Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.12.2024 (Kids Special)
Share:

By Village Missionary Movement

Sunday, 15-Dec-2024

ಧೈನಂದಿನ ಧ್ಯಾನ(Kannada) – 15.12.2024 (Kids Special)

 

ಮಿತಿಯಿಲ್ಲದ ಪ್ರೀತಿ

 

"ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದು ಬಂದದೆ…" - 1 ಯೋಹಾನ 3:16

 

ಪ್ರೀತಿಯ ಮುದ್ದು ಮಕ್ಕಳೇ! ನೀವೆಲ್ಲರೂ ಕ್ರಿಸ್‌ಮಸ್‌ಗೆ ರೆಡಿಯಾಗಿದ್ದೀರಾ? ಕ್ರಿಸ್‌ಮಸ್ ತಾತ, ಕ್ರಿಸ್ಮಸ್ ಟ್ರೀ ಮತ್ತು ಮನೆಯನ್ನು ಅಲಂಕರಿಸುವಲ್ಲಿ ತುಂಬಾ ಬಿಜಿಯಾಗಿದ್ದೀರ ಅಲ್ವಾ... O.K. ಯೇಸಪ್ಪ ಯಾತಕ್ಕಾಗಿ ಭೂಮಿಗೆ ಬಂದರು... ನಮ್ಮನ್ನು ಪ್ರೀತಿಸಿದ ಕಾರಣದಿಂದ... ಅದರ ಬಗ್ಗೆ ಒಂದು ಕಥೆ ಕೇಳೋಣ್ವಾ? ವಿಕ್ಕಿ ತುಂಬಾ ತೀಟೆ ಹುಡುಗ. ಅಪ್ಪ ಅಮ್ಮನ ಮಾತು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ಹೊಡೆದಾಟ, ಬಡಿದಾಟ ಇದೆಲ್ಲಾ ವಿಕ್ಕಿಗೆ ಕೈಬಂದ ಕಲೆ. ನೀವೆಲ್ಲ ಹಾಗೆ ಇರೋದಿಲ್ಲ ಅಲ್ವಾ. ವೆರಿ ಗುಡ್. ಓಹ್... ನಿಮ್ಮ ತರಗತಿಯಲ್ಲಿ ಹಾಗೆ ಇದ್ದಾರಾ? ಸರಿ ಅವರಿಗಾಗಿ ಪ್ರಾರ್ಥಿಸಿ.   

 

ವಿಕ್ಕಿ ಜಗಳವಾಡಿ ಟೀಚರ್ ಕೈಯಲ್ಲಿ ಸಿಕ್ಕಿಬಿದ್ದನು ಮತ್ತು ಚೆನ್ನಾಗಿ ಪೆಟ್ಟು ತಿಂದನು. ಓದಿನಲ್ಲಿ ತುಂಬಾ ಮಂದ. ತರಗತಿಯಲ್ಲಿ ಅವನ ಪಕ್ಕದಲ್ಲಿ ಕುಳಿತುಕೊಳ್ಳಲು ಎಲ್ಲರೂ ಹೆದರಿಕೊಳ್ಳುತ್ತಾರೆ. ಇದು ತಂದೆ ಮತ್ತು ತಾಯಿಗೆ ತುಂಬಾ ದುಃಖವಾಗಿತ್ತು. ವಿಕ್ಕಿ ಯಾವಾಗಾದರೂ ಬದಲಾಗುತ್ತಾನೋ... ಸಂಡೇ ಸ್ಕೂಲ್ ಗೆ ಹೋದರೆ ಬದಲಾಗುತ್ತಾನೆ ಅಂತ ಅಂದುಕೊಂಡರೆ ಅಲ್ಲಿ ಕೂಡಾ ವಿಕ್ಕಿ ಚೇಷ್ಟೆ ಮಾಡುತ್ತಿದ್ದ. ಏನನ್ನೂ ಗಮನಿಸುವುದಿಲ್ಲ. ಚಾಕಲೇಟ್ ತೆಗೆದುಕೊಂಡು ತಿಂದು ಪೇಪರ್ ಎತ್ತಿ ಬಿಸಾಡುತ್ತಾನೆ. ಭಾನುವಾರ ತರಗತಿ ನಡೆಸುವವರನ್ನು ಒಂದು ಗತಿ ಮಾಡಿಬಿಡುತ್ತಿದ್ದ. ಅವರೂ ಬೈಯದೆ, ಹೊಡೆಯದೆ ತಾಳ್ಮೆಯಿಂದ ಕಲಿಸುತ್ತಿದ್ದರು. ವಿಕ್ಕಿಗೆ ಸಿನಿಮಾ ನೋಡುವುದು ತುಂಬಾ ಇಷ್ಟ. ಒಂದು ದಿನ ಭಾನುವಾರ ಶಾಲೆಯಲ್ಲಿ ಯೇಸುವಿನ ಶಿಲುಬೆಯ ದೃಶ್ಯವನ್ನು ತೋರಿಸಲಾಯಿತು. ಅದನ್ನು ಗಮನಿಸಿದ ವಿಕ್ಕಿಯ ಕಣ್ಣುಗಳಲ್ಲಿ ನೀರು ಬಂತು ತನ್ನನ್ನು ಹಿಂಸಿಸುತ್ತಿರುವವರ ವಿರುದ್ಧ ಒಂದೇ ಒಂದು ಮಾತನ್ನೂ ಆಡಲಿಲ್ಲವಲ್ಲಾ. ಅವರ ಮೇಲೆ ಕೋಪವನ್ನೂ ಮಾಡಿಕೊಳ್ಳಲಿಲ್ಲವಲ್ಲಾ. ತನ್ನನ್ನು ನೋಯಿಸಿದವರನ್ನು ಕ್ಷಮಿಸುವಂತೆ ಪ್ರಾರ್ಥಿಸುತ್ತಿದ್ದಾರಲ್ಲಾ ಎಂದುಕೊಂಡು ವಿಕ್ಕಿಯ ಮನಸ್ಸು ಬದಲಾಯಿತು. ಕೆಲವೇ ದಿನಗಳಲ್ಲಿ ಅವನ ಗುಣ ಬದಲಾಯಿತು.

 

ಯೇಸುವಿನ ಪ್ರೀತಿಯನ್ನು ಸವಿದ ನಂತರ, ವಿಕ್ಕಿ ಇತರರಿಗೆ ಹೇಳಲು ಪ್ರಾರಂಭಿಸಿದನು. ಏನಪ್ಪಾ ಇದು ತೀಟೆಯ ವಿಕ್ಕಿ silent ವಿಕ್ಕಿಯಾಗಿ ಬದಲಾಗಿದ್ದಾನೆ ಎಂದು ಸ್ನೇಹಿತರು ಗೇಲಿ ಮಾಡಿದರು. ಹೌದು... ಯೇಸಪ್ಪ ಅಂಥದ್ದೇನು ಕೊಟ್ಟುಬಿಟ್ರು ನಿನಗೆ ಎಂದು ಸ್ನೇಹಿತರು ಕೇಳಿದರು "ಗೇಲಿ ಮಾಡುತ್ತಿರುವ ನಿಮ್ಮನ್ನು ಕ್ಷಮಿಸಲು ಪ್ರೀತಿಯನ್ನು ಕೊಟ್ಟಿದ್ದಾರೆ" ಎಂದು ವಿಕ್ಕಿ ಉತ್ತರಿಸಿದನು. ಈ ರೀತಿಯ ಪ್ರತಿಕ್ರಿಯೆಯನ್ನು ಸ್ವಲ್ಪವೂ ಊಹಿಸಿರದ ಸ್ನೇಹಿತರು, ವಿಕ್ಕಿಯ ಅದ್ಭುತವಾದ ಬದಲಾವಣೆಯನ್ನು ಕಂಡು ಯೇಸುವಿನ ಮೇಲೆ ನಂಬಿಕೆ ಇಟ್ಟರು. ಎಲ್ಲರೂ ಒಟ್ಟಾಗಿ ಭಾನುವಾರ ಶಾಲೆಗೆ ತೆರಳಿ, X mas program - ನಲ್ಲಿ ಉತ್ಸಾಹದಿಂದ ಪಾಲ್ಗೊಂಡು ಅರ್ಥಪೂರ್ಣ X mas ಅನ್ನು ಆಚರಿಸಿ ಯೇಸಪ್ಪನನ್ನು ಸಂತೋಷಪಡಿಸಿದರು.        

 

ಪ್ರೀತಿಯ ತಮ್ಮ, ತಂಗಿ! ಶತ್ರುಗಳನ್ನೂ ಪ್ರೀತಿಸಲು ಪ್ರೀತಿಯೆಂಬ ಅಸ್ತ್ರವನ್ನು ಉಪಯೋಗಿಸಿಬಿಟ್ಟರೆ ನಿಮಗೆ ಯಶಸ್ಸು ಖಂಡಿತ. ನಾವು ಪಾಪಿಗಳಾಗಿದ್ದಾಗ, ನಮ್ಮನ್ನು ಪ್ರೀತಿಸಿದ್ದರಿಂದಲೇ ಯೇಸು ಕ್ರಿಸ್ತನು ಮಗುವಾಗಿ ಜನಿಸಿದರು. ಆ ಮಿತಿಯಿಲ್ಲದ ಪ್ರೀತಿಯಿಂದ ತುಂಬಿಸಲ್ಪಟ್ಟು X mas ಅನ್ನು ಆಚರಿಸೋಣವಾ?

ಹ್ಯಾಪಿ ಹ್ಯಾಪಿ ಕ್ರಿಸ್ಮಸ್ ಮುದ್ದು ಮಕ್ಕಳೇ!

- Mrs. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel