Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.12.2024
Share:

By Village Missionary Movement

Sunday, 08-Dec-2024

ಧೈನಂದಿನ ಧ್ಯಾನ(Kannada) – 08.12.2024

 

"...ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸುವರು." - ದಾನಿಯೇಲ 12:3

 

SPECIAL STAR 

 

ಏನು ಪುಟಾಣಿಗಳೇ, ಡಿಸೆಂಬರ್ ತಿಂಗಳು ಬಂದಾಗಿನಿಂದ ಒಂದೇ ಸಂಭ್ರಮ ತಾನೇ. ಮನೆಯಲ್ಲಿ ಸ್ಟಾರ್ ಕಟ್ಟಲು, ಹೊಸ ಡ್ರೆಸ್ ಕೊಳ್ಳಲು, ಪಟಾಕಿ ಕೊಳ್ಳಲು ಬ್ಯುಸಿಯಾಗಿದ್ದೀರಾ? ಸಂತೋಷದಲ್ಲಿ ಅರ್ಧ ವರ್ಷದ ಪರೀಕ್ಷೆಯನ್ನು ತಪ್ಪಿಸಿಕೊಳ್ಳಬೇಡಿ. ಚೆನ್ನಾಗಿ ಓದಿ ಪರೀಕ್ಷೆ ಬರೆಯಿರಿ. O. K ಬನ್ನಿ ಪುಟಾಣಿಗಳೇ. ಇಂದು ನಕ್ಷತ್ರ ನಮ್ಮೊಂದಿಗೆ ಮಾತನಾಡಲಿದೆ. ಏನು? ಕೇಳೋಕೆ ರೆಡಿ ತಾನೇ!

   

ನಾನು ಸ್ಟಾರ್ ಮಾತನಾಡುತ್ತಿದ್ದೇನೆ. ನಾನು ತುಂಬಾ ಪ್ರಕಾಶಮಾನವಾಗಿ ಮತ್ತು ಸುಂದರವಾಗಿದ್ದೇನಾ? ಹೌದು ಯೇಸಪ್ಪನ ಸೃಷ್ಟಿಯೆಲ್ಲಾ ಸೂಪರ್. ನೀವೂ ಸಹ ಎಷ್ಟು ಸುಂದರವಾಗಿದ್ದೀರಿ. ಯೇಸಪ್ಪ ನನ್ನನ್ನು ಸೃಷ್ಟಿಸಿದಾಗ, ನನ್ನನ್ನು ತುಂಬಾ ವ್ಯತ್ಯಾಸವಾಗಿ ಸೃಷ್ಟಿಸಿದರು ಯಾರಿಗೂ ತಿಳಿಯದಂತೆ ಸ್ಟೋರ್ ರೂಮಿನಲ್ಲಿ ಬಿಟ್ಟುಬಿಟ್ಟರು. ನನಗೆ ಆಗೆಲ್ಲಾ ತುಂಬಾ ಬೇಸರವಾಗುತ್ತಿತ್ತು. ನಾನು ರಾತ್ರಿಯಲ್ಲಿ ಕಿಟಕಿಯಿಂದ ನಕ್ಷತ್ರಗಳನ್ನು ನೋಡಿದಾಗ, ನಾನು ಸಹ ಅವರಂತೆ ಹೊಳೆಯುತ್ತೇನೆ, ನನ್ನನ್ನು ಮಾತ್ರ ಮರೆಯಾಗಿ ಇಟ್ಟಿದ್ದಾರಲ್ಲಾ ಎಂದು ನೆನೆಯುವಾಗ ತುಂಬಾ ಅಳು ಬರುತ್ತಿತ್ತು. ನನ್ನಂತೆ ನೀವು ಸಹ ಮರೆಯಾಗಿದ್ದೀರಾ? Don't worry ಒಂದು ಶುಭಸುದ್ದಿ ಹೇಳುತ್ತೇನೆ. ಒಂದು ದಿನ ಅವರು ನನ್ನನ್ನು ಹೊರಗೆ ಬಿಟ್ಟರು. ಪರಲೋಕವೇ ನನ್ನನ್ನು ಸಂಭ್ರಮಿಸಿತು. ಎಲ್ಲಾ ದೇವದೂತರೆಲ್ಲರೂ ನನ್ನನ್ನು ನೋಡುತ್ತಿದ್ದರು. ಯೇಸು ಕ್ರಿಸ್ತನು ಈ ಭೂಮಿಯಲ್ಲಿ ಮಗುವಾಗಿ ಜನಿಸಿದನೆಂದು ನಿಮಗೆ ತಿಳಿಸಲು ನನ್ನನ್ನು ಕಳುಹಿಸಲಾಗಿದೆ. ಯೇಸುವನ್ನು ಬಾಲಕನಾಗಿ ಗಿ ನೋಡಿದ ನನಗೆ ತುಂಬಾ ಸಂತೋಷ. ನನಗಷ್ಟೇ ಅಲ್ಲ ನಿಮಗೂ ಖುಷಿ ಅಲ್ವಾ. ಅಷ್ಟೇ ಅಲ್ಲ, ಆಕಾಶದ ನಕ್ಷತ್ರಗಳನ್ನು ಪರಿಶೋಧನೆ ಮಾಡುವವರೂ ಸಹ ನನ್ನನ್ನು ನೋಡಿ ಆಶ್ಚರ್ಯಪಟ್ಟರು ಪುಟಾಣಿಗಳೇ. ಅವರು ನನ್ನನ್ನು ನವಜಾತ ಶಿಶುವಾಗಿ ನೋಡಿದಾಗ, ಅವರು ಯೆಹೂದ್ಯರಿಗೆ ಒಬ್ಬ ರಾಜ ಜನಿಸಿದನೆಂದು ಅರಿತು ಅವರನ್ನು ಆರಾಧಿಸಲು ಹೊರಟರು. ದಾರಿ ತೋರಿಸಲು ಹೋದ ನನ್ನನ್ನು ಮರೆತು ರಾಜನು ಅರಮನೆಯಲ್ಲಿಯೇ ಹುಟ್ಟಿರಬೇಕು ಎಂದುಕೊಂಡು ಅರಮನೆಗೆ ಹೋದರು. ಹೊರಗೆ ಬಂದ ಅವರಿಗೆ ನಾನು ದಾರಿ ತೋರಿಸಿ, ಯೇಸು ಹುಟ್ಟಿದ ಸ್ಥಳದವರೆಗೂ ಕರೆತಂದೆ. ಯೇಸು ಬಾಲಕನಿಗೆ ಉಡುಗೊರೆಗಳನ್ನು ನೀಡಿದರು, ಅವರನ್ನು ಆರಾಧಿಸಿದರು ಮತ್ತು ಸಂತೋಷದಿಂದ ಮನೆಗೆ ಮರಳಿದರು. ಯೇಸು ಜನಿಸಿದ ಸ್ಥಳವನ್ನು ತೋರಿಸಲು ನಾನು ವಿಶೇಷವಾಗಿ ರಚಿಸಲ್ಪಟ್ಟಿದ್ದೇನೆ ಎಂದು ಯೋಚಿಸಲು ನನಗೆ ತುಂಬಾ ಸಂತೋಷವಾಯಿತು.

 

ಅದರಂತೆ ಪುಟಾಣಿಗಳೇ, ನೀವು ಕೂಡ ಯೇಸಪ್ಪನ ಸ್ವಾರೂಪ್ಯದಲ್ಲಿ ವಿಶೇಷವಾಗಿ ರಚಿಸಲ್ಪಟ್ಟಿದ್ದೀರಿ. ಇಂದಿಗೂ ಯೇಸುವನ್ನು ಅರಿಯದೆ ತಮ್ಮ ಮಾರ್ಗವನ್ನು ಬದಲಾಯಿಸುವ ಅನೇಕ ಜನರಿದ್ದಾರೆ. ನೀವು ಅವರಿಗೆ ಯೇಸುವನ್ನು ತೋರಿಸುವ ಮಾರ್ಗದರ್ಶಿಯಾಗಬೇಕೆಂದು ನಾನು ಬಯಸುತ್ತೇನೆ. ಪುಟಾಣಿಗಳೇ ನೀವು ಕೂಡ ನನ್ನಂತಹ ಮಿನುಗುವ ನಕ್ಷತ್ರವಾಗಿ ಯೇಸುವನ್ನು ಪ್ರತಿಬಿಂಬಿಸಲು ನನ್ನ ಶುಭಾಶಯಗಳು ಮೋಹನಾಂಗಿಗಳಿಗೆ ನನ್ನ ಶುಭಾಶಯಗಳು. Bye.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş