Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.12.2024
Share:

By Village Missionary Movement

Tuesday, 10-Dec-2024

ಧೈನಂದಿನ ಧ್ಯಾನ(Kannada) – 10.12.2024

 

ಉಚಿತವಾಗಿ ಕೊಡಿರಿ 

 

"…ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ" - ಮತ್ತಾಯ 10:8

  

ಇಂಗ್ಲೆಂಡಿನಲ್ಲಿ ಒಬ್ಬ ಸೇನಾ ಕಮಾಂಡರ್, ಸೈನಿಕರು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿದ್ದಾರಾ? ಎಂಬುದರಲ್ಲಿ ಹೆಚ್ಚು ಗಮನ ಹರಿಸುತ್ತಿದ್ದರು. ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದವರು ದೇಶಕ್ಕೂ ಮತ್ತು ದೇವರಿಗೂ ಯೋಗ್ಯರಲ್ಲ, ನಮ್ಮಲ್ಲಿರುವುದೆಲ್ಲವೂ ದೇವರು ಮತ್ತು ದೇಶವು ನೀಡಿದೆ. ಅದನ್ನು ದೇವರಿಗೆ, ದೇಶಕ್ಕೆ ಕೊಟ್ಟು ತೀರಿಸಿಕೊಳ್ಳಬೇಕು ಎಂದು ಸದಾ ಹೇಳುತ್ತಿದ್ದರು. ನಿಗದಿತ ಸಮಯಕ್ಕಿಂತ ಹೆಚ್ಚಾಗಿ ದೀಪ ಉರಿಯುತ್ತಿದೆ ಎಂದು ತಿಳಿದು ಅವರು ತನ್ನ ಸೈನಿಕನ ಕೋಣೆಗೆ ಹೋದರು. ಅಲ್ಲಿ ಒಬ್ಬ ಸೈನಿಕ ಧ್ಯಾನ ಮಾಡುತ್ತಾ ಹಾಗೇ ಮೇಜಿನ ಮೇಲೆ ಒರಗಿ ಮಲಗಿದ್ದರು. ಅವರ ಮೇಜಿನ ಮೇಲಿದ್ದ ಒಂದು ಕಾಗದದ ಮೇಲೆ, "ಇಷ್ಟೊಂದು ಸಾಲತೀರಿಸಬೇಕಾಗಿದೆ, ಇದನ್ನು ಯಾರು ನನಗಾಗಿ ತೀರಿಸುತ್ತಾರೆ?" ಎಂದು ಬರೆದಿತ್ತು. ಆ ಪೇಪರ್ ಅನ್ನು ನೋಡಿದ ದಳಪತಿ, "ನಾನು ಅದನ್ನು ಪಾವತಿಸುತ್ತೇನೆ" ಎಂದು ಸಹಿ ಹಾಕಿ ಬಂದರು! ಸೇನೆಯ ದಳಪತಿ ಬರೀ ಮಾತಿನಲ್ಲಿ ಮಾತ್ರವಲ್ಲ, ಕ್ರಿಯೆಗಳಲ್ಲಿಯೂ ಉತ್ತಮನು ಎಂಬುದನ್ನು ಇಡೀ ಸೇನೆಯವರೆಲ್ಲಾ ತಿಳಿದುಕೊಂಡರು. ಇಂದು ನಾವು ಮಾತಿನಲ್ಲಿ ಅಥವಾ ಕ್ರಿಯೆಯಲ್ಲಿ ಯಾವುದರಲ್ಲಿ ದೇವರನ್ನು ಗೌರವಿಸುತ್ತಿದ್ದೇವೆ? ಸ್ವಲ್ಪ ಯೋಚಿಸೋಣ.

      

ದೇವರು ನಮಗೆ ಕೊಟ್ಟಿದ್ದೆಲ್ಲವೂ ಉಚಿತವೇ. ಕರ್ತನಾದ ಯೇಸು ಕ್ರಿಸ್ತನು ಹೇಳುತ್ತಾರೆ, ನೀವು ಉಚಿತವಾಗಿ ಸ್ವೀಕರಿಸಿದ್ದನ್ನು ಉಚಿತವಾಗಿ ನೀಡಿ ಎಂದು. ಯೇಸು ಕ್ರಿಸ್ತನು ನಮಗೆ ಅನೇಕ ವಿಷಯಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಆತನು ನಮಗೆ ನಂಬಿಕೆ, ರಕ್ಷಣೆ, ಪವಿತ್ರಾತ್ಮ ಮತ್ತು ಪ್ರಪಂಚದ ಎಲ್ಲಾ ಆಶೀರ್ವಾದಗಳನ್ನು ಕೊಟ್ಟಿದ್ದಾರೆ.

      

ಅವರು ನಮಗೆ ಕೊಟ್ಟದ್ದನ್ನು ಇತರರು ಸ್ವೀಕರಿಸಬೇಕೆಂದು ನಾವು ಕೊಡುವವರಾಗಿ ವರ್ತಿಸಬೇಕು ಎಂದು ದೇವರು ಬಯಸುತ್ತಿದ್ದಾರೆ. ದೇವರು ನಮಗೆ ಕೊಟ್ಟದ್ದನ್ನು ನಾವು ಇತರರಿಗೆ ನೀಡುತ್ತೇವಾ? ಒಂದು ತಲಾಂತನ್ನು ಪಡೆದವನು ಅದನ್ನು ತನ್ನಲ್ಲಿಯೇ ಇಟ್ಟುಕೊಂಡಂತೆ ನಾವು ಅದನ್ನು ಬಚ್ಚಿಟ್ಟಿದ್ದೇವಾ? ಸತ್ಯವೇದದಲ್ಲಿ, ಕೊಡುವುದು ಹೇಗೆಂದು ತಿಳಿದವರು ದೇವರಿಗೆ ಪ್ರಿಯರಾದರು, ಸ್ನೇಹಿತರಾದರು ಮತ್ತು ಹೃದಯಕ್ಕೆ ತಕ್ಕವರಾಗಿ ಮಾರ್ಪಟ್ಟರು. ಅವರಲ್ಲಿ ಅಬ್ರಹಾಮನು, ಇಸಾಕನು, ದಾವೀದನು, ಯೋಸೇಫನು, ಆದಿ ಅಪೊಸ್ತಲರು, ಎರಡು ನಾಣ್ಯಗಳನ್ನು ನೀಡಿದ ಮಹಿಳೆ, ಐದು ರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ಕೊಟ್ಟ ಹುಡುಗ.

 

ಸತ್ಯವೇದದಲ್ಲಿ ಕೊಂಡುಕೊಂಡವರು, ಕೊಳ್ಳಲು ಯತ್ನಿಸಿದವರು ತಾವು ಬಚ್ಚಿಟ್ಟದ್ದು ದೇವರಿಗೆ ಹೇಗೆ ಗೊತ್ತಾಗುತ್ತದೆ ಎಂದು ಸುಳ್ಳು ಹೇಳಿದವರು, ಹೇಗೆ ನಾಶವಾದರು ಎಂಬುದನ್ನು ನೋಡುತ್ತೇವೆ. ಇವರಲ್ಲಿ ಬಿಳಾಮನು, ಗೇಹಜಿ ಮತ್ತು ಅನನೀಯ ಸಪ್ಫೈರಳೆಂಬ ದಂಪತಿಗಳು ಇದ್ದಾರೆ. ಶಾಪಗ್ರಸ್ತವಾದದ್ದನ್ನು ಬಚ್ಚಿಟ್ಟ ಆಕಾನನು. ಮತ್ತಾಯ 25:31-46 ನೇ ವಚನಗಳಲ್ಲಿ ಹೇಳಲಾಗಿದೆ. ನಾವು ಉಚಿತವಾಗಿ ನೀಡುವವರಾಗಿದ್ದರೆ, ನಾವು ಬಲಪಾರ್ಶ್ವದಲ್ಲಿರುವ ಜನರಂತೆ ನಿತ್ಯ ಜೀವವನ್ನು ಪಡೆಯುತ್ತೇವೆ. ದೇವರು ಅಂತಹ ಕೃಪೆಯನ್ನು ನಮಗೆ ಅನುಗ್ರಹಿಸಲಿ. ಆಮೆನ್.

- Mr. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಸೇವಕರ ತರಬೇತಿ ಶಿಬಿರಕ್ಕೆ ಬಂದಿರುವ ಉತ್ತರ ರಾಜ್ಯದ ಮಿಷನರಿಗಳು ದೇವರಿಗಾಗಿ ಎದ್ದು ಪ್ರಕಾಶಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet