Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.12.2024
Share:

By Village Missionary Movement

Monday, 09-Dec-2024

ಧೈನಂದಿನ ಧ್ಯಾನ(Kannada) – 09.12.2024

 

TRY TEARS 

 

"ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು" - ಕೀರ್ತನೆ 126:5

 

ರಕ್ಷಣಾ ಸೇನೆ ಎಂಬ ಒಂದು ದೊಡ್ಡ ಸೇವೆಯ ಚಳುವಳಿಯು ವಿಲಿಯಂ ಬೂತ್ ರವರಿಂದ ಪ್ರಾರಂಭಿಸಲ್ಪಟ್ಟು ಅನೇಕ ದೇಶಗಳಿಗೆ ಹರಡಿತು. ದೇವರು ಅನೇಕ ಜನರನ್ನು ಸಭೆಗಳಾಗಿ ಒಟ್ಟುಗೂಡಿಸಿ ದೊಡ್ಡ ಕಾರ್ಯಗಳನ್ನು ಮಾಡಿದರು. ಈ ಸೇವೆಯಲ್ಲಿ ಬಹಳವಾಗಿ ಸಮರ್ಪಣೆಯುಳ್ಳ ಒಬ್ಬ ಮಿಷನರಿಯನ್ನು ಕಠಿಣ ಹೃದಯದ ಜನರ ನಡುವೆ ಸೇವೆ ಮಾಡಲು ಕಳುಹಿಸಲಾಯಿತು. ಕೆಲವು ವರ್ಷಗಳು ಕಳೆದವು. ಆ ಜನರಲ್ಲಿ ಯಾರೂ ಮನತಿರುಗಲೇ ಇಲ್ಲ. ಅವರು ಬಡತನದಲ್ಲಿ ದೊಡ್ಡ ತ್ಯಾಗದಿಂದ ಅಲ್ಲಿ ಸೇವೆ ಮಾಡಿದರು ಮತ್ತು ನೋವುಗಳನ್ನು ಸಹಿಸಿಕೊಂಡರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅವರು ತುಂಬಾ ಸೋತುಹೋದರು. ಅವರು ವಿಲಿಯಂ ಬೂತ್‌ಗೆ ಪತ್ರ ಬರೆದರು. ಅದರಲ್ಲಿ "ನಾಲ್ಕು ವರ್ಷಗಳಿಂದ ನಾನು ಇಲ್ಲಿ ಸೇವೆ ಮಾಡುತ್ತಿದ್ದೇನೆ. ನನಗೆ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಇಲ್ಲಿಗೆ ಬಂದ ನಂತರ ನನ್ನ ಮಗನೂ ಸತ್ತನು. ಅವನನ್ನು ಅಂತ್ಯ ಸಂಸ್ಕಾರ ಮಾಡಲು ಕೂಡ ನಾನು ಮತ್ತು ನನ್ನ ಹೆಂಡತಿ ಮಾತ್ರವೇ ಇದ್ದೆವು. ಯಾರೂ ಬರಲಿಲ್ಲ. ನಾನು ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆ ಎಂದು ತೋರುತ್ತಿದೆ. ಒಂದು ಆತ್ಮವೂ ಮನತಿರುಗಲಿಲ್ಲ ಮತ್ತು ಯಾವ ಪ್ರಯೋಜನವೂ ಇಲ್ಲ ನಾನು ಹಿಂತಿರುಗಿ ಬರಲು ಬಯಸುತ್ತೇನೆ" ಎಂದು ಅವರು ಬರೆದಿದ್ದರು. ವಿಲಿಯಂ ಬೂತ್ ಅವರು ತನಗೆ ಪತ್ರವನ್ನು ಕಳುಹಿಸುತ್ತಾರೆ ಎಂದು ನಿರೀಕ್ಷಿಸಿದ್ದರು, ಆದರೆ ಬೂತ್ ರವರು ಬರೆದದ್ದು ಕೇವಲ ಎರಡೇ ಮಾತುಗಳು (TRY TEARS) "ಕಣ್ಣೀರಿನಿಂದ ಪ್ರಯತ್ನಿಸು" ಎಂದು. ಇದನ್ನು ಓದಿದ ಸೇವಕರು ಹೃದಯವಿದ್ರಾವಕನಾಗಿ ಅಳುತ್ತಾ ಜನರಿಗಾಗಿ ಪ್ರಾರ್ಥಿಸಿದರು. ಕಠಿಣ ಹೃದಯದ ಜನರು ಗುಂಪು ಗುಂಪಾಗಿ ರಕ್ಷಿಸಲ್ಪಟ್ಟರು. ಒಂದು ಆತ್ಮವೂ ಇಲ್ಲ ಎಂದು ಚಿಂತಿಸುತ್ತಿದ್ದ ಆತನ ಮೂಲಕ ಆ ದೇಶದಲ್ಲಿ 100 ಚರ್ಚ್‌ಗಳನ್ನು ಸ್ಥಾಪಿಸಲು ದೇವರು ಸಹಾಯ ಮಾಡಿದರು. ಪ್ರವಾದಿಯಾದ ಯೆಹೆಜ್ಕೇಲನು ತನ್ನ ಪುಸ್ತಕದಲ್ಲಿ ಬರೆಯುವಾಗ, ದೇಶದ ಜನರಿಗಾಗಿ ನಿಟ್ಟುಸಿರು ಬಿಟ್ಟು ಅಳುತ್ತಾ ದೇವರ ಬಳಿ ಪ್ರಾರ್ಥಿಸುವ ಜನರ ಹಣೆಯ ಮೇಲೆ ದೇವದೂತರು ಗುರುತು ಹಾಕುವ ಹಾಗೆ ದರ್ಶನವನ್ನು ನೋಡುತ್ತಾರೆ. ಅಳುತ್ತಾ ಪ್ರಾರ್ಥಿಸುವ ಜನರನ್ನು ದೇವರು ಎದುರುನೋಡುತ್ತಿದ್ದಾರೆ. ಈ ಸತ್ಯವೇದ ಭಾಗದಲ್ಲಿ, ತನ್ನ ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿಷಯಗಳಿಗಾಗಿಯು ಮತ್ತು ಅಸಹನೀಯ ಪಾಪಗಳಿಗಾಗಿಯೂ, ಜನರ ಮಾನಸಾಂತರಕ್ಕಾಗಿಯೂ ಅವರು ತನ್ನ ಜನರನ್ನು ಪ್ರತ್ಯೇಕಿಸಿ ಅವರನ್ನು ಗುರುತಿಸುತ್ತಾರೆ. ಅವರ ಭದ್ರತೆಯು ಸ್ಥಿರ ಪಡಿಸಲಾಗಿದೆ. ದೇಶದ ಅನ್ಯಾಯವನ್ನು ನೋಡಿ ಪ್ರಾರ್ಥನೆ ಮಾಡದವರನ್ನು ನೋಡಿ ದೇವರು ದುಃಖ ಪಡುತ್ತಾರೆ. 

  

ಪ್ರಿಯರೇ! ಕಣ್ಣೀರಿನ ಪ್ರಾರ್ಥನೆಯು ತುಂಬಾ ಶಕ್ತಿಯುತವಾಗಿದೆ. ಬಹುಶಃ ನೀವು ಒಬ್ಬ ವ್ಯಕ್ತಿ, ಕುಟುಂಬ, ದೇಶ ಇವುಗಳ ರಕ್ಷಣೆಗಾಗಿ ಪ್ರಾರ್ಥಿಸಿ ಬದಲಾವಣೆಯನ್ನು ಕಾಣದೆ ಸೋತುಹೋಗಿದ್ದೀರಾ? (TRY TEARS) ಕಣ್ಣೀರಿನೊಂದಿಗೆ ಪ್ರಯತ್ನಿಸಿ. ದೇವರು ನಮ್ಮ ಕಣ್ಣೀರಿನ ಹನಿಗಳನ್ನು ಎಣಿಸಿಟ್ಟಿದ್ದಾರೆ. ಅದಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತಾರೆ. ಆಮೆನ್.

- Bro. ಮನೋಜ್ ಕುಮಾರ್

 

ಪ್ರಾರ್ಥನಾ ಅಂಶ:

25000 ಗ್ರಾಮಗಳಲ್ಲಿ ಸುವಾರ್ತೆ ಸಾರುವ ಯೋಜನೆಯಲ್ಲಿ ನಮ್ಮ ಸೇವಕರು ಹೋದ ಪ್ರತಿಯೊಂದು ಹಳ್ಳಿಯೂ ಕ್ರಿಸ್ತನಿಗೆ ಸ್ವಂತವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin