರೆ ಅವರನ್ನು ತಪ್ಪಿಸಿದ ಬಂಡೆಯಾದ ದೇವರು ಯಾವಾಗಲೂ ಅವರೊಂದಿಗೆ ಇರುತ್ತಾರೆ ಎಂದು ಅವರು ರುಚಿ ನೋಡಿದ್ದರು ಆದ್ದರಿಂದಲೇ!

 

ಈ ಹನ್ನೊಂದು ತಿಂಗಳ ಕಾಲ ನಮ್ಮನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡಿದ ದೇವರಿಗೆ ಕೃತಜ್ಞತೆ ಸಲ್ಲಿಸೋಣವೇ? ಅನೇಕ ಬಾರಿ, ನಮಗೆ ತಿಳಿದೋ ತಿಳಿಯದೆಯೋ, ದೇವರು ನಮ್ಮನ್ನು ಅಪಾಯ ಮತ್ತು ಹಾನಿಯಿಂದ ರಕ್ಷಿಸಿದರು. ನಮ್ಮನ್ನು ಕಾಪಾಡುವಂತೆ ಆತನು ತನ್ನ ದೂತರಿಗೆ ಆಜ್ಞಾಪಿಸುತ್ತಾರೆ ಮತ್ತು ನಮ್ಮ ಪಾದಗಳು ಕಲ್ಲಿಗೆ ತಗುಲದಂತೆ ಕಾಯುತ್ತಾರೆ. ಆತನು ನಮ್ಮ ಆತ್ಮವನ್ನು ನಾಶನದಿಂದ ತಪ್ಪಿಸಿದ್ದಾರೆ. ಹೌದು, ಅವರು ತಪ್ಪಿಸುವ ಬಂಡೆ! ದಾವೀದನನ್ನು ಮಾತ್ರವಲ್ಲ, ನಮ್ಮನ್ನು ರಕ್ಷಿಸುವ ಬಂಡೆಯೂ ಸಹ!

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆದವರು ಯೇಸುವನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş