Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.12.2024
Share:

By Village Missionary Movement

Thursday, 12-Dec-2024

ಧೈನಂದಿನ ಧ್ಯಾನ(Kannada) – 12.12.2024

 

ಮೊಣಕಾಲಿನ ಯೋಧ

 

"…ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ" - ಯೆಶಾಯ 35:3

 

ಅಮೇರಿಕನ್ ಚರ್ಚ್ ಇತಿಹಾಸದಲ್ಲಿ ಪರಿಶುದ್ಧ ದೇವ ಮನುಷ್ಯರು ಎಂದು ಹೆಸರುಗೊಂಡವರು ಅನೇಕರಿದ್ದಾರೆ. ಅವರಲ್ಲಿ ಜಾನ್ ಹೈಡ್ (John Hyde) ಎಂಬವರು ಒಬ್ಬ ವಿಜ್ಞಾಪನೆಯ ಪ್ರಾರ್ಥನಾ ಯೋಧ. ಅವರ ಪ್ರಾರ್ಥನಾ ಕೋಣೆಯೇ ಅವರ ವಾಸದ ಸ್ಥಳವಾಗಿತ್ತು. ಅಲ್ಲಿ ಅವರು ದೇವರೊಂದಿಗೆ ಸಂತೋಷವಾಗಿದ್ದರು, ಅಲ್ಲಿ ಅವರು ಪ್ರಲಾಪಿಸಿ ಅತ್ತರು, ಅಲ್ಲಿ ಅವರು ಅಭಿವೃದ್ಧಿಯಾದರು. ಕಠಿಣ ಹೃದಯವುಳ್ಳ ಪಾಪಿಗಳಿಗಾಗಿ ಪ್ರಾರ್ಥನಾ ಕೋಣೆಯಲ್ಲಿ ಅವರು ಅಳುವುದನ್ನು ಅನೇಕರು ಕೇಳಿದ್ದಾರೆ. ಮಾತಿನಲ್ಲಿ ಹೇಳಲಾಗದಂತಹ ನಿಟ್ಟುಸಿರಿನೊಂದಿಗೆ ಪ್ರಾರ್ಥಿಸುವುದನ್ನು ಅರಿತಿದ್ದರು. ಒಮ್ಮೆ ಮೊಣಕಾಲೂರಿ ಪ್ರಾರ್ಥನೆ ಮಾಡಿ ಎದ್ದಾಗ 36 ಗಂಟೆ ಕಳೆದಿತ್ತು. ಮೊಣಕಾಲುಗಳ ಮೇಲೆ ಕುಳಿತು ಪ್ರಾರ್ಥಿಸುವಾಗ ಅವರ ಪಾದಗಳು ಒಂಟೆಯ ಪಾದಗಳಂತೆ ಕಾಣುತ್ತಿದ್ದವು. ಆತನ ವಸ್ತ್ರದ ಮೊಣಕಾಲಿನ ಭಾಗ ಸವೆದು ಹರಿದಿತ್ತು. ಈ ಮೊಣಕಾಲಿನ ಯೋಧ ನಮ್ಮ ಭಾರತದಲ್ಲಿ 17 ವರ್ಷಗಳಿಂದ ಜೀವಿಸಿದ್ದಾರೆ. ಅವರು ನಮಗಾಗಿ ಸುರಿಸಿದ ಕಣ್ಣೀರಿನ ಪ್ರಾರ್ಥನೆಯ ಮೇಲೆಯೇ ಇಂದಿನ ಸಭೆಗಳು ನಿರ್ಮಿಸಲ್ಪಟ್ಟಿವೆ ಎಂದು ನಾನು ನಂಬುತ್ತೇನೆ.

 

ಸತ್ಯವೇದದಲ್ಲಿ, ಈ ರೀತಿ ಕಣ್ಣೀರು ಸುರಿಸುತ್ತಾ ಜನರಿಗಾಗಿ ಪ್ರಲಾಪಿಸಿದ ಪ್ರವಾದಿ ಯೆರೆಮಿಯ, "ನೀರು ಸುರಿದು ಸುರಿದು ನನ್ನ ಕಣ್ಣು ಇಂಗಿಹೋಗಿದೆ, ನನ್ನ ಕರುಳು ಕುದಿಯುತ್ತದೆ, ನನ್ನ ಜನವೆಂಬ ಯುವತಿಯು ಹಾಳಾಗಿ ಮಕ್ಕಳುಮರಿಗಳು ಪಟ್ಟಣದ ಚೌಕಗಳಲ್ಲಿ ಮೂರ್ಛೆ ಹೋದದರಿಂದ ನನ್ನ ಕರುಳು ಕರಗಿದೆ" ಎಂದು ಅಂಗಲಾಚುವುದನ್ನು ನಾವು ಪ್ರಲಾಪಗಳು 2 ರಲ್ಲಿ ಓದುತ್ತೇವೆ, ಹೌದು, ಪಾಪದಲ್ಲಿ ಬಂಧಿಯಾಗಿರುವ ಜನರ ದುಸ್ಥಿತಿಗೆ ಪರಿತಪಿಸುವ ಪ್ರಾರ್ಥನಾ ವೀರನ ಪ್ರಾರ್ಥನೆ ಪ್ರಲಾಪವಾಗಿಯೇ ಇರುತ್ತದೆ. ಅವರು ತಮ್ಮ ಮೊಣಕಾಲುಗಳಿಗೂ ಮತ್ತು ಕಣ್ಣುಗಳಿಗೂ ವಿಶ್ರಾಂತಿ ನೀಡಲು ಬಯಸುವುದಿಲ್ಲ.

 

ಪ್ರಿಯರೇ! ನಿಮ್ಮ ಪ್ರಾರ್ಥನಾ ಜೀವನ ಹೇಗಿದೆ? ಮೊಣಕಾಲೂರಿ ಪ್ರಾರ್ಥಿಸುವ ಅಭ್ಯಾಸ ನಿಮಗಿದೆಯೇ? ದಣಿವರಿಯದೆ ದುಡಿಯುವ ವ್ಯಕ್ತಿಯ ಪಾದಗಳು ಸೀಳು ಬಿಟ್ಟಿರುತ್ತವೆ. ಕಠಿಣವಾದ ಆಯುಧ ಹಿಡಿದು ದುಡಿಯುವವರ ಕೈ ಬೊಬ್ಬೆಯಿಂದ ತುಂಬಿರುತ್ತದೆ. ಅಂತೆಯೇ, ಹೆಚ್ಚು ಪ್ರಾರ್ಥನೆ ಮಾಡುವ ಜನರು ತಮ್ಮ ಮೊಣಕಾಲುಗಳ ಮೇಲೆ ಗಾಯಗಳನ್ನು ಹೊಂದಿರುತ್ತಾರೆ. ಹೀಗೆ ನಮ್ಮ ಮೊಣಕಾಲುಗಳು ಗಟ್ಟಿಯಾಗಿದ್ದರೆ, ನಮ್ಮ ಹೃದಯಗಳು ಮೃದುವಾಗಿರುತ್ತವೆ; ನಮ್ಮ ಮೊಣಕಾಲುಗಳು ಮೃದುವಾಗಿದ್ದರೆ, ನಮ್ಮ ಹೃದಯವು ಕಠಿಣವಾಗಿರುತ್ತದೆ. ಇಂದು ನಿಮ್ಮ ಮೊಣಕಾಲುಗಳನ್ನು ನೋಡಿರಿ. ಹೃದಯದ ಸ್ಥಿತಿಯನ್ನು ತಿಳಿದುಕೊಳ್ಳುತ್ತೀರಿ. ಎಲ್ಲಾ ಹೃದಯ ಸಮಸ್ಯೆಗಳು ಮೃದುವಾದ ಮೊಣಕಾಲುಗಳಿಂದ ಉಂಟಾಗುತ್ತವೆ. ಆದ್ದರಿಂದ ಮೊಣಕಾಲುಗಳನ್ನು ಹಾಕಿರಿ, ಪಾಪದ ಹೋರಾಟಗಳು ಮತ್ತು ಅನೇಕ ರೀತಿಯ ಸಮಸ್ಯೆಗಳ ಅಂತ್ಯವನ್ನು ನೋಡುತ್ತೀರಿ.

- Mrs. ಜೆಬಾ ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ನಾವು ಭೇಟಿ ನೀಡುವ ಎಲ್ಲಾ ಜಿಲ್ಲೆಗಳಲ್ಲಿ 30 ಮನೆ ಪ್ರಾರ್ಥನೆಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş