Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.12.2024
Share:

By Village Missionary Movement

Tuesday, 17-Dec-2024

ಧೈನಂದಿನ ಧ್ಯಾನ(Kannada) – 17.12.2024

 

ರೈತ

 

"ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರು ಹೊಯಿದನು, ಆದರೆ ಬೆಳೆಸುತ್ತಾ ಬಂದವನು ದೇವರು" - 1 ಕೊರಿಂಥ 3:6

 

ಒಬ್ಬ ರೈತ ತನ್ನ ಭೂಮಿಯಲ್ಲಿ ಬೀಜಗಳನ್ನು ಬಿತ್ತುವ ಮೊದಲು ತನ್ನ ಮನೆಯವರು ಅಥವಾ ಅವರ ತಂದೆ ಹೇಗೆ ಬಿತ್ತುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅದರಂತೆಯೇ ಅವರು ಬೀಜವನ್ನು ಬಿತ್ತುತ್ತಾರೆ. ಬಿತ್ತುವ ಬೀಜ ಯಾರ ಕೈಯಲ್ಲಿದ್ದರೂ, ಯಾರು ಬಿತ್ತಿದರೂ ಬೆಳೆಯುತ್ತದೆ. ಆದ್ದರಿಂದ ಈ ಕೆಲಸವನ್ನು ಯಾರ ಕೈಗಳಲ್ಲೋ ಕೊಟ್ಟು ಅವರು ಸುಮ್ಮನಾಗುವುದಿಲ್ಲ. ಹೆಚ್ಚು ಬಿತ್ತನೆ ಮಾಡುತ್ತಿದ್ದಾನಲ್ಲಾ? ಭೂಮಿಯನ್ನು ಯಾವಾಗ ಬಳಸಬೇಕು? ನೀರು ಹೇಗೆ ಹಾಕಬೇಕು? ಎಳೆಯ ಬೆಳೆಯನ್ನು ಹೇಗೆ ನೋಡಬೇಕು? ಬೆಳೆದಿರುವ ಬೆಳೆಯನ್ನು ಹೇಗೆ ನೋಡಬೇಕು? ಗೊಬ್ಬರ ಯಾವಾಗ ಹಾಕಬೇಕು? ಎಂದೆಲ್ಲಾ ಚೆನ್ನಾಗಿ ತಿಳಿದುಕೊಂಡು ಅದಕ್ಕೆ ತಕ್ಕಂತೆ ಮಾಡುತ್ತಾರೆ.      

  

ಅದೇ ರೀತಿ ಸೇವೆ ಮಾಡುವ ಪ್ರತಿಯೊಂದು ಸೇವಕರೂ ನಮ್ಮ ಬಳಿ ಇರುವ ವಾಕ್ಯವೆಂಬ ಬೀಜವನ್ನು ಜೋಪಾನವಾಗಿ ಬಿತ್ತಿದಾಗ, ಆ ಬೀಜವು ಹೆಚ್ಚು ಫಲ ನೀಡುತ್ತದೆ. ಬೀಜವನ್ನು ಬಿತ್ತಿದ ನಂತರ ರೈತ ಅದು ಮೊಳಕೆಯೊಡೆಯುತ್ತದೆ ಎಂದು ಕಂಡುಕೊಳ್ಳದೆ ಇರುವುದಿಲ್ಲ. ಅದಕ್ಕೆ ನೀರುಣಿಸಿ, ಕಳೆ ಕಿತ್ತು, ಗೊಬ್ಬರ ಹಾಕಿ, ಬೇಲಿ ಹಾಕಿ ಆಡು, ದನ ಮೇಯದಂತೆ ಸಂರಕ್ಷಿಸುವಂತೆ ಪ್ರತಿಯೊಬ್ಬರು ತಾವು ಬಿತ್ತಿದ ವಾಕ್ಯ ಹೇಗೆ ಫಲ ನೀಡುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪ್ರಾರ್ಥನೆ ಎಂಬ ಭದ್ರತೆ ಸದಾ ನಮ್ಮೊಂದಿಗಿರಬೇಕು. "ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು." (ಕೀರ್ತನೆ 126:5) ಅವರಿಗಾಗಿ ಕಣ್ಣೀರಿನಿಂದ ಪ್ರಾರ್ಥಿಸಬೇಕು. ನಮ್ಮ ಕಣ್ಣೀರಿನ ಪ್ರಾರ್ಥನೆಯು ದೇವರಿಂದ ದೊಡ್ಡ ಫಲವನ್ನು ತರುತ್ತದೆ. ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು ಮತ್ತು ಸಮೃದ್ಧವಾಗಿ ಬಿತ್ತುವವನು ಸಮೃದ್ಧವಾಗಿ ಕೊಯ್ಯುವನು. ಹೌದು, ನಮ್ಮ ದೇವರು ವಾಕ್ಯವೆಂಬ ಬೀಜವನ್ನು ಬೆಳೆಯುವಂತೆ ಮಾಡಿ ಮೂವತ್ತು, ಅರವತ್ತು ಮತ್ತು ನೂರರಷ್ಟು ಫಲವನ್ನು ನೀಡಲು ಸಮರ್ಥರಾಗಿದ್ದಾರೆ.

 

ಪ್ರಿಯರೇ! ನಮ್ಮ ಮಾತು ಕೃಪೆಯಿಂದ ತುಂಬಿದ್ದಾಗಿಯೂ, ಉಪ್ಪಿನಿಂದ ಸಾರವಾದದ್ದಾಗಿಯೂ ಇರಬೇಕು. ಸುವಾರ್ತೆ ಎಂಬ ಬೀಜವು ಎಷ್ಟು ಮುಖ್ಯವೋ ಅದನ್ನು ಬಿತ್ತುವ ಮನುಷ್ಯನೂ ದೇವರ ದೃಷ್ಟಿಯಲ್ಲಿ ಅಷ್ಟೇ ಮುಖ್ಯವಾದವರು. ಇಂದಿಗೂ, ನಮ್ಮ ದೇವರು ಸುವಾರ್ತೆಯ ಬೀಜವನ್ನು ಬಿತ್ತಲು ಜನರನ್ನು ಎದುರು ನೋಡುತ್ತಾ ಕಾಯುತ್ತಿದ್ದಾರೆ. "ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು" ಎಂದು ಇಂದಿಗೂ ದೇವರ ಕಣ್ಣುಗಳು ಜನರನ್ನು ಹುಡುಕುತ್ತಲೇ ಇದೆ. ಅವರ ಕೆಲಸವನ್ನು ಮಾಡಲು ನೀವು ಮುಂದೆ ಬರುತ್ತೀರಾ?

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ಪ್ರತಿ ಜಿಲ್ಲೆಯಲ್ಲೂ ಮನೆ ಪ್ರಾರ್ಥನಾ ಕೂಟಗಳನ್ನು ಆಯೋಜಿಸುವ ಅಕ್ವಿಲ್ಲಾ ಪ್ರಿಸ್ಕಿಲ್ಲಾಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al