By Village Missionary Movement
Thursday, 06-May-2021ಧೈನಂದಿನ ಧ್ಯಾನ(Kannada) – 06.05.2021
ಕ್ಷಮೆಯ ಮಹಿಮೆ
"...ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ." - ಕೊಲೊಸ್ಸೆ 3:13
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾಗಿದ್ದ ಶ್ರೀ.ನೆಲ್ಸನ್ ಮಂಡೇಲಾ ರವರು ಸುದೀರ್ಘ ಹೋರಾಟದ ನಂತರ ಅಧ್ಯಕ್ಷರಾದರು. ಒಂದು ದಿನ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ನಗರದ ರೆಸ್ಟೋರೆಂಟ್‌ಗೆ ಹೋದರು. ಎಲ್ಲರೂ ತಮ್ಮ ನೆಚ್ಚಿನ ಆಹಾರವನ್ನು ಆರ್ಡರ್ ಕೊಟ್ಟು ಕುಳಿತುಕೊಂಡಿದ್ದರು. ಆಗ ಆಕಸ್ಮಿಕವಾಗಿ ಎದುರಿನ ಟೇಬಲ್ ಗಮನಿಸಿದ ಅಧ್ಯಕ್ಷರು ಆಹಾರಕ್ಕಾಗಿ ಅಲ್ಲಿ ಒಬ್ಬನೇ ಕಾಯುತ್ತಿರುವುದನ್ನು ನೋಡಿ, ತನ್ನ ಸಿಬ್ಬಂದಿಯನ್ನು ಕಳುಹಿಸಿ ತನ್ನೊಂದಿಗೆ ಬಂದು ಒಟ್ಟಿಗೆ ಊಟ ಮಾಡುವಂತೆ ಹೇಳಿ ಕಳುಹಿಸಿದರು. ಅವರು ಅದರಂತೆಯೇ ತನ್ನ ಆಹಾರದೊಂದಿಗೆ ಬಂದು ಕುಳಿತು ಊಟ ಮಾಡಿ ನಂತರ ಹೊರಟುಹೋದರು. ಆಗ ಒಬ್ಬ ಸಿಬ್ಬಂದಿ ಅಧ್ಯಕ್ಷನಿಗೆ, “ಆ ಮನುಷ್ಯನು ತುಂಬಾ ಅನಾರೋಗ್ಯದಿಂದ ಕಾಣುತ್ತಾನೆ. ಅವನು ತಿನ್ನುತ್ತಿದ್ದಂತೆ ಎರಡೂ ಕೈಗಳು ನಡುಗುತ್ತಿದ್ದವು ” ಎಂದನು.
ಅದಕ್ಕೆ ಅಧ್ಯಕ್ಷರು "ಸೈನಿಕನೇ, ಅದಲ್ಲ ವಿಷಯ. ನಿಜ ಏನು ಗೊತ್ತಾ? ನಾನು ಮೊದಲು ಜೈಲಿನಲ್ಲಿದ್ದಾಗ, ಈ ವ್ಯಕ್ತಿ ನನ್ನ ಜೈಲು ಕಾವಲುಗಾರನಾಗಿದ್ದರು. ಅವರು ಆಗಾಗ ನನ್ನನ್ನು ಬಹಳ ಪೀಡಿಸುತ್ತಿದ್ದರು. ಅವರು ಹಾಗೆ ಹಿಂಸೆಪಡಿಸುತ್ತಿದ್ದಾಗಲೆಲ್ಲಾ ನಾನು ಕಿರುಚುತ್ತಾ, ಆಯಾಸಗೊಂಡು, ಕೊನೆಯಲ್ಲಿ ಸ್ವಲ್ಪ ಕುಡಿಯಲು ನೀರು ಕೇಳುತ್ತಿದ್ದೆನು. ಇದೇ ವ್ಯಕ್ತಿ ಆ ಸಮಯದಲ್ಲಿ ನನ್ನ ಬಳಿಗೆ ಬಂದು ನನ್ನ ತಲೆಯ ಮೇಲೆ ಮೂತ್ರ ವಿಸರ್ಜಿಸಿ ಹೊರಟು ಹೋಗುತ್ತಿದ್ದರು. ನಾನು ಈಗ ದಕ್ಷಿಣ ಆಫ್ರಿಕಾದ ಅಧ್ಯಕ್ಷನಾಗಿರುವುದರಿಂದ, ನಾನು ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ನೆನೆಸಿ ಅವನು ನಡುಗುತ್ತಿದ್ದನು. ಆದರೆ ಇದು ನನ್ನ ಅಭ್ಯಾಸವಲ್ಲ. ಪ್ರತೀಕಾರದ ಮನಸ್ಥಿತಿ ಎಂದಿಗೂ ಒಂದು ರಾಷ್ಟ್ರವನ್ನೋ, ಅಥವಾ ಒಂದು ವ್ಯಕ್ತಿಯನ್ನೋ ತಟ್ಟಿ ಎಬ್ಬಿಸುವುದಿಲ್ಲ; ನಾಶಪಡಿಸುತ್ತದೆ. ಅದೇ ಸಮಯದಲ್ಲಿ, ಕೆಲವು ವಿಷಯಗಳಲ್ಲಿ ಮನಸ್ಸಿನ ಸಹಿಷ್ಣುತೆಯು, ದೊಡ್ಡ ಸಾಮ್ರಾಜ್ಯಗಳನ್ನು ಸೃಷ್ಟಿಸುತ್ತದೆ" ಎಂದರು ಮಂಡೇಲಾ.
ಹೌದು, ಪ್ರಿಯರೇ! ನಮಗೆ ಮೂಲಮಾದರಿಯಾದ ಯೇಸು ಕ್ರಿಸ್ತನು ತನ್ನನ್ನು ಶಿಲುಬೆಗೇರಿಸಿದವರಿಗಾಗಿ ಹೀಗೆ ಪ್ರಾರ್ಥಿಸಿದರು, "ತಂದೆಯೇ, ಇವರನ್ನು ಕ್ಷಮಿಸು, ಇವರು ಏನು ಮಾಡುತ್ತಿದ್ದಾರೆಂದು ಇವರಿಗೆ ತಿಳಿದಿಲ್ಲ" ಎಂದು. ನಾವು ಕೂಡ ಅನೇಕ ಸಂದರ್ಭಗಳಲ್ಲಿ ಮತ್ತೊಬ್ಬರಿಂದ ನಮಗೆ ಉಂಟಾಗುವ ಆಘಾತ, ಮತ್ತು ಸಂಕಟಗಳ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೇವೆ. ನಾನು ಅನ್ಯಾಯವಾಗಿ ಶಿಕ್ಷೆ ಅನುಭವಿಸುತ್ತಿದ್ದೇನೆ ಎಂಬ ಗೊಣಗಾಟದಿಂದ ನಾವು ಮತ್ತೊಬ್ಬರ ಮೇಲೆ ಕಹಿಯೊಂದಿಗೆ ಜೀವಿಸುತ್ತಿದ್ದೇವೆ. ಆದರೆ ಸತ್ಯವೇದವು ಹೇಳುತ್ತದೆ ನಾವು ಇತರರ ತಪ್ಪುಗಳನ್ನು ಕ್ಷಮಿಸಿದರೆ ನಮ್ಮ ದ್ರೋಹಗಳು ಕ್ಷಮಿಸಲ್ಪಡುತ್ತವೆ ಎಂದು!
ಕ್ಷಮಿಸದಿರುವುದು ಎಂಬುದು ನಮಗೆ ನಾವೇ ತೋಡಿಕೊಳ್ಳುವ ಹಳ್ಳ. ಆದ್ದರಿಂದ ಬರುವ ಕಹಿ, ದ್ವೇಷ, ಕೋಪ, ಆತ್ಮ ಕರುಣೆ ಇವೆಲ್ಲವು ನಮ್ಮನ್ನು ನೋಯಿಸಿ ಮತ್ತೊಬ್ಬರನ್ನೂ ನೋಯಿಸುತ್ತದೆ. ಅಷ್ಟು ಮಾತ್ರವಲ್ಲದೆ ಅನೇಕ ವಿಧವಾದ ರೋಗಗಳಿಗೆ ಮೂಲ ಕಾರಣವಾಗಿದೆ. ಆದ್ದರಿಂದ ನಾವು ಈ ಭೂಮಿಯ ಮೇಲೆ ಸಂತೋಷದಿಂದ ಬದುಕಬೇಕಾದರೆ, ಕ್ರಿಸ್ತನು ನಮ್ಮನ್ನು ಕ್ಷಮಿಸಿದಂತೆ ನಾವು ಇತರರನ್ನು ಕ್ಷಮಿಸಬೇಕು. ಲೆಕ್ಕ ನೋಡಿಯೋ, ಕಾರಣವನ್ನು ಹುಡುಕಿಯೋ ಕ್ಷಮಿಸುವುದಲ್ಲ ಕ್ಷಮಾಪಣೆ. ಈ ಭೂಮಿಯ ಮೇಲೆ ನಾವು ನಿರಾತಂಕವಾಗಿ, ಆರಾಮದಾಯಕವಾಗಿ ಬದುಕಬೇಕಾದರೆ, ಕ್ರಿಸ್ತನ ಸ್ವರೂಪವನ್ನು ಬಹಿರಂಗಪಡಿಸಲು “ಪ್ರೀತಿ” ಎಂಬ ಪ್ರೀತಿಯ ಬೆಂಕಿಯು ನಮ್ಮೊಳಗೆ ಉರಿಯುತ್ತಲೇ ಇರಬೇಕು.
- Mrs. ವಸಂತಿ ರಾಜಮೋಹನ್
ಪ್ರಾರ್ಥನಾ ಅಂಶ:-
ಪ್ರತೀ ಶನಿವಾರವೂ ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ಮಕ್ಕಳ ವಿಶೇಷ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಅನೇಕ ಚಿಕ್ಕ ಮಕ್ಕಳು ಕರ್ತನಲ್ಲಿ ನೆಲೆಗೊಳ್ಳುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482