Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.12.2024
Share:

By Village Missionary Movement

Saturday, 14-Dec-2024

ಧೈನಂದಿನ ಧ್ಯಾನ(Kannada) – 14.12.2024

 

ಮರೆಯುವವರ ಮಧ್ಯದಲ್ಲಿ ಮರೆಯದ ದೇವರು

 

"ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ" - ಯೆಶಾಯ 49:15

 

ಪ್ರಿಯರೇ! ಪ್ರೀತಿಯ ವಂದನೆಗಳು. ಬಾಲ್ಯದಿಂದಲೂ, ದಿಲೀಪ್ ಇತರರಿಗೆ ದಯೆ ತೋರುವ ಮತ್ತು ತನ್ನ ಸ್ನೇಹಿತರಿಗೆ ಏನನ್ನಾದರೂ ಕೊಡುವ ಉತ್ಸಾಹವನ್ನು ಹೊಂದಿದ್ದನು. ಹಾಗಾಗಿ ಆ ಊರಿನಲ್ಲಿರುವ ಎಲ್ಲರಿಗೂ ಅವನು ಗೊತ್ತು. ಶಾಲೆಯಲ್ಲಿ ಓದುವ ಸಮಯದಲ್ಲೂ ವಿದ್ಯಾರ್ಥಿಗಳಲ್ಲಿ ಯಾರಿಗಾದರೂ ಯಾವುದದರೂ ವಸ್ತುಗಳಿಲ್ಲದಿದ್ದರೆ ಸಹಾಯ ಮಾಡುವುದರಲ್ಲಿ ಶ್ರೇಷ್ಟನು. ದಿಲೀಪ್ ತನ್ನ ಶಾಲಾ ಶಿಕ್ಷಣವನ್ನು ಹಳ್ಳಿಯಲ್ಲಿ ಮುಗಿಸಿ ಅಂತಿಮ ವರ್ಷದಲ್ಲಿ ಉತ್ತಮ ಅಂಕಗಳನ್ನು ಪಡೆದನು. ಹಾಗಾಗಿ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು. ಅವನು ವಿದೇಶಕ್ಕೆ ಹೋಗುವುದರ ಕುರಿತಾಗಿ ಆ ಊರಿನ ಜನ ತುಂಬಾ ಚಿಂತಾಕ್ರಾಂತರಾಗಿದ್ದರು. ಆದಾಗ್ಯೂ, ಅವರು ವಿದೇಶದಲ್ಲಿ ಅಧ್ಯಯನ ಮಾಡಲೇ ಬೇಕಾದ ಪರಿಸ್ಥಿತಿ ಇತ್ತು, ಆದ್ದರಿಂದ ಅವರು ಹೋದರು. ಹಲವು ವರ್ಷಗಳ ನಂತರ ಅವರು ತಮ್ಮ ಅಧ್ಯಯನವನ್ನು ಮುಗಿಸಿ ಹಳ್ಳಿಗೆ ಮರಳಿದರು. ಗ್ರಾಮಸ್ಥರು ಅವರನ್ನು ಮರೆತೇ ಹೋಗಿದ್ದರು. ದಿಲೀಪನಿಗೆ ಆಶ್ಚರ್ಯವಾಯಿತು.

  

ಹೌದು, ಪ್ರಿಯರೇ! ನಮ್ಮನ್ನು ಪ್ರೀತಿಸುವವರು ಹೀಗೆಯೇ, ನಮ್ಮನ್ನು ಇಷ್ಟಪಡುವವರು ಮುಂದೊಂದು ದಿನ ನಮ್ಮನ್ನು ಮರೆತುಬಿಡುತ್ತಾರೆ. ಆದರೆ ನಮ್ಮನ್ನು ಸೃಷ್ಟಿಸಿದ ದೇವರು ನಮ್ಮನ್ನು ಎಂದಿಗೂ ಮರೆಯುವುದಿಲ್ಲ. ಸತ್ಯವೇದದಲ್ಲಿಯೂ ಸಹ ಆದಿ. 40:23 ರಲ್ಲಿ ಮುಖ್ಯಪಾನದಾಯಕನು ಯೋಸೇಫನನ್ನು ನೆನಪುಮಾಡದೆ ಮರೆತುಬಿಟ್ಟದ್ಧನ್ನು ನೋಡುತ್ತೇವೆ. ಆದರೂ ದೇವರು ಯೋಸೇಫನನ್ನು ಮರೆಯದೆ ನೆನಪು ಮಾಡಿಕೊಂಡು ಅವನ ಸೆರೆಯನ್ನು ಬದಲಾಯಿಸಿದರು. ಇಲ್ಲಿ ಬಂಧಿಸಲ್ಪಟ್ಟ ಯೋಸೇಫನನ್ನು ಆ ನಾಯಕನು ಮರೆತುಹೋದದ್ದನ್ನು ನೋಡುತ್ತೇವೆ. ಇಷಯನ ಮನೆಯಲ್ಲಿ ಏರ್ಪಡಿಸಿದ್ದ ಔತಣಕ್ಕೆ ಪ್ರವಾದಿಯಾದ ಸಮುವೇಲನು ಬಂದಿದ್ದಾಗ, ಇಷಯನು ತನ್ನ ಎಲ್ಲಾ ಮಕ್ಕಳನ್ನು ಆಹ್ವಾನಿಸಿದ್ದನು. ಆದರೆ ಕುರಿ ಮೇಯಿಸಲು ಕಾಡಿಗೆ ಹೋಗಿದ್ದ ತನ್ನ ಕೊನೆಯ ಮಗ ದಾವೀದನನ್ನು ಅವನ ಸ್ವಂತ ತಂದೆಯೇ ಮರೆತುಬಿಟ್ಟರು. ಅಂತೆಯೇ ಯೋಬ 19:14 ರಲ್ಲಿ ಯೋಬನ ಸ್ನೇಹಿತರು ಅವನನ್ನು ಮರೆತುಬಿಟ್ಟದ್ದನ್ನು ನೋಡುತ್ತೇವೆ. ಅಂದರೆ ಅಸ್ವಸ್ಥನಾಗಿದ್ದ ಯೋಬನನ್ನು ಸ್ನೇಹಿತರು ಮರೆತರು. ಆದರೆ ದೇವರು ಯೋಬನನ್ನು ನೆನಪಿಸಿಕೊಂಡರು ಮತ್ತು ಅವನ ಸೆರೆಯನ್ನು ಬದಲಾಯಿಸಿದರು.

 

ಹೌದು, ಪ್ರಿಯರೇ! ನಾವು ಅನಾರೋಗ್ಯ, ಕೀಳರಿಮೆ ಅಥವಾ ಕಿರುಕುಳಕ್ಕೆ ಒಳಗಾದಾಗ ಜನರು, ಸ್ನೇಹಿತರು, ಸಂಬಂಧಿಕರು ನಮ್ಮನ್ನು ಮರೆತುಬಿಡಬಹುದು. ಆದರೆ ದೇವರು ನಮ್ಮನ್ನು ಎಂದಿಗೂ ಮರೆಯುವುದಿಲ್ಲ. ಆದ್ದರಿಂದ, ನಾವು ಮನುಷ್ಯರಲ್ಲಿ ಭರವಸವಿಡುವದಕ್ಕಿಂತ ಯೆಹೋವನನ್ನು ಆಶ್ರಯಿಸುವದು ಒಳ್ಳೇದು. ಮತ್ತು ಕರ್ತನು ನಮ್ಮನ್ನು ನೋಡಿ "ಇಸ್ರಾಯೇಲೇ, ನಿನ್ನನ್ನು ಮರೆತುಬಿಡೆನು" ಎಂದು ಯೆಶಾಯ 44:21 ರಲ್ಲಿ ಹೇಳಿದ್ದಾರೆ. ದೇವರನ್ನು ನಂಬೋಣ! ಜೀವನದಲ್ಲಿ ಮೇಲೇರೋಣ!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ಪ್ರತಿ ತಾಲೂಕಿನಲ್ಲಿ 12 ಬಾಲಕರನ್ನು ಒಳಗೊಂಡ ಮಕ್ಕಳ ಕ್ಲಬ್ ಅನ್ನು ಪ್ರಾರಂಭಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet