Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.12.2024
Share:

By Village Missionary Movement

Wednesday, 11-Dec-2024

ಧೈನಂದಿನ ಧ್ಯಾನ(Kannada) – 11.12.2024

 

ಆಶೀರ್ವಾದವನ್ನು ತಿಳಿಯಿರಿ

 

"...ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ" - ಗಲಾತ್ಯ 4:28

 

ಒಮ್ಮೆ ಒಂದು ಹಡಗಿನಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತುಂಬಾ ಸೋತುಹೋಗಿ ದಣಿದಿದ್ದರು . ಇದನ್ನು ನೋಡಿದ ಕ್ಯಾಪ್ಟನ್ ಅವರ ಬಳಿಗೆ ಬಂದು, "ಅಯ್ಯಾ, ನಾನು ನಿಮ್ಮನ್ನು ಎರಡು ದಿನಗಳಿಂದ ಗಮನಿಸುತ್ತಿದ್ದೇನೆ. ನೀವು ದಿನದಿಂದ ದಿನಕ್ಕೆ ತುಂಬಾ ಸುಸ್ತಾಗಿ ಕಾಣುತ್ತಿದ್ದೀರಿ! ನಿಮ್ಮ ಸಮಸ್ಯೆ ಏನು?" ಎಂದು ಕೇಳಿದರು. ಅದಕ್ಕೆ ಅವರು "ಅಯ್ಯಾ ನಾನು ಊರಿಂದ ತಂದಿದ್ದ ರೊಟ್ಟಿಯೆಲ್ಲಾ ಖಾಲಿ ಆಗೋಯ್ತು. ಇನ್ನು ಕೆಲವೇ ಒಣ ರೊಟ್ಟಿಗಳು ಬಾಕಿ ಇವೆ. ಇದೂ ಸಹ ಖಾಲಿ ಆದರೆ ಏನು ಮಾಡಬೇಕೆಂದು ನನಗೆ ತೋಚುತ್ತಿಲ್ಲ. ಇನ್ನೂ ಅನೇಕ ದಿನಗಳ ಪ್ರಯಾಣವಿದೆ!" ಎಂದು ಪ್ರಯಾಣಿಕನು ದುಃಖದ ಧ್ವನಿಯಲ್ಲಿ ಹೇಳಿದರು!  

  

ಇದನ್ನು ಕೇಳಿದ ಕ್ಯಾಪ್ಟನ್, "ಅಯ್ಯಾ, ನಿಮ್ಮ ಟಿಕೆಟ್ ಕೊಡಿ" ಎಂದು ಹೇಳಿ ಟಿಕೆಟ್ ತೆಗೆದುಕೊಂಡರು. "ಅಯ್ಯಾ, ಈ ಟಿಕೆಟ್ ಹೋಲ್ಡರ್‌ಗಳಿಗೆ ಹಡಗಿನಲ್ಲೇ ಊಟದ ವ್ಯವಸ್ಥೆ ಇರುತ್ತದೆ. ಇಗೋ ಇಲ್ಲಿ ಬರೆದಿದೆ ನೋಡಿ!" ಎಂದು ಅದರ ಮೇಲೆ ಬರೆದಿರುವುದನ್ನು ತೋರಿಸಿದರು. ಈ ಪ್ರಯಾಣಿಕನಿಗೆ ಏನೂ ಅರ್ಥವಾಗದೆ ಆಶ್ಚರ್ಯಪಟ್ಟರು. ತನ್ನ ಅಜ್ಞಾನಕ್ಕಾಗಿ ವಿಷಾದಿಸಿದರು.

 

ತಂದೆಯಾದ ದೇವರು ಪರಲೋಕದಲ್ಲಿನ ಸಕಲ ಆತ್ಮೀಯವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾನೆ ಎಂದು ಎಫೆಸದವರಿಗೆ 1:3 ರಲ್ಲಿ ಬರೆಯಲ್ಪಟ್ಟಿದೆ. ಭೂಮಿಯಲ್ಲಿರುವ ವಂಶಗಳೆಲ್ಲಾ ನಿನ್ನಲ್ಲಿ ಆಶೀರ್ವದಿಸಲ್ಪಡುತ್ತವೆ ಎಂದು ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾರೆ. ಅಪ್ಪಾ, ತಂದೆ ಎಂದು ಕರೆಯಲು ನಾವು ಪುತ್ರಸ್ವೀಕಾರದ ಆತ್ಮವನ್ನು ಪಡೆದಿದ್ದೇವೆ. ಶಿಲುಬೆಯಲ್ಲಿ ಯೇಸು ಕ್ರಿಸ್ತನು ನಮಗಾಗಿ ಎಲ್ಲವನ್ನೂ ಮಾಡಿ ಮುಗಿಸಿದ್ದಾರೆಂದು ನಾವು ಅರಿತಿದ್ದೇವೆ.

 

ಪ್ರಿಯರೇ! ಯೇಸು ಕ್ರಿಸ್ತನು ಶಿಲುಬೆಯಲ್ಲಿ ನಮಗಾಗಿ ಸಂಪಾದಿಸಿರುವ ಆಶೀರ್ವಾದಗಳನ್ನು ನಾವು ತಿಳಿದುಕೊಳ್ಳೋಣ. ನಾವು ತಿಳಿದುಕೊಳ್ಳದಿದ್ದರೆ, ನಮ್ಮ ಕರ್ತನು ನಮಗಾಗಿ ಇಟ್ಟಿರುವ ಆಧ್ಯಾತ್ಮಿಕ ಆಶೀರ್ವಾದಗಳನ್ನು ಹೇಗೆ ಪಡೆಯಬೇಕು ಶಕ್ತಿಯುತವಾದ ಕ್ರೈಸ್ತ ಜೀವನವನ್ನು ಹೇಗೆ ನಡೆಸಬೇಕು ಎಂದು ತಿಳಿಯದೆ ನಾವು ಸೈತಾನನ ಬಂಧನದಲ್ಲಿ ಸಿಲುಕಿ ಅವನಿಗೆ ಗುಲಾಮರಾಗಿ ಜೀವಿಸುತ್ತಿರುತ್ತೇವೆ. ಇಂದೇ ನಿಧಾನವಾಗಿರೋಣ. ಕರ್ತನು ನಮಗಾಗಿ ಇಟ್ಟಿರುವ ಆಶೀರ್ವಾದಗಳನ್ನು ಪಡೆದು ಸಂತೋಷದಿಂದ ಬದುಕಲು ಅರ್ಪಿಸಿಕೊಳ್ಳೋಣ. ದೇವರು ನಿಮ್ಮನ್ನು ಆಶೀರ್ವದಿಸಲಿ!

- Bro. ಶಿವ ಪಳನಿಸ್ವಾಮಿ

 

ಪ್ರಾರ್ಥನಾ ಅಂಶ:

ಈ ವರ್ಷದ ದರ್ಶನದ ಪ್ರಕಾರ ಅನೇಕ ಹಳ್ಳಿಗಳು, ರಾಜ್ಯಗಳು ಮತ್ತು ದೇಶಗಳಿಗೆ ಹೋಗಲು ದೇವರ ಸಹಾಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al